ಡಿ.ಕೆ ಶಿವಕುಮಾರ್ CM ಆಗೋದು ಕಷ್ಟ; ಯಾರಾದ್ರೂ ನಮಸ್ಕಾರ ಅಂದ್ರೆ... ಹಾ.. ಅಂತಾರೆ; ಪಬ್ಲಿಕ್ ಕಾಂಟ್ಯಾಕ್ಟ್ ನಲ್ಲಿ ಫೇಲ್: DCM ಆಪ್ತ ಹೇಳಿದ್ದೇನು?
- new waves technology
- 4 days ago
- 1 min read
ಡಿ.ಕೆ ಶಿವಕುಮಾರ್ ಶಾಸಕರನ್ನು ಕಡೆಗಣಿಸುತ್ತಾರೆ, ಜನರಿಗಾಗಿ ಸಮಯ ಮೀಸಲಿಡುವುದಿಲ್ಲ, ಅವರಿಗೆ ವಿರೋಧಿಗಳು ಹೆಚ್ಚಿದ್ದಾರೆ, ಅವರ ನಡವಳಿಕೆಗಳೇ ತೊಡಕಾಗಿವೆ ಎಂದಿದ್ದಾರೆ.

ರಾಮನಗರ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗೋದು ಕಷ್ಟ, ಈ ಅವಧಿಯಲ್ಲಿ ಸಿಎಂ ಸ್ಥಾನ ಸಿಗುವುದು ಸುಲಭ ಅಲ್ಲ. ನಮ್ಮ ಸ್ನೇಹಿತ ಶಿವಕುಮಾರ್, ಪಬ್ಲಿಕ್ ಕಾಂಟ್ಯಾಕ್ಟ್ ನಲ್ಲಿ ಬಹಳ ಫೇಲ್ ಆಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅತ್ಯಾಪ್ತ, ಮಾಜಿ ಕಾಂಗ್ರೆಸ್ ಶಾಸಕ ಸಿ ಎಂ ಲಿಂಗಪ್ಪ ಹೇಳಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಕಷ್ಟ ಎಂದಿದ್ದಾರೆ. ಸಾರ್ವಜನಿಕ ಸಂಪರ್ಕದಲ್ಲಿ ಶಿವಕುಮಾರ್ ವಿಫಲರಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಶಾಸಕರನ್ನು ಕಡೆಗಣಿಸುತ್ತಾರೆ, ಜನರಿಗಾಗಿ ಸಮಯ ಮೀಸಲಿಡುವುದಿಲ್ಲ ಎಂದು ಲಿಂಗಪ್ಪ ಹೇಳಿದ್ದಾರೆ. ಶಿವಕುಮಾರ್‌ಗೆ ವಿರೋಧಿಗಳು ಹೆಚ್ಚಿದ್ದಾರೆ, ಅವರ ನಡವಳಿಕೆಗಳೇ ತೊಡಕಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿ ಸಿಎಂ ಆಗಲು ಅವಕಾಶ ಸಿಗುವುದು ಕಷ್ಟ ಎಂದು ಲಿಂಗಪ್ಪ ಹೇಳಿದ್ದಾರೆ.
ನಾನು ಕಟುಸತ್ಯ ಹೇಳಬೇಕಾಗುತ್ತದೆ. ನಮ್ಮ ಸ್ನೇಹಿತರು ಶಿವಕುಮಾರ್, ಪಬ್ಲಿಕ್ ಕಾಂಟ್ಯಾಕ್ಟ್ ನಲ್ಲಿ ಬಹಳ ಫೇಲ್ ಆಗಿದ್ದಾರೆ. ನಾನು ಹಿಂದಿನಿಂದ ಅವರಿಗೆ ಸಲಹೆ ಕೊಟ್ಟಿದ್ದೇವೆ. ನಿಮ್ಮ ಸಿಸ್ಟಮ್ ಸರಿಯಿಲ್ಲ ಎಂದು ಹೇಳಿದ್ದೇನೆ . ಯಾರೋ ಇಬ್ಬರನ್ನ ಮಾತನಾಡಿಸಿ ಕಾರ್ ಹತ್ತಿ ಹೋಗೋದಲ್ಲ. ಪ್ರತಿದಿನ ಜನರಿಗಾಗಿ 1 ಗಂಟೆ ಮೀಸಲಿಡಬೇಕು. ಜೊತೆಗೆ ಶಾಸಕರನ್ನ ಕಂಡರು ಕಾಣದಂತೆ ಹೋಗ್ತಾರೆ. ಇಂತಹ ಶಾಸಕರು ಎಂದು ಗೊತ್ತಿರುತ್ತದೆ ಆದರೆ ಮರೆತಂತೆ ಹೊರಟು ಹೋಗ್ತಾರೆ. ಇದರಿಂದಾಗಿ ಅವರಿಗೆ ಶಾಸಕರ ಬಲ ಕಡಿಮೆ ಇದೆ. ಅವರ ನಡವಳಿಕೆಗಳು ಅವರಿಗೆ ತೊಡಕಾಗ್ತಿದೆ ಎಂದು ಹೇಳಿದ್ದಾರೆ.
ಯಾರಾದರೂ ನಮಸ್ಕಾರ ಎಂದ್ರೆ...ಹಾ.. ಎನ್ನುತ್ತಾರೆ. ಅದನ್ನು ಹೇಳಿದ್ದೀವಿ, ನಮಸ್ಕಾರ ಅಂದ್ರೆ ನೀವು ನಮಸ್ಕಾರ ಅನ್ನಿ ಎಂದಿದ್ದೇವೆ ಈಗ ಅವರಿಗೆ ಏನು ಸಲಹೆ ಕೊಡಲ್ಲ, ಪ್ರಯೋಜನವೂ ಆಗಲ್ಲ. ನನಗೆ ಅವರ ಮೇಲೆ ಅಸಮಾಧಾನ, ಅತೃಪ್ತಿ ಇಲ್ಲ. ಅವರನ್ನ ಮೀಟ್ ಮಾಡೋದೆ ಕಷ್ಟ, ಸಿಕ್ಕಿದ್ರೂ ನಾಳೆ ಸಿಗು ಅಂತಾರೆ ಎಂದು ಹೇಳಿದ್ದಾರೆ.
Comments