top of page

ಚೆನ್ನೈನ ದಕ್ಷಿಣ ಚಿತ್ರ ಮ್ಯೂಸಿಯಂನಲ್ಲಿ ಕೊಡವ 'ಐನ್ ಮನೆ' ಸ್ಥಾಪನೆ!

  • Writer: new waves technology
    new waves technology
  • Oct 25, 2024
  • 1 min read

ಸಾಂಪ್ರದಾಯಿಕ ಸೌಧಗಳನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಐನ್ ಮನೆಯ ಮಾದರಿಯನ್ನು ಚೆನ್ನೈನ ದಕ್ಷಿಣ ಚಿತ್ರ ವಸ್ತುಸಂಗ್ರಹಾಲಯದಲ್ಲಿ ಸ್ಥಾಪಿಸಲಾಗಿದ್ದು, ಇಂದು ಉದ್ಘಾಟಿಸಲಾಗುತ್ತಿದೆ.

ಮಡಿಕೇರಿ: ಕೊಡವ ಐನ್ ಮನೆ ಕೊಡವ ಸಮುದಾಯದ ಸಂಸ್ಕೃತಿಯ ಕೇಂದ್ರಬಿಂದುವಾಗಿದೆ. ಕೊಡವರ, ಕೊಡಗಿನ ಮೂಲ ನಿವಾಸಿಗಳ ಹೆಮ್ಮೆಯ ಬದುಕಿಗೆ ಐನ್‌ಮನೆ ಹೆಗ್ಗುರುತು. ಇದು ಅವರ ಪ್ರತಿಷ್ಠೆ ಕೂಡ. ಸಂಸ್ಕೃತಿ, ಪದ್ಧತಿ-ಪರಂಪರೆ, ಆಚಾರ-ವಿಚಾರಗಳೊಂದಿಗೆ ತಮ್ಮ ಕುಟುಂಬದ ಪ್ರತಿಯೊಬ್ಬನ ಬದುಕಿನ ಪಯಣಕ್ಕೆ ಮುನ್ನುಡಿ ಬರೆದದ್ದೂ ಈ ಐನ್ ಮನೆಗಳಿಂದಲೇ.

ಈ ಸಾಂಪ್ರದಾಯಿಕ ಸೌಧಗಳನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಐನ್ ಮನೆಯ ಮಾದರಿಯನ್ನು ಚೆನ್ನೈನ ದಕ್ಷಿಣ ಚಿತ್ರ ವಸ್ತುಸಂಗ್ರಹಾಲಯದಲ್ಲಿ ಸ್ಥಾಪಿಸಲಾಗಿದ್ದು, ಇಂದು ಉದ್ಘಾಟಿಸಲಾಗುತ್ತಿದೆ.

ದಕ್ಷಿಣಚಿತ್ರ, ಕಲೆ, ವಾಸ್ತುಶಿಲ್ಪ, ಜೀವನಶೈಲಿ, ಪ್ರದರ್ಶನ ಕಲೆ ಮತ್ತು ಕರಕುಶಲ ಸಾಂಸ್ಕೃತಿಕ ಜೀವಂತ ವಸ್ತು ಸಂಗ್ರಹಾಲಯವಾಗಿದೆ. ಮ್ಯೂಸಿಯಂ ದಕ್ಷಿಣ ಭಾರತದ ವಿಶಿಷ್ಟ ಸಂಸ್ಕೃತಿಯನ್ನು ಬಿಂಬಿಸುವ 18 ಸಾಂಪ್ರದಾಯಿಕ ಮನೆಗಳಿಗೆ ನೆಲೆಯಾಗಿದೆ. ವಸ್ತುಸಂಗ್ರಹಾಲಯಕ್ಕೆ 19ನೇಯದಾಗಿ ಕೊಡವ ಐನ್ ಮನೆಯನ್ನು ಸ್ಥಾಪಿಸಲಾಗಿದೆ ಮತ್ತು ಇದು ಕೊಡವ ಸಮುದಾಯದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುತ್ತದೆ.

