top of page

ಟಾಯ್ಲೆಟ್ ಗುಂಡಿಯಲ್ಲಿ ನವಜಾತ ಶಿಶು ಎಸೆದು ಪರಾರಿ: ರಾಮನಗರ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ

  • Writer: new waves technology
    new waves technology
  • Nov 28, 2024
  • 1 min read

ಟಾಯ್ಲೆಟ್ ಗುಂಡಿಯಲ್ಲಿ ಮೃತದೇಹವಿರುವುದನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಬೆಚ್ಚಿಬಿದ್ದು ವಿಷಯ ತಿಳಿಸಿದ್ದಾರೆ.











ರಾಮನಗರ: ಅಮಾನವೀಯ ಘಟನೆಯೆಂಬಂತೆ ರಾಮನಗರದಲ್ಲಿ ಎರಡು ದಿನದ ಹಿಂದಷ್ಟೇ ಹುಟ್ಟಿದ ಮಗುವನ್ನು ಆಸ್ಪತ್ರೆ ಟಾಯ್ಲೆಟ್‌ನಲ್ಲಿ ಹಾಕಿ ಫ್ಲಶ್ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ರಾಮನಗರದ ದಯಾನಂದ್ ಸಾಗರ್ ಆಸ್ಪತ್ರೆಯಲ್ಲಿ ಈ ಹೇಯ ಕೃತ್ಯ ನಡೆದಿದ್ದು, ಟಾಯ್ಲೆಟ್ ಪರಿಶೀಲನೆ ವೇಳೆ ಶಿಶುವಿನ ಶವ ಪತ್ತೆಯಾಗಿದೆ. ಟಾಯ್ಲೆಟ್ ಗುಂಡಿಯಲ್ಲಿ ಮೃತದೇಹವಿರುವುದನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಬೆಚ್ಚಿಬಿದ್ದು ವಿಷಯ ತಿಳಿಸಿದ್ದಾರೆ.


ಶಿಶುವಿನ ತಾಯಿಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಟಾಯ್ಲೆಟ್ ಗುಂಡಿಯಲ್ಲಿ ಎರಡು ದಿನದ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಹಾರೋಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮಗುವಿನ ತಾಯಿ ಯಾರು, ಈ ಕೃತ್ಯ ಎಸಗಿದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಈ ಘಟನೆ ನಡೆದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

Kommentare


bottom of page