top of page

ಕರ್ನಾಟಕ, ಗುಜರಾತ್ ನಂತರ ತಮಿಳುನಾಡಿನಲ್ಲೂ HMPV ಪತ್ತೆ; ಚೆನ್ನೈನಲ್ಲಿ ಇಬ್ಬರು ಮಕ್ಕಳಿಗೆ ಪಾಸಿಟಿವ್

  • Writer: new waves technology
    new waves technology
  • Jan 6
  • 1 min read

ಚೆನ್ನೈನಲ್ಲಿ ಇಬ್ಬರು ಮಕ್ಕಳಿಗೆ ಎಚ್ಎಂಪಿವಿ ಪಾಸಿಟಿವ್ ದೃಢಪಟ್ಟಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಚೆನ್ನೈ: ಭಾರತದಲ್ಲೂ HMPV ಮಾರಣಾಂತಿಕ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ನಂತರ ಇದೀಗ ತಮಿಳುನಾಡಿನಲ್ಲೂ ಹೊಸ ವೈರಸ್ ಪತ್ತೆಯಾಗಿದೆ.

ಚೆನ್ನೈನಲ್ಲಿ ಇಬ್ಬರು ಮಕ್ಕಳಿಗೆ ಎಚ್ಎಂಪಿವಿ ಪಾಸಿಟಿವ್ ದೃಢಪಟ್ಟಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಈ ಎರಡು ಪ್ರಕರಣಗಳು ನಗರದಲ್ಲಿ ಎರಡು ಆಸ್ಪತ್ರೆಗಳಲ್ಲಿ ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.


HMPV ಕೋವಿಡ್‌ನಂತೆ ಹರಡಲ್ಲ; ಭಯಪಡುವಕರ್ನಾಟಕದಲ್ಲಿ ಮೊದಲ ಸೋಂಕು ಪತ್ತೆಯಾಗಿತ್ತು. ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದ ಮೂರು ಮತ್ತು ಎಂಟು ತಿಂಗಳ ಎರಡು ಮಕ್ಕಳಲ್ಲಿ ಈ ವೈರಸ್ ದೃಢಪಟ್ಟಿತ್ತು.

ಬಳಿಕ, ಗುಜರಾತ್​ನ ಅಹಮದಾಬಾದ್​ನಲ್ಲಿ 2 ವರ್ಷದ ಮಗುವಿಗೆ ಎಚ್​ಎಂಪಿವಿ ತಗುಲಿರುವುದು ಪತ್ತೆಯಾಗಿತ್ತು. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ 5 ತಿಂಗಳ ಮಗುವಿನಲ್ಲೂ ಈ ವೈರಸ್ ಪತ್ತೆಯಾಗಿದೆ.

Comments


bottom of page