top of page

'ಚೀನಾ ಹೊರತುಪಡಿಸಿ, ಎಲ್ಲಾ ದೇಶಗಳಿಗೆ 90 ದಿನಗಳ 'ಸುಂಕ ವಿರಾಮ': ಅಮೆರಿಕ ಅಧ್ಯಕ್ಷ Donald Trump ಘೋಷಣೆ!

  • Writer: new waves technology
    new waves technology
  • Apr 10
  • 1 min read

ಅಮೆರಿಕದ ಸುಂಕ ಹೇರಿಕೆ ಜಗತ್ತಿನಾದ್ಯಂತ ಹೊಸ ಸುಂಕ ಯುದ್ದವನ್ನೇ ಆರಂಭಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಈ ವಿವಾದಾತ್ಮಕ ನಡೆಗೆ ಡೊನಾಲ್ಡ್ ಟ್ರಂಪ್ 90 ದಿನಗಳ ವಿರಾಮ ಘೋಷಣೆ ಮಾಡಿದ್ದಾರೆ.

ವಾಷಿಂಗ್ಟನ್: ಮಹತ್ವದ ಬೆಳವಣಿಗೆಯಲ್ಲಿ ಜಗತ್ತಿನ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿರುವ ಅಮೆರಿಕದ ನೂತನ ಸುಂಕ ಹೇರಿಕೆ ಪ್ರಕ್ರಿಯೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಾತ್ಕಾಲಿಕ ವಿರಾಮ ಘೋಷಿಸಿದ್ದಾರೆ.

ಹೌದು.. ಅಮೆರಿಕದ ಸುಂಕ ಹೇರಿಕೆ ಜಗತ್ತಿನಾದ್ಯಂತ ಹೊಸ ಸುಂಕ ಯುದ್ದವನ್ನೇ ಆರಂಭಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಈ ವಿವಾದಾತ್ಮಕ ನಡೆಗೆ ಡೊನಾಲ್ಡ್ ಟ್ರಂಪ್ 90 ದಿನಗಳ ವಿರಾಮ ಘೋಷಣೆ ಮಾಡಿದ್ದಾರೆ. ಆದರೆ ಈ ಸುಂಕ ವಿರಾಮದಿಂದ ಚೀನಾ ಸೇರಿದಂತೆ ಜಗತ್ತಿನ ಕೆಲ ದೇಶಗಳನ್ನು ದೂರ ಇರಿಸಲಾಗಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

ಡೊನಾಲ್ಡ್ ಟ್ರಂಪ್ ರ ಈ ನಡೆ ಸುಂಕ ಏರಿಕೆ ಕ್ರಮವನ್ನು ಹೇಗೆ ಎದುರಿಸಬೇಕು ಎಂದು ಗೊಂದಲದಲ್ಲಿದ್ದ ಜಗತ್ತಿನ ಹಲವು ದೇಶಗಳಿಗೆ ಯೋಚಿಸಿ ಕ್ರಮ ಕೈಗೊಳ್ಳಲು ಸಮಯ ನೀಡಿದಂತಾಗಿದೆ.

ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್‌ಸೋಶಿಯಲ್‌ ಪೋಸ್ಟ್ ಮಾಡಿರುವ ಟ್ರಂಪ್, ಚೀನಾ ಇನ್ನೂ ತನ್ನ ದೇಶವನ್ನು "ಸುಲಿಗೆ ಮಾಡುತ್ತಿದೆ" . ವಿಶ್ವ ಮಾರುಕಟ್ಟೆಗಳಿಗೆ ಚೀನಾ ತೋರಿಸಿರುವ ಗೌರವದ ಕೊರತೆಯ ಆಧಾರದ ಮೇಲೆ, ಅಮೆರಿಕವು ಚೀನಾಕ್ಕೆ ವಿಧಿಸುವ ಸುಂಕವನ್ನು ಶೇಕಡಾ 125 ಕ್ಕೆ ಹೆಚ್ಚಿಸುತ್ತಿದ್ದೇನೆ, ಇದು ತಕ್ಷಣವೇ ಜಾರಿಗೆ ಬರುತ್ತದೆ.

ಒಂದು ಹಂತದಲ್ಲಿ, ಮುಂದಿನ ದಿನಗಳಲ್ಲಿ, ಅಮೆರಿಕ ಮತ್ತು ಇತರ ದೇಶಗಳನ್ನು ಸುಲಿಗೆ ಮಾಡುವ ದಿನಗಳು ಇನ್ನು ಮುಂದೆ ಸುಸ್ಥಿರ ಅಥವಾ ಸ್ವೀಕಾರಾರ್ಹವಲ್ಲ ಎಂದು ಚೀನಾ ಅರಿತುಕೊಳ್ಳುತ್ತದೆ ಎಂದು ಆಶಿಸುತ್ತೇನೆ ಎಂದು ಟ್ರಂಪ್ ಹೇಳಿದರು.

ಅಂತೆಯೇ ಇದು ಚೀನಾ ಮಾತ್ರವಲ್ಲ.. ಅಮೆರಿಕ ಮೇಲೆ ದುಬಾರಿ ಸುಂಕ ಹೇರುವ ರಾಷ್ಟ್ರಗಳಿಗೂ ಪಾಠವಾಗಲಿದೆ. ನಾನು 90 ದಿನಗಳ ವಿರಾಮವನ್ನು ಅಧಿಕೃತಗೊಳಿಸಿದ್ದೇನೆ ಎಂದು ಹೇಳಿದ್ದಾರೆ.

ಷೇರುಮಾರುಕಟ್ಟೆ ಏರಿಕೆ

ಇನ್ನು ಸುಂಕ ಏರಿಕೆ ನಿರ್ಧಾರಕ್ಕೆ ಟ್ರಂಪ್ ತಾತ್ಕಾಲಿಕ ವಿರಾಮ ಘೋಷಿಸಿದ ಬೆನ್ನಲ್ಲೇ ಅಮೆರಿಕ ಷೇರು ಮಾರುಕಟ್ಟೆ ಏರಿಕೆಯಾಗಿದ್ದು, ವಾಲ್ ಸ್ಟ್ರೀಟ್ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿವೆ.

Comments


bottom of page