top of page

ಇರಾನ್-ಇಸ್ರೇಲ್ ಸಂಘರ್ಷ ಶಮನಕ್ಕೆ ರಾಜತಾಂತ್ರಿಕ ಕ್ರಮ ಕೈಗೊಳ್ಳಿ: ಕೇಂದ್ರ ಸರ್ಕಾರಕ್ಕೆ ಮಮತಾ ಮನವಿ

  • Writer: new waves technology
    new waves technology
  • Jun 24
  • 1 min read

ಸಂಘರ್ಷದ ಬಗ್ಗೆ ನೇರವಾಗಿ ಉಲ್ಲೇಖಿಸದೆ, ಎರಡು ಪಶ್ಚಿಮ ಏಷ್ಯಾದ ರಾಷ್ಟ್ರಗಳ ನಡುವಿನ ದ್ವೇಷವನ್ನು ಪರಿಹರಿಸಲು ಭಾರತ ಶಾಂತಿಯುತ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಬೇಕು ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.

ಕೋಲ್ಕತ್ತಾ: ಇರಾನ್-ಇಸ್ರೇಲ್ ಸಂಘರ್ಷದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಕೇಂದ್ರ ಸರ್ಕಾರವು "ಈ ಯುದ್ಧ ತಡೆಯಲು" ರಾಜತಾಂತ್ರಿಕ ಉಪಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಸಂಘರ್ಷದ ಬಗ್ಗೆ ನೇರವಾಗಿ ಉಲ್ಲೇಖಿಸದೆ, ಎರಡು ಪಶ್ಚಿಮ ಏಷ್ಯಾದ ರಾಷ್ಟ್ರಗಳ ನಡುವಿನ ದ್ವೇಷವನ್ನು ಪರಿಹರಿಸಲು ಭಾರತ ಶಾಂತಿಯುತ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಬೇಕು ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪರಿಸರ ಸಮಸ್ಯೆಗಳ ಕುರಿತು ಕೇಂದ್ರ ಮಸೂದೆ ಅಂಗೀಕರಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, "ವಿದೇಶಿ ವ್ಯವಹಾರಗಳು ಭಾರತ ಸರ್ಕಾರದ ಅಡಿಯಲ್ಲಿ ಬರುತ್ತವೆ. ಹೀಗಾಗಿ ನಾನು ಬಾಹ್ಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲವಾದರೂ, ಈ ಯುದ್ಧದಂತಹ ಪರಿಸ್ಥಿತಿಯನ್ನು ನಿಲ್ಲಿಸಲು ಅವರು ರಾಜತಾಂತ್ರಿಕ ಶಾಂತಿಯುತ ಉಪಕ್ರಮವನ್ನು ತೆಗೆದುಕೊಳ್ಳಬೇಕು ಎಂದು ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ" ಎಂದು ಹೇಳಿದರು.

"ಅವರಿಗೆ (ಭಾರತ ಸರ್ಕಾರಕ್ಕೆ) ಏನಾದರೂ ಸಮಸ್ಯೆ ಇರಬಹುದು. ಆದರೆ ಬಾಹ್ಯ ವ್ಯವಹಾರಗಳು ಮತ್ತು ರಾಜತಾಂತ್ರಿಕ ವಿಷಯಗಳ ಬಗ್ಗೆ ಮಾತನಾಡಲು ನನಗೆ ಅಧಿಕಾರವಿಲ್ಲ. ಈ ಪ್ರಪಂಚದ ಕಾಳಜಿಯುಳ್ಳ ಒಬ್ಬ ನಾಗರಿಕಳಾಗಿ ಇದು ನನ್ನ ವೈಯಕ್ತಿಕ ಅಭಿಪ್ರಾಯ" ಎಂದರು.

ಭಾರತದ ಐತಿಹಾಸಿಕ ರಾಜತಾಂತ್ರಿಕ ಪರಂಪರೆಯನ್ನು ನೆನಪಿಸಿಕೊಂಡ ಮಮತಾ ಬ್ಯಾನರ್ಜಿ, "ಹಿಂದೆ, ಭಾರತ ಅಲಿಪ್ತ ಚಳವಳಿಯನ್ನು ಮುನ್ನಡೆಸಿತ್ತು. ಪಿಎಲ್‌ಒ ಅನ್ನು ಗುರುತಿಸಿದ ಮೊದಲ ದೇಶ ಭಾರತ. ಅರಾಫತ್ ನಮ್ಮ ದೇಶಕ್ಕೆ ಬಂದರು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ, ಅವರು ನನ್ನನ್ನು ಮತ್ತು ಆನಂದ್ ಶರ್ಮಾ ಅವರನ್ನು ಅಂಗೋಲಾಕ್ಕೆ ಕಳುಹಿಸಿದರು. ನಾವು ಸಹಾಯ ಮಾಡಿದೆವು" ಎಂದು ಹೇಳಿದರು.

Commentaires


bottom of page