top of page

'ಇದೂ ಕೂಡ ಪ್ರಚೋದನೆ ನೀಡುತ್ತದೆ ಅಂದ್ರೆ ನಾವ್ ಇನ್ನೇನ್ ಹಾಕ್ಕೋ ಬೇಕು': ಜಾಗಿಂಗ್ ಮಾಡುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ, ಆಕ್ರೋಶ! Video

  • Writer: new waves technology
    new waves technology
  • Apr 27
  • 1 min read


ಬೆಳಿಗ್ಗೆ ಸುಮಾರು 6:15ಕ್ಕೆ ಯುವತಿ ಜಾಗಿಂಗ್ ಮಾಡುತ್ತಿದ್ದಾಗ, ಓರ್ವ ವ್ಯಕ್ತಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿರುವುದನ್ನು (ಹಸ್ತಮೈಥುನ) ಕಂಡು ಆಕೆ ದಿಗ್ಭ್ರಮೆಗೊಂಡಿದ್ದಾರೆ.
ಬೆಳಿಗ್ಗೆ ಸುಮಾರು 6:15ಕ್ಕೆ ಯುವತಿ ಜಾಗಿಂಗ್ ಮಾಡುತ್ತಿದ್ದಾಗ, ಓರ್ವ ವ್ಯಕ್ತಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿರುವುದನ್ನು (ಹಸ್ತಮೈಥುನ) ಕಂಡು ಆಕೆ ದಿಗ್ಭ್ರಮೆಗೊಂಡಿದ್ದಾರೆ.

ಹೈದರಾಬಾದ್‌: ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಜಾಗಿಂಗ್ ಮಾಡುತ್ತಿದ್ದ ಯುವತಿಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಯುವತಿ, ನಮ್ಮ ಜಾಗಿಂಗ್ ಡ್ರೆಸ್ ಕೂಡ ಅವರನ್ನು ಪ್ರಚೋದಿಸುತ್ತದೆ ಅಂದ್ರೆ ನಾವು ಇನ್ಯಾವ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

ಹೈದರಾಬಾದ್‌ನ ಸೈಬರಾಬಾದ್ ಪ್ರದೇಶದ ಔಟರ್ ರಿಂಗ್ ರೋಡ್ (ORR) ಪಕ್ಕದಲ್ಲಿರುವ ಜನಪ್ರಿಯ ಸೈಕ್ಲಿಂಗ್ ಟ್ರ್ಯಾಕ್‌ನಲ್ಲಿ ಈ ಘಟನೆ ನಡೆದಿದ್ದು, ಬೆಳಿಗ್ಗೆ ಸುಮಾರು 6:15ಕ್ಕೆ ಯುವತಿ ಜಾಗಿಂಗ್ ಮಾಡುತ್ತಿದ್ದಾಗ, ಓರ್ವ ವ್ಯಕ್ತಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿರುವುದನ್ನು (ಹಸ್ತಮೈಥುನ) ಕಂಡು ಆಕೆ ದಿಗ್ಭ್ರಮೆಗೊಂಡಿದ್ದಾರೆ.

ಆ ಸಮಯದಲ್ಲಿ ಅಲ್ಲಿ ಸಾಕಷ್ಟು ಜನ ಓಟಗಾರರು ಮತ್ತು ಸೈಕ್ಲಿಸ್ಟ್‌ಗಳು ಇದ್ದರೂ ಆತ ಯಾವುದೇ ಭಯವಿಲ್ಲದೇ ತನ್ನ ಎದುರೇ ಈ ಕೃತ್ಯ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ದುಷ್ಕರ್ಮಿಯ ಕೃತ್ಯವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಆಕೆ ಫೋನ್ ಕ್ಯಾಮೆರಾ ತೆರೆಯಲು ಸ್ವಲ್ಪ ವಿಳಂಬವಾದ ಕಾರಣ ಆತನ ಮುಖ ಸ್ಪಷ್ಟವಾಗಿ ದಾಖಲಾಗಿಲ್ಲ. "ಇನ್ನೂ 2 ಮಿಲಿ ಸೆಕೆಂಡ್ ಮುಂಚಿತವಾಗಿ ಕ್ಯಾಮೆರಾ ಓಪನ್ ಆಗಿದ್ದರೆ ಆತನ ಮುಖ ಕ್ಯಾಮೆರಾದಲ್ಲಿ ಸೆರೆಯಾಗುತ್ತಿತ್ತು ಎಂದು ಯುವತಿ ಹೇಳಿದ್ದಾಳೆ.