ಕೊಡಗಿನ ಐನ್ ಮನೆಗಾಗಿ ನಮ್ಮ ಸುದೀರ್ಘ ಹುಡುಕಾಟವು 2022 ರಲ್ಲಿ ಫಲ ನೀಡಿತು. 1852 ರಲ್ಲಿ ನಿರ್ಮಿಸಲಾದ ಕೋಡಿರ ಕುಟುಂಬದ ಐನ್ ಮನೆಯನ್ನು ಸ್ವಾಧೀನಪಡಿಸಿಕೊಂಡು, ಧ್ವಂಸಗೊಳಿಸಿದೇವು. ಇಡೀ ಮನೆ ವಿವರ ತಿಳಿಯಲಾಯಿತು. ಮರದ ಎಲ್ಲಾ ಅಂಶಗಳು ಎಣಿಸಿಕೊಂಡು, ಬಳಿಕ ಕಿತ್ತು 2023 ರ ಆರಂಭದಲ್ಲಿ ದಕ್ಷಿಣ ಚಿತ್ರ ಮ್ಯೂಸಿಯಂಗೆ ಸಾಗಿಸಲಾಯಿತು ಎಂದು ಪ್ರವಾಸೋದ್ಯಮ ಇಲಾಖೆಯ ಮಾಜಿ ಕಾರ್ಯದರ್ಶಿ ದಕ್ಷಿಣ ಚಿತ್ರ ಮ್ಯೂಸಿಯಂನ ಲೈಫ್ ಟ್ರಸ್ಟಿ ರತಿ ವಿನಯ್ ಝಾ ತಿಳಿಸಿದ್ದಾರೆ.

ದಕ್ಷಿಣ ಚಿತ್ರ ವಸ್ತುಸಂಗ್ರಹಾಲಯದಲ್ಲಿ ಐನ್ ಮನೆಯ ಕೆಲಸ ಜೂನ್ 2023 ರಲ್ಲಿ ಪ್ರಾರಂಭವಾಗಿತ್ತು. ಇಂದು ಉದ್ಘಾಟನೆಗೆ ಸಿದ್ಧವಾಗಿದೆ. ಐನ್ ಮನೆಯು ಕೊಡವ ಸಮುದಾಯದ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳು, ಆಚರಣೆಗಳು, ಜಾನಪದ ಸಂಸ್ಕೃತಿ, ಉಡುಗೆ ತೊಡುಗೆ ಮತ್ತು ಪಾಕಪದ್ಧತಿಯನ್ನು ಪ್ರದರ್ಶಿಸುವ ವಸ್ತುಗಳಿಂದ ಕೂಡಿದೆ. ಈ ಯೋಜನೆಗೆ ಹುಂಡೈ ಮೋಟಾರ್ಸ್ ಮತ್ತು ಮೊಬಿಸ್ ಇಂಡಿಯಾ ಫೌಂಡೇಶನ್‌ನ ಸಿಎಸ್‌ಆರ್ ವಿಭಾಗ ಬೆಂಬಲ ನೀಡಿದೆ. ಇಂದು ಮತ್ತು ನಾಳೆ ಉದ್ಘಾಟನಾ ಸಮಾರಂಭದಲ್ಲಿ ಕೊಡವ ತಂಡವು ದಕ್ಷಿಣಚಿತ್ರದಲ್ಲಿ ಪ್ರದರ್ಶನ ನೀಡಲಿದೆ.

ಕೊಡವ ಸಂಸ್ಕೃತಿಯ ಕೊಂಡಿ, ಒಗ್ಗಟ್ಟಿನ ಸಂಕೇತ 'ಮಂಧ್'!

ದಕ್ಷಿಣ ಚಿತ್ರ ವಸ್ತುಸಂಗ್ರಹಾಲಯದಲ್ಲಿ ಐನ್ ಮನೆಯ ಕೆಲಸ ಜೂನ್ 2023 ರಲ್ಲಿ ಪ್ರಾರಂಭವಾಗಿತ್ತು. ಇಂದು ಉದ್ಘಾಟನೆಗೆ ಸಿದ್ಧವಾಗಿದೆ. ಐನ್ ಮನೆಯು ಕೊಡವ ಸಮುದಾಯದ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳು, ಆಚರಣೆಗಳು, ಜಾನಪದ ಸಂಸ್ಕೃತಿ, ಉಡುಗೆ ತೊಡುಗೆ ಮತ್ತು ಪಾಕಪದ್ಧತಿಯನ್ನು ಪ್ರದರ್ಶಿಸುವ ವಸ್ತುಗಳಿಂದ ಕೂಡಿದೆ. ಈ ಯೋಜನೆಗೆ ಹುಂಡೈ ಮೋಟಾರ್ಸ್ ಮತ್ತು ಮೊಬಿಸ್ ಇಂಡಿಯಾ ಫೌಂಡೇಶನ್‌ನ ಸಿಎಸ್‌ಆರ್ ವಿಭಾಗ ಬೆಂಬಲ ನೀಡಿದೆ. ಇಂದು ಮತ್ತು ನಾಳೆ ಉದ್ಘಾಟನಾ ಸಮಾರಂಭದಲ್ಲಿ ಕೊಡವ ತಂಡವು ದಕ್ಷಿಣಚಿತ್ರದಲ್ಲಿ ಪ್ರದರ್ಶನ ನೀಡಲಿದೆ.

Comments

bottom of page