ಅನುಮಾನದ ಭೂತ: ಪೀಣ್ಯದಲ್ಲಿ ಪತ್ನಿ, ಹೆಣ್ಣು ಮಕ್ಕಳಿಬ್ಬರನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದ ಪೊಲೀಸ್ ಠಾಣೆ ಹೋಂ ಗಾರ್ಡ್!
- new waves technology
- Jan 8
- 1 min read
ಹೋಂಗಾರ್ಡ್ ಕೆಲಸ ಮಾಡುತ್ತಿದ್ದ ಆರೋಪಿ ಗಂಗರಾಜು ಪತ್ನಿ ಭಾಗ್ಯಮ್ಮ ಮಗಳಾದ 19 ವರ್ಷದ ನವ್ಯ ಹಾಗೂ ಅಕ್ಕನ ಮಗಳು 22 ವರ್ಷದ ಹೇಮಾವತಿಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಬೆಂಗಳೂರು: ಅನುಮಾನದ ಭೂತಕ್ಕೆ ಇಡೀ ಕುಟುಂಬವೇ ಬಲಿಯಾಗಿದೆ. ಹೌದು ಪತ್ನಿಯ ಶೀಲ ಶಂಕಿಸಿ ಗಂಡನೇ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ.
ಹೋಂಗಾರ್ಡ್ ಕೆಲಸ ಮಾಡುತ್ತಿದ್ದ ಆರೋಪಿ ಗಂಗರಾಜು ಪತ್ನಿ ಭಾಗ್ಯಮ್ಮ ಮಗಳಾದ 19 ವರ್ಷದ ನವ್ಯ ಹಾಗೂ ಅಕ್ಕನ ಮಗಳು 22 ವರ್ಷದ ಹೇಮಾವತಿಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ನಂತರ ಮಚ್ಚಿನ ಸಮೇತ ಪೀಣ್ಯ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮೂರು ಕೊಲೆಯನ್ನು ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಆರೋಪಿ ಗಂಗರಾಜು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದನು. ತಾನು ಕೆಲಸಕ್ಕೆ ಹೋದ ಬಳಿಕ ಪತ್ನಿ ಭಾಗ್ಯಮ್ಮ ಪರಪುರುಷನ ಜೊತೆ ಚಕ್ಕಂದವಾಡುತ್ತಿದ್ದಳು. ಈ ವಿಷಯ ನನ್ನ ಮತ್ತು ನನ್ನ ಅಕ್ಕನ ಮಗಳಿಗೆ ಇಬ್ಬರಿಗೂ ಗೊತ್ತಿತ್ತು. ಹೀಗಾಗಿ ಮೂವರನ್ನು ಹತ್ಯೆ ಮಾಡಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
Comments