top of page

'ಅವರಿಗೆ ಅವಕಾಶ ಸಿಗದಿರುವುದು ದುರದೃಷ್ಟಕರ': ಟೀಂ ಇಂಡಿಯಾದ ನಿಲುವಿಗೆ RCB ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಕಿಡಿ

  • Writer: new waves technology
    new waves technology
  • Jul 3
  • 2 min read
ಐರ್ಲೆಂಡ್ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಸೋತ ನಂತರ, ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಇನ್ನೂ ಗೆಲುವಿನ ರುಚಿ ನೋಡಿಲ್ಲ. ಅವರ ಮೊದಲ ಟಿ20ಐ ಮಳೆಯಿಂದ ರದ್ದಾಗಿದೆ.
ಐರ್ಲೆಂಡ್ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಸೋತ ನಂತರ, ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಇನ್ನೂ ಗೆಲುವಿನ ರುಚಿ ನೋಡಿಲ್ಲ. ಅವರ ಮೊದಲ ಟಿ20ಐ ಮಳೆಯಿಂದ ರದ್ದಾಗಿದೆ.

ಭಾರತೀಯ ಕ್ರಿಕೆಟ್ ತಂಡಕ್ಕೆ 15 ವರ್ಷದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದರೂ, ಐರ್ಲೆಂಡ್ ಮತ್ತು ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿಲ್ಲ. ಇದೀಗ ಕ್ರಿಕೆಟ್ ಜಗತ್ತಿನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. 2026ರ ಟಿ20 ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್ ಸತತ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಇದೀಗ ರವಿಶಾಸ್ತ್ರಿ, ಮೈಕೆಲ್ ವಾಘನ್ ಮತ್ತು ಅಲಸ್ಟೈರ್ ಕುಕ್ ಅವರಂತಹ ಆಟಗಾರರು ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧದ ಎರಡು ಟಿ20ಐ ಸರಣಿಯಲ್ಲಿಯೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಚೇತೇಶ್ವರ ಪೂಜಾರ ಮತ್ತು ಸಬಾ ಕರೀಮ್ ಅವರಂತಹವರು ಈಗಲೇ ಸೂರ್ಯವಂಶಿ ಸೇರ್ಪಡೆ ಬೇಡೆ ಎಂದಿದ್ದಾರೆ.

ವೈಭವ್ ಸೂರ್ಯವಂಶಿ ಅವರು ಹಂತ ಹಂತವಾಗಿ ಪ್ರಗತಿ ಸಾಧಿಸಬೇಕೆಂಬುದು ಭಾರತದ ಆಡಳಿತ ಮಂಡಳಿಯ ಅಭಿಪ್ರಾಯವಾಗಿದೆ. 'ಅವರು (ಸೂರ್ಯವಂಶಿ) ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಂಪೂರ್ಣ ಸಿದ್ಧರಾಗಿದ್ದಾರೆ; ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಮೂರು ತಿಂಗಳ ಹಿಂದೆ ನಾವು ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಸಂಜು ಸ್ಯಾಮ್ಸನ್' ಎಂದು ಭಾರತದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಹೇಳಿದ್ದಾರೆ.

'ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು; ಆಟಗಾರರಿಗೆ ಆತ್ಮವಿಶ್ವಾಸ ತುಂಬುವುದು ಹಾಗೂ ತಂಡದಲ್ಲಿ ಅವರಿಗೆ ದೀರ್ಘಕಾಲದವರೆಗೆ ಅವಕಾಶ ನೀಡಲು ನಾವು ಬಯಸುತ್ತೇವೆ ಎಂಬ ಸಂದೇಶವನ್ನು ರವಾನಿಸುವುದು ಮುಖ್ಯ. ವೈಭವ್ ಆಡುವುದನ್ನು ನೋಡಲು ನಾವೆಲ್ಲರೂ ಉತ್ಸುಕರಾಗಿದ್ದೇವೆ, ಆದರೆ ಅವರು ಕೂಡ ಪ್ರಕ್ರಿಯೆಯನ್ನು ಪೂರೈಸಬೇಕಾಗುತ್ತದೆ. ಅವರ ಸಾಮರ್ಥ್ಯದ ಬಗ್ಗೆ ಖಂಡಿತವಾಗಿಯೂ ಯಾವುದೇ ಸಂಶಯವಿಲ್ಲ' ಎಂದಿದ್ದರು.

