top of page

ದೆಹಲಿ ಕಾಲ್ತುಳಿತ; ಘಟನೆಯ ವಿಡಿಯೋಗಳನ್ನು ತೆಗೆದುಹಾಕುವಂತೆ 'X'ಗೆ ರೈಲ್ವೆ ಸಚಿವಾಲಯ ಸೂಚನೆ

  • Writer: new waves technology
    new waves technology
  • Feb 21
  • 1 min read

ಅಧಿಕೃತ ಅಂಕಿಅಂಶಗಳ ಪ್ರಕಾರ, ದೆಹಲಿ ಕಾಲ್ತುಳಿತದಲ್ಲಿ ಒಂಬತ್ತು ಮಹಿಳೆಯರು, ನಾಲ್ಕು ಪುರುಷರು ಮತ್ತು ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವಿಗೀಡಾಗಿದ್ದರು. 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ನವದೆಹಲಿ: ಫೆಬ್ರುವರಿ 15 ರಂದು ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದ ವಿಡಿಯೋಗಳಿರುವ 285 ಸೋಶಿಯಲ್ ಮೀಡಿಯಾ ಲಿಂಕ್‌ಗಳನ್ನು ತೆಗೆದುಹಾಕುವಂತೆ ರೈಲ್ವೆ ಸಚಿವಾಲಯ 'X'ಗೆ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79(3)(ಬಿ) ಅಡಿಯಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಟೇಕ್‌ಡೌನ್ ಸೂಚನೆಗಳನ್ನು ನೀಡಲು ರೈಲ್ವೆ ಸಚಿವಾಲಯ ಅದರ ಮಾಹಿತಿ ಮತ್ತು ಪ್ರಚಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ (ರೈಲ್ವೆ ಮಂಡಳಿ) ಡಿಸೆಂಬರ್ 24 ರಂದು ಅಧಿಕಾರ ನೀಡಿದೆ. ಈ ಹಿಂದೆ ಐಟಿ ಸಚಿವಾಲಯದ ಸೆಕ್ಷನ್ 69ಎ ನಿರ್ಬಂಧಕ ಸಮಿತಿಯ ಮೂಲಕ ಇಂತಹ ಮನವಿಗಳನ್ನು ಮಾಡಲಾಗುತ್ತಿತ್ತು.

'ಮೃತ ವ್ಯಕ್ತಿಗಳನ್ನು ಚಿತ್ರಿಸುವಂತಹ' ವಿಡಿಯೋಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಅನೇಕ ಖಾತೆಗಳಿಂದ ಟ್ವೀಟ್‌ಗಳನ್ನು ತೆಗೆದುಹಾಕಲು ಸಚಿವಾಲಯವು ಸಾಮಾಜಿಕ ಮಾಧ್ಯಮಕ್ಕೆ 36 ಗಂಟೆಗಳ ಕಾಲಾವಕಾಶ ನೀಡಿದೆ' ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ದೆಹಲಿ ಕಾಲ್ತುಳಿತದಲ್ಲಿ ಒಂಬತ್ತು ಮಹಿಳೆಯರು, ನಾಲ್ಕು ಪುರುಷರು ಮತ್ತು ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವಿಗೀಡಾಗಿದ್ದರು. 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಂದಾಜಿನ ಪ್ರಕಾರ, ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗ್‌ರಾಜ್‌ಗೆ ತೆರಳಲೆಂದು 50,000ಕ್ಕೂ ಹೆಚ್ಚು ಜನರು ನವದೆಹಲಿ ರೈಲು ನಿಲ್ದಾಣವನ್ನು ತಲುಪಿದ್ದರು.


ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಯಲು ಸುರಕ್ಷತಾ ಕ್ರಮಗಳನ್ನು ತಕ್ಷಣವೇ ಜಾರಿಗೊಳಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ, ಭಾರತೀಯ ರೈಲ್ವೆ ಮತ್ತು ರೈಲ್ವೆ ಮಂಡಳಿಗೆ ನೋಟಿಸ್ ಜಾರಿ ಮಾಡಿತ್ತು.

Commentaires


bottom of page