top of page

ಇರಾನ್ ಸಂಘರ್ಷ ಅಂತ್ಯ: ಸತತ 3ನೇ ದಿನವೂ Indian Stock Market ಏರಿಕೆ; 24 ಸಾವಿರ ಅಂಕ ಗಡಿಯತ್ತ Nifty50

  • Writer: new waves technology
    new waves technology
  • Jun 17
  • 1 min read
ಇಂದು ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.74ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.57ರಷ್ಟು ಏರಿಕೆ ದಾಖಲಿಸಿದೆ.

ಮುಂಬೈ: ಅಮೆರಿಕ ಮತ್ತು ಇರಾನ್ ಸಂಘರ್ಷ ತಾರ್ಕಿಕ ಅಂತ್ಯ ಕಂಡ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆಯ ನಾಗಾಲೋಟ ಮುಂದುವರೆದಿದ್ದು, ಮಂಗಳವಾರವೂ ಕೂಡ ಮಾರುಕಟ್ಟೆ ಚೇತೋಹಾರಿ ವಹಿವಾಟು ನಡೆಸಿದೆ.

ಇಂದು ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.74ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.57ರಷ್ಟು ಏರಿಕೆ ದಾಖಲಿಸಿದೆ.

ಸೆನ್ಸೆಕ್ಸ್ ಇಂದು ಬರೊಬ್ಬರಿ 562.45ಅಂಕಗಳ ಏರಿಕೆಯೊಂದಿಗೆ 76,826.78 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 135.25 ಅಂಕಗಳ ಏರಿಕೆಯೊಂದಿಗೆ 23,989.15 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಐಟಿ, ಆಟೋ ಮೊಬೈಲ್ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿದ್ದರೆ, ಲೋಹದ ವಿಭಾಗಗಳ ಷೇರುಗಳ ಮೌಲ್ಯ ಗಣನೀಯ ಕುಸಿತವಾಗಿದೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಕನ್ಸ್ಯೂಮರ್, ಎಚ್‌ಯುಎಲ್, ಬಜಾಜ್ ಫಿನ್‌ಸರ್ವ್, ಎನ್‌ಟಿಪಿಸಿ ಷೇರುಗಳು ಲಾಭಾಂಶ ಕಂಡಿದೆ.

ಅಂತೆಯೇ ಹಿಂಡಾಲ್ಕೊ, ಜೆಎಸ್‌ಡಬ್ಲ್ಯೂ ಸ್ಟೀಲ್, ಎಚ್‌ಡಿಎಫ್‌ಸಿ ಲೈಫ್, ಐಷರ್ ಮೋಟಾರ್ಸ್ ಮತ್ತು ಅಪೊಲೊ ಆಸ್ಪತ್ರೆಗಳ ಹೊರತುಪಡಿಸಿ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.

ಅಮೆರಿಕ-ಇರಾನ್ ಶಾಂತಿ ಒಪ್ಪಂದಗಳ ಎಫೆಕ್ಟ್

ಅಮೆರಿಕಾ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವು ಮುಂದಿನ ಕೆಲವು ದಿನಗಳಲ್ಲಿ ಸಹಿಯಾಗಲಿರುವ ಹಿನ್ನೆಲೆಯಲ್ಲಿ ಜಾಗತಿಕ ಷೇರು ಮಾರುಕಟ್ಟೆಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿವೆ.

ಅಲ್ಲದೆ ಇತ್ತೀಚಿನ ಮಾರಾಟದ ಒತ್ತಡದಲ್ಲಿ ಭಾರೀ ಕುಸಿತ ಕಂಡಿದ್ದ ಷೇರುಗಳನ್ನು ಹೂಡಿಕೆದಾರರು ಖರೀದಿಸಲು ಮುಂದಾಗಿದ್ದಾರೆ. ಜಾಗತಿಕ ಕಚ್ಚಾ ತೈಲದ ಬೆಲೆಗಳು ತೀವ್ರವಾಗಿ ಇಳಿಕೆಯಾಗಿರುವುದರಿಂದ ದೇಶೀಯ ತೈಲ ಕ್ಷೇತ್ರದ ಷೇರುಗಳಲ್ಲಿ ಖರೀದಿ ಚಟುವಟಿಕೆ ಹೆಚ್ಚಾಗಿದೆ.

ಇತ್ತೀಚಿನ ವಾರಗಳಲ್ಲಿ ಹಿನ್ನಡೆ ಅನುಭವಿಸಿದ್ದ ಐಟಿ ವಲಯದ ಷೇರುಗಳಲ್ಲಿಯೂ ಏರಿಕೆಯ ಪ್ರವೃತ್ತಿ ಕಂಡುಬಂದಿದೆ. ಇದೇ ವೇಳೆ, ವಿದೇಶಿ ಸಂಸ್ಥಾತ್ಮಕ ಹೂಡಿಕೆದಾರರು (FIIs) ಈ ತಿಂಗಳಲ್ಲಿ ಮೊದಲ ಬಾರಿಗೆ ಸೋಮವಾರ ನಿವ್ವಳ ಖರೀದಿದಾರರಾಗಿ ಹೊರಹೊಮ್ಮಿದ್ದಾರೆ. ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವುದು ಹಾಗೂ ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡುಬಂದಿರುವುದು ಮಾರುಕಟ್ಟೆಗೆ ಬೆಂಬಲ ನೀಡಿದೆ.

Comments

bottom of page