ಗುಜರಾತ್: ಶಾರುಖ್ ಖಾನ್ ಬಂಗಲೆಗೆ ನುಗ್ಗಿದ್ದ ವ್ಯಕ್ತಿ ಕಳ್ಳತನದ ಆರೋಪದ ಮೇಲೆ ಬಂಧನ!
- new waves technology
- Feb 19
- 1 min read
ನಗರದಲ್ಲಿರುವ ನಿವೃತ್ತ ಯೋಧರೊಬ್ಬರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್ ಸ್ವರೂಪ್ ಕುಶ್ವಾಹ(21) ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಭರೂಚ್: 2023 ರಲ್ಲಿ ಮುಂಬೈನಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮನ್ನತ್ ಬಂಗಲೆಗೆ ಅಕ್ರಮವಾಗಿ ಪ್ರವೇಶಿಸಿದ್ದ ವ್ಯಕ್ತಿಯನ್ನು ಗುಜರಾತ್‌ನ ಭರೂಚ್‌ನಲ್ಲಿ ಕಳ್ಳತನದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ನಗರದಲ್ಲಿರುವ ನಿವೃತ್ತ ಸೇನಾ ಜವಾನರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್ ಸ್ವರೂಪ್ ಕುಶ್ವಾಹ(21) ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆರೋಪಿ ಮತ್ತು ಇನ್ನೊಬ್ಬ ವ್ಯಕ್ತಿ ನಾಲ್ಕು ದಿನಗಳ ಹಿಂದೆ ಮನೆಗೆ ನುಗ್ಗಿ 2.74 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಕದ್ದಿದ್ದಾರೆ ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ ಸಿಕೆ ಪಟೇಲ್ ತಿಳಿಸಿದ್ದಾರೆ.
ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ನಟ ಶಾರುಖ್ ಖಾನ್ ಅವರ ಮನ್ನತ್ ಬಂಗಲೆಯ ಹೈ ಸೆಕ್ಯುರಿಟಿಯನ್ನು ಭೇದಿಸಿದ್ದೆ ಎಂದು ಕುಶ್ವಾಹ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ನಟನ ಭದ್ರತಾ ಸಿಬ್ಬಂದಿ ಆತನನ್ನು ಮತ್ತು ಆತನ ಜೊತೆಗಿದ್ದ ವ್ಯಕ್ತಿಯನ್ನು ಹಿಡಿದಿದ್ದರು.
ಮೋನಾ ಪಾರ್ಕ್ ಸೊಸೈಟಿಯ ಮನೆಯಲ್ಲಿ ನಡೆದ ಕಳ್ಳತನದಲ್ಲಿ ಭಾಗಿಯಾಗಿದ್ದಕ್ಕಾಗಿ ಕುಶ್ವಾಹ ಮತ್ತು ಮಿನ್ಹಾಜ್ ಸಿಂಧಾ ಅವರನ್ನು ಭರೂಚ್ ಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ. "ನಾವು ಅವರ ಬಳಿಯಿಂದ 2.74 ಲಕ್ಷ ರೂ. ಮೌಲ್ಯದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ" ಎಂದು ಪಟೇಲ್ ಹೇಳಿದ್ದಾರೆ.
ಮಾರ್ಚ್ 2, 2023 ರಂದು ಶಾರುಖ್ ಖಾನ್ ಅವರ ಮುಂಬೈ ಮನೆಯ ಹೊರಗಿನ ಗೋಡೆಯನ್ನು ಹತ್ತಿ ಮನೆಯೊಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದ ಇಬ್ಬರನ್ನು ಪೊಲಲೀಸರು ಬಂಧಿಸಿದ್ದರು.
Comments