ದಕ್ಷಿಣ ಆಫ್ರಿಕಾದ ದಂತಕತೆ ಎಬಿ ಡಿವಿಲಿಯರ್ಸ್ ರಯಾನ್ ಟೆನ್ ಡೋಸ್ಚೇಟ್ ಅವರ ಹೇಳಿಕೆಗಿಂತ ಭಿನ್ನರಾಗಿದ್ದಾರೆ. 'ಅವರನ್ನು ಯಾವಾಗ ಬೆಂಚ್‌ನಿಂದ ಬಿಡುಗಡೆ ಮಾಡಲಾಗುತ್ತದೆ? ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನುಭವ ಪಡೆಯಲು ಐರ್ಲೆಂಡ್ ಸರಣಿ ಅವರಿಗೆ ಸೂಕ್ತ ಅವಕಾಶವಾಗಿತ್ತು. ಆದರೆ, ಅವರಿಗೆ ಅವಕಾಶ ಸಿಗದಿರುವುದು ದುರದೃಷ್ಟಕರ. ಸೂರ್ಯವಂಶಿ ಇತರ ಆಟಗಾರರಂತೆ ಈ ಪ್ರಕ್ರಿಯೆಯ ಮೂಲಕ ಹೋಗಬೇಕು ಎಂದು ರಯಾನ್ ಟೆನ್ ಡೋಸ್ಚೇಟ್ ಹೇಳುವುದು ನನಗೆ ಸರಿ ಎನಿಸಲಿಲ್ಲ. ಅತ್ಯುತ್ತಮ ಐಪಿಎಲ್ ಆವೃತ್ತಿ ನಂತರ, ಸ್ವಲ್ಪ ಅನುಭವವನ್ನು ಪಡೆಯಲು ಅವರನ್ನು ಆಡಿಸುವ ಸಮಯ ಬಂದಿದೆ. ವಿಶೇಷವಾಗಿ ಐರ್ಲೆಂಡ್‌ನಂತಹ ಕೆಳ ಶ್ರೇಯಾಂಕದ ತಂಡದ ವಿರುದ್ಧ ಆಡಿಸಬೇಕಿತ್ತು' ಎಂದು ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಐರ್ಲೆಂಡ್ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಸೋತ ನಂತರ, ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಇನ್ನೂ ಗೆಲುವಿನ ರುಚಿ ನೋಡಿಲ್ಲ. ಅವರ ಮೊದಲ ಟಿ20ಐ ಮಳೆಯಿಂದ ರದ್ದಾಗಿದೆ.

'ಟೀಂ ಇಂಡಿಯಾಗೆ ಸ್ವಲ್ಪ ಕೆಲಸವಿದೆ. ಅವರು ಮತ್ತೆ ಒಗ್ಗೂಡಬೇಕು, ಪುನರ್ರಚಿಸಬೇಕು ಮತ್ತು ಯುಕೆಯಲ್ಲಿ ಆಡಲು ಒಂದು ವಿಧಾನವನ್ನು ಕಂಡುಹಿಡಿಯಬೇಕು. ಐಪಿಎಲ್‌ನಂತೆ ಹೈ ಸ್ಕೋರ್‌ಗಳು ಇಲ್ಲದ ಪರಿಸ್ಥಿತಿಗಳಲ್ಲಿ ಇದು ಸುಲಭವಲ್ಲ. ನೀವು ಅಲ್ಲಿ 250 ಮತ್ತು 260 ರನ್‌ಗಳನ್ನು ತಲುಪಲು ಸಾಧ್ಯವಿಲ್ಲ. ಅಲ್ಲಿ ಇದು ಹೆಚ್ಚು ಕಾರ್ಯತಂತ್ರ ಮತ್ತು ಯುದ್ಧತಂತ್ರದದ್ದಾಗಿದೆ. ಅಲ್ಲಿ ಕೆಲವೊಮ್ಮೆ 140 ಅಥವಾ 160 ರನ್‌ಗಳು ಸಾಕು' ಎಂದು ಡಿವಿಲಿಯರ್ಸ್ ಹೇಳಿದರು.

Comments


bottom of page