ಟರ್ಕಿ: ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಸಂಸ್ಥೆಯ ಮೇಲೆ ಉಗ್ರ ದಾಳಿ, 4 ಸಾವು, 14 ಮಂದಿಗೆ ಗಾಯ
- new waves technology
- Oct 24, 2024
- 1 min read
ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಅವರು ಎಕ್ಸ್ ಪೋಸ್ಟ್ ಮೂಲಕ ಈ ದಾಳಿಯನ್ನು ಖಚಿತಪಡಿಸಿದ್ದಾರೆ.

ಟರ್ಕಿ: ಬುಧವಾರ ಟರ್ಕಿಯ ಸರ್ಕಾರಿ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿ TUSAS ಆವರಣದಲ್ಲಿ ಇಬ್ಬರು ಭಯೋತ್ಪಾದಕರು ಸ್ಫೋಟಕಗಳನ್ನು ಮತ್ತು ಗುಂಡಿನ ದಾಳಿ ನಡೆಸಿದ ಪರಿಣಾಮ 4 ಮಂದಿ ಸಾವನ್ನಪ್ಪಿದ್ದು ಹದಿನಾಲ್ಕು ಮಂದಿ ಗಾಯಗೊಂಡಿದ್ದಾರೆ.
ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಅವರು ಎಕ್ಸ್ ಪೋಸ್ಟ್ ಮೂಲಕ ಈ ದಾಳಿಯನ್ನು ಖಚಿತಪಡಿಸಿದ್ದಾರೆ.
ಇಬ್ಬರು ದಾಳಿಕೋರರು, ಒಬ್ಬ ಪುರುಷ ಮತ್ತು ಮಹಿಳೆ ಕೂಡ ಸಾವನ್ನಪ್ಪಿದ್ದಾರೆ ಎಂದು ಆಂತರಿಕ ಸಚಿವ ಅಲಿ ಯರ್ಲಿಕಾಯಾ ತಿಳಿಸಿದ್ದಾರೆ.
“ನಮ್ಮಲ್ಲಿ ನಾಲ್ವರು ಹುತಾತ್ಮರಿದ್ದಾರೆ. 14 ಮಂದಿ ಗಾಯಗೊಂಡಿದ್ದಾರೆ. ಈ ಭೀಕರ ಭಯೋತ್ಪಾದಕ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದು ಎರ್ಡೊಗನ್ ರಷ್ಯಾದಲ್ಲಿ ನಡೆದ ಬ್ರಿಕ್ಸ್ ಸಭೆಯ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಹೇಳಿದರು.
26/11 ಉಗ್ರ ದಾಳಿ: ಮೂರು ದಿನ ಎದೆಗುಂದದೇ ತಾಜ್ ಪ್ಯಾಲೇಸ್ ನಲ್ಲಿದ್ದರು ರತನ್ ಟಾಟಾ!
ಉಗ್ರ ದಾಳಿಗೆ ಪುಟಿನ್ ಸಂತಾಪ ಸೂಚಿಸಿದರು. ವಾಷಿಂಗ್ಟನ್ "ಇಂದಿನ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತದೆ" ಎಂದು ಯುಎಸ್ ರಾಯಭಾರ ಕಚೇರಿ ಹೇಳಿಕೆ ತಿಳಿಸಿದೆ.
ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದು ಸ್ಪಷ್ಟವಾಗಿಲ್ಲ. ಕುರ್ದಿಶ್ ಉಗ್ರಗಾಮಿಗಳು, ಇಸ್ಲಾಮಿಕ್ ಸ್ಟೇಟ್ ಗುಂಪು ಮತ್ತು ಎಡಪಂಥೀಯ ಉಗ್ರರು ಈ ಹಿಂದೆಯೂ ದೇಶದಲ್ಲಿ ದಾಳಿ ನಡೆಸಿದ್ದರು.
ಸ್ಥಳದಲ್ಲಿ ಗುಂಡಿನ ಚಕಮಕಿ ಮುಂದುವರಿದಿದ್ದು, ಕಾಂಪ್ಲೆಕ್ಸ್‌ನಲ್ಲಿರುವ ಕೆಲವು ಸಿಬ್ಬಂದಿಯನ್ನು ಒತ್ತೆಯಾಳಾಗಿ ತೆಗೆದುಕೊಂಡಿರಬಹುದು ಎಂದು ಎನ್‌ಟಿವಿ ಹೇಳಿದೆ. ಅಂಕಾರಾದ ಕಹ್ರಾಮಂಕಜನ್ ಜಿಲ್ಲೆಯ ಆವರಣದ ಮೇಲೆ ಹೆಲಿಕಾಪ್ಟರ್‌ಗಳು ಹಾರುತ್ತಿರುವುದು ಕಂಡುಬಂದಿದೆ ಎಂದು ಮಾಧ್ಯಮ ವರದಿ ಮಾಡಿದೆ.
Comments