top of page

ಅಮೆರಿಕ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್: ಮಾರ್ಚ್ ಅಂತ್ಯ ವೇಳೆಗೆ ಭಾರತಕ್ಕೆ ಆಗಮನ ಸಾಧ್ಯತೆ

  • Writer: new waves technology
    new waves technology
  • Mar 12
  • 1 min read

ಕಳೆದ ತಿಂಗಳು ಫ್ರಾನ್ಸ್ ಮತ್ತು ಜರ್ಮನಿ ಪ್ರವಾಸ ಕೈಗೊಂಡಿದ್ದ ವ್ಯಾನ್ಸ್ ಅವರು ಭಾರತಕ್ಕೆ ಆಗಮಿಸಿದರೆ ಉಪಾಧ್ಯಕ್ಷರಾದ ಬಳಿಕ ಅವರ ಎರಡನೇ ವಿದೇಶ ಪ್ರವಾಸ ಇದಾಗಿದೆ.

ನ್ಯೂಯಾರ್ಕ್: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ತಮ್ಮ ಪತ್ನಿ ಭಾರತೀಯ ಮೂಲದ ಉಷಾ ವ್ಯಾನ್ಸ್ ಅವರೊಂದಿಗೆ ವ್ಯಾನ್ಸ್ ಅವರು ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಪೊಲಿಟಿಕೊ ವರದಿಯೊಂದು ತಿಳಿಸಿದೆ.

ಕಳೆದ ತಿಂಗಳು ಫ್ರಾನ್ಸ್ ಮತ್ತು ಜರ್ಮನಿ ಪ್ರವಾಸ ಕೈಗೊಂಡಿದ್ದ ವ್ಯಾನ್ಸ್ ಅವರು ಭಾರತಕ್ಕೆ ಆಗಮಿಸಿದರೆ ಉಪಾಧ್ಯಕ್ಷರಾದ ಬಳಿಕ ಅವರ ಎರಡನೇ ವಿದೇಶ ಪ್ರವಾಸ ಇದಾಗಿದೆ.

ಅವರ ಪತ್ನಿ ಉಷಾ ವ್ಯಾನ್ಸ್ ಅವರ ಪೋಷಕರಾದ ಕ್ರಿಶ್ ಚಿಲುಕುರಿ ಮತ್ತು ಲಕ್ಷ್ಮಿ ಚಿಲುಕುರಿ 1970 ರ ದಶಕದ ಉತ್ತರಾರ್ಧದಲ್ಲಿ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿ ನೆಲೆಸಿದರು.

ಉಷಾ ಮತ್ತು ಜೆಡಿ ವ್ಯಾನ್ಸ್ ಅವರು ಯೇಲ್ ಕಾನೂನು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಭೇಟಿಯಾಗಿ ಪರಿಚಯವಾಗಿ ಪರಸ್ಪರ ಪ್ರೀತಿ ಹುಟ್ಟಿಕೊಂಡಿತು.

ಉಷಾ ಅವರು, ಅಮೆರಿಕ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಾನ್ ಜಿ ರಾಬರ್ಟ್ಸ್ ಮತ್ತು ಕೊಲಂಬಿಯಾ ಸರ್ಕ್ಯೂಟ್‌ನ ಜಿಲ್ಲಾ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶ ಬ್ರೆಟ್ ಕವನಾಗ್ ಅವರ ಕೈಕೆಳಗೆ ಕೆಲಸ ಮಾಡಿದ್ದಾರೆ.

ಅವರು ಯೇಲ್ ವಿಶ್ವವಿದ್ಯಾಲಯದಿಂದ ಪದವಿ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ, ಗೇಟ್ಸ್ ಕೇಂಬ್ರಿಡ್ಜ್ ವಿದ್ವಾಂಸರು ಕೂಡ ಆಗಿದ್ದರು.

댓글


bottom of page