top of page

ಇದು ಅಂತಿಮ ಒಪ್ಪಂದವಲ್ಲ, ದುರ್ವರ್ತನೆ ತೋರಿದರೆ ಯುದ್ಧ ಪುನರಾರಂಭ: ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ

  • Writer: new waves technology
    new waves technology
  • Jun 18
  • 1 min read
ಇರಾನ್ ಒಪ್ಪಂದದ ಷರತ್ತುಗಳನ್ನು ಪಾಲಿಸದಿದ್ದರೆ ಅಥವಾ ನಮ್ಮ ನಿರೀಕ್ಷೆಯಂತೆ ನಡೆದುಕೊಳ್ಳದಿದ್ದರೆ ಮತ್ತೆ ಬಾಂಬ್ ದಾಳಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಒಪ್ಪಂದದ ಷರತ್ತುಗಳನ್ನು ಪಾಲಿಸದಿದ್ದರೆ ಅಥವಾ ನಮ್ಮ ನಿರೀಕ್ಷೆಯಂತೆ ನಡೆದುಕೊಳ್ಳದಿದ್ದರೆ ಮತ್ತೆ ಬಾಂಬ್ ದಾಳಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಫ್ರಾನ್ಸ್‌: ಅಮೆರಿಕಾ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ ಜಾರಿಗೆ ಬಂದ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇದು ಒಪ್ಪಂದವು ಅಂತಿಮವಲ್ಲ ಇರಾನ್ ದುರ್ವರ್ತನೆ ಯುದ್ಧ ಪುನರಾರಂಭವಾಗಲಿದೆ ಎಂದು ಹೇಳಿದ್ದಾರೆ.

ಫ್ರಾನ್ಸ್‌ನ ಎವಿಯನ್-ಲೆ-ಬೇನ್ಸ್‌ನಲ್ಲಿ ನಡೆದ ಜಿ7 ಶೃಂಗಸಭೆಯ ವೇಳೆ ಮಾತನಾಡಿದ ಟ್ರಂಪ್, ಇರಾನ್‌ನೊಂದಿಗೆ ಮಾಡಿಕೊಂಡಿರುವ ಒಪ್ಪಂದವು ಮಧ್ಯಂತರ ಒಪ್ಪಂದವೇ ಹೊರತು ಅಂತಿಮ ಒಪ್ಪಂದವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇರಾನ್ ಒಪ್ಪಂದದ ಷರತ್ತುಗಳನ್ನು ಪಾಲಿಸದಿದ್ದರೆ ಅಥವಾ ನಮ್ಮ ನಿರೀಕ್ಷೆಯಂತೆ ನಡೆದುಕೊಳ್ಳದಿದ್ದರೆ ಮತ್ತೆ ಬಾಂಬ್ ದಾಳಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

"ಇದು ಕೇವಲ ಒಂದು ಮೆಮೊರಾಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್ (MoU) ಮಾತ್ರ. ಇದು ನನಗೆ ಇಷ್ಟವಾಗದಿದ್ದರೆ ಅಥವಾ ಇರಾನ್ ಸರಿಯಾಗಿ ವರ್ತಿಸದಿದ್ದರೆ, ನಾವು ಮತ್ತೆ ಗುಂಡಿನ ದಾಳಿ ನಡೆಸುತ್ತೇವೆ. ಅವರ ಮೇಲೆ ಮತ್ತೆ ಬಾಂಬ್‌ಗಳನ್ನು ಸುರಿಯುತ್ತೇವೆ" ಎಂದು ಕಟುವಾಗಿ ಹೇಳಿದ್ದಾರೆ.

ಇರಾನ್‌ಗೆ ತಕ್ಷಣದ ನಿರ್ಬಂಧ ಸಡಿಲಿಕೆ ಈ ಒಪ್ಪಂದದ ಭಾಗವಾಗಿಲ್ಲ. ಆದರೆ ತಮ್ಮ ಆಡಳಿತವು ಮಾತುಕತೆಯ ಮೂಲಕ ರೂಪಿಸಿರುವ ಈ ಚೌಕಟ್ಟು ಒಪ್ಪಂದವನ್ನು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

"ಇದು ಅತ್ಯಂತ ಬಲಿಷ್ಠ ಒಪ್ಪಂದವಾಗಿದೆ. ಇದರ ಸಂಪೂರ್ಣ ವಿವರ ಇನ್ನೂ ಯಾರಿಗೂ ಗೊತ್ತಿಲ್ಲ. ಆದರೂ ಇದು ಬಹಳ ಶಕ್ತಿಶಾಲಿ ಒಪ್ಪಂದವಾಗಿದ್ದು, ಬಹುತೇಕ ಎಲ್ಲರೂ ಇದರಿಂದ ಸಂತುಷ್ಟರಾಗಿದ್ದಾರೆ" ಎಂದು ಹೇಳಿದ್ದಾರೆ.

ಈ ಒಪ್ಪಂದವು ಜಾಗತಿಕ ಮಾರುಕಟ್ಟೆಗಳಿಗೆ ದೊಡ್ಡ ಉತ್ತೇಜನ ನೀಡಲಿದೆ. "ಮಾರುಕಟ್ಟೆಯಷ್ಟು ಬುದ್ಧಿವಂತದ್ದು ಮತ್ತೊಂದಿಲ್ಲ. ಮಾರುಕಟ್ಟೆಗಳು ಈ ಒಪ್ಪಂದವನ್ನು ಅತ್ಯಂತ ಉತ್ಸಾಹದಿಂದ ಸ್ವಾಗತಿಸಿವೆ. ಈ ಒಪ್ಪಂದ ಆಗದೇ ಇದ್ದಿದ್ದರೆ ವಿಶ್ವವೇ ಆರ್ಥಿಕ ಹಿಂಜರಿತದತ್ತ (Depression) ಸಾಗುವ ಸಾಧ್ಯತೆ ಇತ್ತು ಎಂದು ತಿಳಿಸಿದ್ದಾರೆ.

ಇದೇ ವೇಳೆ ಜಾಗತಿಕ ತೈಲ ಬೆಲೆಗಳ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, ಯುದ್ಧದ ನಂತರ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆ ಮರಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ತೈಲ ಬೆಲೆಗಳು ಯುದ್ಧಕ್ಕೂ ಮುಂಚಿನ ಮಟ್ಟಕ್ಕಿಂತಲೂ ಕೆಳಗೆ ಇಳಿಯಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

ಅಮೆರಿಕಾ ಮತ್ತು ಇರಾನ್ ನಡುವೆ ಇತ್ತೀಚೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಅದರ ಭಾಗವಾಗಿ ಹಾರ್ಮುಜ್ ಜಲಸಂಧಿಯನ್ನು ಪುನರಾರಂಭಿಸುವುದು ಮತ್ತು ಮುಂದಿನ 60 ದಿನಗಳಲ್ಲಿ ಅಣು ಕಾರ್ಯಕ್ರಮದ ಕುರಿತು ಹೆಚ್ಚಿನ ಮಾತುಕತೆ ನಡೆಸುವುದು ಒಪ್ಪಂದದ ಪ್ರಮುಖ ಅಂಶಗಳಾಗಿವೆ. ಆದರೆ, ಟ್ರಂಪ್ ಅವರ ಈ ಎಚ್ಚರಿಕೆಯ ಹೇಳಿಕೆ ಒಪ್ಪಂದದ ಭವಿಷ್ಯದ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Comments


bottom of page