ದೆಹಲಿಯಲ್ಲಿ ಮಾ. 31ರ ನಂತರ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಪೆಟ್ರೋಲ್ ಇಲ್ಲ: ಪರಿಸರ ಸಚಿವ ಸಿರ್ಸಾ
- new waves technology
- Mar 1
- 1 min read
ದೆಹಲಿ ಸರ್ಕಾರವು ಈ ನಿರ್ಧಾರದ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ಮಾಹಿತಿ ನೀಡುತ್ತದೆ ಎಂದು ಅವರು ತಿಳಿಸಿದರು.

ನವದೆಹಲಿ: ಮಾರ್ಚ್ 31 ರ ನಂತರ ದೆಹಲಿ ಸರ್ಕಾರವು ನಗರದಾದ್ಯಂತದ ಪೆಟ್ರೋಲ್ ಪಂಪ್ ಗಳಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಪೆಟ್ರೋಲ್ ಹಾಕುವುದನ್ನು ನಿಲ್ಲಿಸಲಾಗುವುದು ಎಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರು ಶನಿವಾರ ಪ್ರಕಟಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಕ್ರಮಗಳ ಕುರಿತು ಚರ್ಚಿಸಲು ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿರ್ಸಾ ಅವರು, ವಾಹನಗಳ ಹೊರಸೂಸುವಿಕೆ ಮತ್ತು ಮಾಲಿನ್ಯ ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
ಹಳೆಯ ವಾಹನಗಳ ಮೇಲಿನ ನಿರ್ಬಂಧಗಳು, ಕಡ್ಡಾಯ ಹೊಗೆ ನಿಯಂತ್ರಕ ಕ್ರಮಗಳು ಮತ್ತು ವಿದ್ಯುತ್ ಸಾರ್ವಜನಿಕ ಸಾರಿಗೆ ಬಳಕೆ ಸೇರಿದಂತೆ ಪ್ರಮುಖ ನೀತಿ ನಿರ್ಧಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
"ನಾವು ಪೆಟ್ರೋಲ್ ಪಂಪ್‌ಗಳಲ್ಲಿ ಗ್ಯಾಜೆಟ್‌ಗಳನ್ನು ಹಾಕುತ್ತಿದ್ದೇವೆ, ಅದು 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಗುರುತಿಸುತ್ತದೆ ಮತ್ತು ಅವುಗಳಿಗೆ ಯಾವುದೇ ಇಂಧನ ಹಾಕುವುದಿಲ್ಲ" ಎಂದು ಸಿರ್ಸಾ ಹೇಳಿದ್ದಾರೆ.
ದೆಹಲಿ ಸರ್ಕಾರವು ಈ ನಿರ್ಧಾರದ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ಮಾಹಿತಿ ನೀಡುತ್ತದೆ ಎಂದು ಅವರು ತಿಳಿಸಿದರು.
ಹಳೆಯ ವಾಹನಗಳಿಗೆ ಇಂಧನ ಪೂರೈಕೆಯನ್ನು ನಿರ್ಬಂಧಿಸುವುದರ ಜೊತೆಗೆ, ರಾಜಧಾನಿಯಲ್ಲಿರುವ ಎಲ್ಲಾ ಎತ್ತರದ ಕಟ್ಟಡಗಳು, ಹೋಟೆಲ್‌ಗಳು ಮತ್ತು ವಾಣಿಜ್ಯ ಸಂಕೀರ್ಣಗಳು ವಾಯು ಮಾಲಿನ್ಯ ಮಟ್ಟವನ್ನು ನಿಗ್ರಹಿಸಲು ಹೊಗೆ ನಿಯಂತ್ರಕ ಗನ್ ಗಳನ್ನು ಅಳವಡಿಸಬೇಕು ಎಂದು ಸಿರ್ಸಾ ಹೇಳಿದರು.
ಇದಲ್ಲದೆ, ಡಿಸೆಂಬರ್ 2025 ರ ವೇಳೆಗೆ ದೆಹಲಿಯಲ್ಲಿ ಸುಮಾರು ಶೇಕಡ 90 ರಷ್ಟು ಸಾರ್ವಜನಿಕ ಸಿಎನ್‌ಜಿ ಬಸ್‌ಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲಾಗುವುದು ಮತ್ತು ಅವುಗಳನ್ನು ವಿದ್ಯುತ್ ಬಸ್‌ಗಳೊಂದಿಗೆ ಬದಲಾಯಿಸಲಾಗುವುದು ಎಂದು ಅವರು ತಿಳಿಸಿದರು.
Comments