top of page

'ತಪ್ಪಾಯ್ತು ದಯವಿಟ್ಟು ಕ್ಷಮಿಸಿ': ಕನ್ನಡಿಗರು, ಕರ್ನಾಟಕದ ವಿರುದ್ಧ ಅವಾಚ್ಯ ನಿಂದನೆ ಮಾಡಿದ್ದ Instagrammer ಕ್ಷಮೆ ಯಾಚನೆ!

  • Writer: new waves technology
    new waves technology
  • Oct 30, 2024
  • 1 min read

ಬೆಂಗಳೂರು ಪೊಲೀಸರು ಮತ್ತು ಮುಂಬೈ ಪೊಲೀಸರ ಎಚ್ಚರಿಕೆ ಬಳಿಕ Instagrammer ದೇವ್ ಶರ್ಮಾ ಇದೀಗ ವಿಡಿಯೋ ಮಾಡಿ ಕನ್ನಡಿಗರು ಮತ್ತು ಕರ್ನಾಟಕದ ಕ್ಷಮೆ ಯಾಚಿಸಿದ್ದಾನೆ.











ಬೆಂಗಳೂರು: ಕನ್ನಡಿಗರು, ಕರ್ನಾಟಕದ ವಿರುದ್ಧ ಅವಾಚ್ಯ ನಿಂದನೆ ಮಾಡಿ ವಿಡಿಯೋ ಮಾಡಿದ್ದ ಮಹಾರಾಷ್ಟ್ರ ಮೂಲದ Instagrammer ಕೊನೆಗೂ ಕ್ಷಮೆ ಯಾಚಿಸಿದ್ದಾನೆ.

ಬೆಂಗಳೂರು ಪೊಲೀಸರು ಮತ್ತು ಮುಂಬೈ ಪೊಲೀಸರ ಎಚ್ಚರಿಕೆ ಬಳಿಕ Instagrammer ದೇವ್ ಶರ್ಮಾ ಇದೀಗ ವಿಡಿಯೋ ಮಾಡಿ ಕನ್ನಡಿಗರು ಮತ್ತು ಕರ್ನಾಟಕದ ಕ್ಷಮೆ ಯಾಚಿಸಿದ್ದಾನೆ.


ಈ ಕುರಿತು ವಿಡಿಯೋ ಮಾಡಿರುವ ದೇವ್ ಶರ್ಮಾ, 'ಇಂದು ನನ್ನ ಮನೆಗೆ ಮಹಾರಾಷ್ಟ್ರ ಪೊಲೀಸರು ಬಂದಿದ್ದರು. ನನ್ನ ವಿಡಿಯೋಗಳ ಕುರಿತು ನನಗೆ ಅರಿವು ಮೂಡಿಸಿದರು. ಇದೀಗ ನನ್ನ ತಪ್ಪಿನ ಅರಿವು ನನಗಾಗಿದೆ. ಆ ವಿಡಿಯೋಗಳೆಲ್ಲವೂ ನಾನು ಕೋಪದಿಂದ ಮಾಡಿದ್ದು. ಇನ್ನು ಮುಂದೆ ಇಂತಹ ವಿಡಿಯೋಗಳನ್ನು ಮಾಡಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆಎಂದಿದ್ದಾನೆ.

ಅಲ್ಲದೆ ಇನ್ನು ಮುಂದೆ ಯಾರಿಗೂ ನೋವಾಗದ ರೀತಿಯಲ್ಲಿ ಕ್ರಿಯಾತ್ಮಕ ವಿಡಿಯೋಗಳನ್ನು ಮಾಡುತ್ತೇನೆ. ದಯವಿಟ್ಟು ಕ್ಷಮಿಸಿ.. ನನ್ನ ತಪ್ಪಿನ ಅರಿವು ಮೂಡಿಸಿದ್ದಕ್ಕಾಗಿ ಬೆಂಗಳೂರು ಮತ್ತು ಮುಂಬೈ ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ ಎಂದು ದೇವ್ ಶರ್ಮಾ ಹೇಳಿದ್ದಾನೆ.

ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದ ದೇವ್ ಶರ್ಮಾ

ಇನ್ನು ಈ Instagrammer ದೇವ್ ಶರ್ಮಾ ತನ್ನ ಖಾತೆಯಲ್ಲಿ ಕನ್ನಡಿಗರು ಮತ್ತು ಕರ್ನಾಟಕದ ಕುರಿತು ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿ ವ್ಯಾಪಕ ವಿರೋಧ ಎದುರಿಸುತ್ತಿದ್ದ. ಕನ್ನಡಿಗರು ನೀವೇನಾದರೂ ನನ್ನ ಮುಂದೆ ಬಂದರೆ ನಿಮಗೊಂದು ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈತನ ವಿಡಿಯೋಗಳನ್ನು ಕನ್ನಡಿಗರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

Comments


bottom of page