ಅಲ್ಲದೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನನ್ನು ಹಿಂಬಾಲಿಸಿದೆ. ಆದರೆ ಅಷ್ಟು ಹೊತ್ತಿಗೆ ಪರಾರಿಯಾಗಿದ್ದ ಎಂದೂ ಯುವತಿ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಆಕೆ, ಸೂರ್ಯೋದಯದ ನಂತರವಷ್ಟೇ ಓಟಕ್ಕೆ ಹೋದರೂ ಇಂತಹ ಘಟನೆ ನಡೆಯುತ್ತಿರುವುದು ಹೈದರಾಬಾದ್‌ನಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ ಎಂದು ಹೇಳಿದ್ದಾರೆ. ನಾವ್ ಇನ್ನೇನ್ ಹಾಕ್ಕೋ ಬೇಕು

ಜಾಗಿಂಗ್ ಮಾಡಲು ಅದರದ್ದೇ ಬಟ್ಟೆ ಧರಿಸಿದ್ದೆ. ಇದೂ ಕೂಡ ಅವರನ್ನು ಪ್ರಚೋದಿಸುತ್ತದೆಯೇ? ಜಾಗಿಂಗ್ ಡ್ರೆಸ್ ಕೂಡ ಅವರನ್ನು ಪ್ರಚೋದಿಸುತ್ತದೆ ಎಂದರೆ ನಾವು ಇನ್ನೆಂತಹ ಡ್ರೆಸ್ ಗಳನ್ನು ಧರಿಸಬೇಕು.

ಸೂರ್ಯೋದಯದ ನಂತರವೇ ವ್ಯಾಯಾಮ ಮಾಡಲು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ. ಆದರೆ ಇನ್ನೂ ಅಸುರಕ್ಷಿತ ಭಾವನೆ ಹೊಂದಿದ್ದೇನೆ ಎಂದು ಆಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಕ್ರಮ

ಸೈಬರಾಬಾದ್ ಪೊಲೀಸ್ ಕಮಿಷನರ್ ಡಾ. ರಮೇಶ್ ರೆಡ್ಡಿ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

"ಆರೋಪಿಯನ್ನು ಹುಡುಕಲು ನಾವು ಶೋಧ ತಂಡಗಳನ್ನು ನಿಯೋಜಿಸಿದ್ದೇವೆ. ಪ್ರಸ್ತುತ ಹುಡುಕಾಟ ಮುಂದುವರೆದಿದೆ. ತ್ವರಿತ ದೂರುಗಳು ಪೊಲೀಸ್ ಪ್ರತಿಕ್ರಿಯೆಯನ್ನು ವೇಗಗೊಳಿಸಲು ಮತ್ತು ಅಪರಾಧಿಗಳನ್ನು ಪತ್ತೆಹಚ್ಚುವ ಸಾಧ್ಯತೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. 100 ಅನ್ನು ಡಯಲ್ ಮಾಡುವ ಮೂಲಕ ಇಂತಹ ಘಟನೆಗಳನ್ನು ತಕ್ಷಣ ವರದಿ ಮಾಡುವಂತೆ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಒತ್ತಾಯಿಸಿದರು. "ಔಪಚಾರಿಕವಾಗಿ ಮತ್ತು ತಕ್ಷಣವೇ ದೂರು ನೀಡುವುದರಿಂದ ವ್ಯಕ್ತಿಯನ್ನು ತಕ್ಷಣವೇ ಪತ್ತೆಹಚ್ಚಲು ನಮಗೆ ಸಹಾಯವಾಗುತ್ತದೆ" ಎಂದು ಅವರು ಹೇಳಿದರು.

Comments


bottom of page