ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 3.16ಕ್ಕೆ ಇಳಿಕೆ; 69 ತಿಂಗಳಲ್ಲೇ ಕನಿಷ್ಠ
- new waves technology
- May 14
- 1 min read
ಮುಖ್ಯವಾಗಿ ತರಕಾರಿ ಬೆಲೆಗಳಲ್ಲಿನ ನಿರಂತರ ಕುಸಿತದಿಂದಾಗಿ ಚಿಲ್ಲರೆ ಹಣದುಬ್ಬರ ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಮುಂಬೈ: ಭಾರತದ ಚಿಲ್ಲರೆ ಹಣದುಬ್ಬರವು ಏಪ್ರಿಲ್ 2025 ರಲ್ಲಿ ಶೇ. 3.16 ಕ್ಕೆ ಇಳಿದಿದ್ದು, ಇದು ಕಳೆದ 69 ತಿಂಗಳಲ್ಲೇ ಅತ್ಯಂತ ಕನಿಷ್ಠ ಹಣದುಬ್ಬರವಾಗಿದೆ.
ಮುಖ್ಯವಾಗಿ ತರಕಾರಿ ಬೆಲೆಗಳಲ್ಲಿನ ನಿರಂತರ ಕುಸಿತದಿಂದಾಗಿ ಚಿಲ್ಲರೆ ಹಣದುಬ್ಬರ ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI) ತಿಳಿಸಿದೆ.
ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 3.34ರಷ್ಟು ಇತ್ತು, ಅದೀಗ ಏಪ್ರಿಲ್‌ನಲ್ಲಿ ಶೇ. 3.16ಕ್ಕೆ ಇಳಿದಿದೆ. ಇದಕ್ಕೂ ಹಿಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ. 3.79ರಷ್ಟಿತ್ತು. ಇದರೊಂದಿಗೆ ಸತತ ಮೂರನೇ ತಿಂಗಳೂ ಹಣದುಬ್ಬರ ಶೇ. 4ಕ್ಕಿಂತ ಕೆಳಮಟ್ಟಕ್ಕೆ ಇಳಿಕೆ ಕಂಡಂತಾಗಿದೆ. ಈ ಮೂಲಕ ಆರ್‌ಬಿಐನ ಶೇ. 4ರ ಒಳಗಿನ ಗುರಿ ತಲುಪಿದೆ.
"ತರಕಾರಿ ಸೂಚ್ಯಂಕವು ಮತ್ತಷ್ಟು ಕುಸಿದು, ಆಹಾರ ಹಣದುಬ್ಬರವನ್ನು ಕುಗ್ಗಿಸುವುದರೊಂದಿಗೆ, ಮುಖ್ಯ CPI ಹಣದುಬ್ಬರವು ಏಪ್ರಿಲ್ 2025 ರಲ್ಲಿ 69 ತಿಂಗಳ ಕನಿಷ್ಠ ಅಂದರೆ ಶೇ. 3.16ಕ್ಕೆ ಇಳಿದಿದೆ" ಎಂದು ICRA ಲಿಮಿಟೆಡ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ತಿಳಿಸಿದ್ದಾರೆ.
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ)ದಲ್ಲಿ ಸುಮಾರು ಅರ್ಧದಷ್ಟು ಪಾಲನ್ನು ಹೊಂದಿರುವ ಆಹಾರ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ. 1.78ಕ್ಕೆ ಇಳಿಕೆಯಾಗಿದೆ. ಇದೇ ಹಣದುಬ್ಬರ ಮಾರ್ಚ್‌ನಲ್ಲಿ ಶೇ. 2.69ರಷ್ಟು ಇತ್ತು. ಇದರಿಂದ ಒಟ್ಟಾರೆ ಹಣದುಬ್ಬರ ಕುಸಿತ ಕಂಡಿದೆ.
Comments