top of page

ನಡು ರಸ್ತೆಯಲ್ಲೇ 6 ಕೋಟಿ ರೂ ಮೌಲ್ಯದ Lamborghini ಕಾರಲ್ಲಿ ಡೇಂಜರಸ್ ಸ್ಟಂಟ್! Video Viral

  • Writer: new waves technology
    new waves technology
  • Jun 16
  • 1 min read

ಹರ್ಯಾಣದ ದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬರೊಬ್ಬರಿ 6 ಕೋಟಿ ರೂ ಮೌಲ್ಯದ ದುಬಾರಿ Lamborghini ಕಾರಿನಲ್ಲಿ ಯುವಕನೋರ್ವ ಅಪಾಯಕಾರಿ ಸ್ಟಂಟ್ಸ್ ಪ್ರದರ್ಶಿಸಿದ್ದು ರಸ್ತೆ ಮೇಲೆ ಕಾರನ್ನು ಅಪಾಯಕಾರಿ ಚಾಲನೆ ಮಾಡಿದ್ದಾನೆ.

ಗುರುಗ್ರಾಮ್: ಯುವಕನೊಬ್ಬ 6 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಘಿನಿ ಕಾರಿನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.

ಹರ್ಯಾಣದ ದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬರೊಬ್ಬರಿ 6 ಕೋಟಿ ರೂ ಮೌಲ್ಯದ ದುಬಾರಿ Lamborghini ಕಾರಿನಲ್ಲಿ ಯುವಕನೋರ್ವ ಅಪಾಯಕಾರಿ ಸ್ಟಂಟ್ಸ್ ಪ್ರದರ್ಶಿಸಿದ್ದು ರಸ್ತೆ ಮೇಲೆ ಕಾರನ್ನು ಅಪಾಯಕಾರಿ ಚಾಲನೆ ಮಾಡಿದ್ದಾನೆ. ಇದರಿಂದ ತಾನು ಮಾತ್ರವಲ್ಲದೇ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನಗಳನ್ನೂ ಅಪಾಯಕ್ಕೆ ದೂಡುವ ಕೆಲಸ ಮಾಡಿದ್ದಾನೆ.

ಗುರುಗ್ರಾಮ್‌ನ ಅತ್ಯಂತ ಜನನಿಬಿಡ ಮತ್ತು ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಒಂದಾದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಯುವಕ ಬೇಕಾಬಿಟ್ಟಿ ಚಾಲನೆ ಮಾಡಿದ್ದು, ದುಬಾರಿ ಲ್ಯಾಂಬೋರ್ಘಿನಿ ಕಾರಿನಲ್ಲಿ ಅಪಾಯಕಾರಿ ಕಾರು ಸಾಹಸಗಳನ್ನು ಪ್ರದರ್ಶಿಸುತ್ತಿರುವುದನ್ನು ಕಾಣಬಹುದು.

ಶನಿವಾರ ತಡರಾತ್ರಿ ಅಥವಾ ಭಾನುವಾರ ಮುಂಜಾನೆ ಈ ವಿಡಿಯೋವನ್ನು ಕಾರಿನ ಹಿಂದೆ ಬರುತ್ತಿದ್ದ ಕಾರು ಚಾಲಕರೊಬ್ಬರು ಇದನ್ನು ಚಿತ್ರೀಕರಿಸಿದ್ದಾರೆ. ಈ ದೃಶ್ಯದಲ್ಲಿ, ಚಾಲಕನು ಐಷಾರಾಮಿ ಸ್ಪೋರ್ಟ್ಸ್ ಕಾರನ್ನು ಅತಿ ವೇಗದಲ್ಲಿ ಚಲಾಯಿಸುತ್ತಿರುವುದನ್ನು ತೋರಿಸುತ್ತದೆ.

ಲ್ಯಾಂಬೋರ್ಗಿನಿ ರೇಸ್

ಇನ್ನು ಯುವಕ ತನ್ನ ಲ್ಯಾಂಬೋರ್ಗಿನಿ ಕಾರನ್ನು ಇತರೆ ಕಾರಿನೊಂದಿಗೆ ರೇಸ್ ಗೆ ಇಳಿಸಿದ್ದು ಇದೇ ಕಾರಣಕ್ಕೆ ಚಾಲಕ ವೇಗವಾಗಿ ಕಾರು ಚಲಾಯಿಸಿದ್ದಾನೆ ಎನ್ನಲಾಗಿದೆ. ಸಾಹಸಗಳ ಸಮಯದಲ್ಲಿ ಯುವಕ ಅಶ್ಲೀಲ ಕೈ ಸನ್ನೆಗಳನ್ನು ಸಹ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸರಿಸುಮಾರು 45 ಸೆಕೆಂಡುಗಳಷ್ಟು ಉದ್ದದ ಈ ವೀಡಿಯೊದಲ್ಲಿ, ಹುರಾಕನ್ ಅಥವಾ ಅವೆಂಟಡಾರ್ ಮಾದರಿಯದ್ದಾಗಿರಬಹುದು ಎಂದು ಶಂಕಿಸಲಾಗಿರುವ ಹಳದಿ ಲ್ಯಾಂಬೋರ್ಘಿನಿ ಕಾರನ್ನು ಅಪಾಯಕಾರಿಯಾಗಿ ಲೇನ್‌ಗಳಾದ್ಯಂತ ತಿರುಗಿಸುತ್ತಾ, ವೇಗವಾಗಿ ಚಲಾಯಿಸಲಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕಾರು ಚಲಾಯಿಸುತ್ತಿರುವಾಗ ಚಾಲಕ ಕಾರಿನ ಕಿಟಕಿಂದ ಹೊರಗೆ ಬಂದು ಕೂಗುತ್ತಾ ಅಶ್ಲೀಲವಾಗಿ ಸನ್ಹೆ ಮಾಡುತ್ತಿದ್ದ. ಲಂಬೋರ್ಘಿನಿಯ ಪರವಾನಗಿ ಫಲಕ ಭಾಗಶಃ ಗೋಚರಿಸುತ್ತಿದ್ದು, ಅಧಿಕಾರಿಗಳು ಈ ವಿವರವನ್ನು ಬಳಸಿಕೊಂಡು ವ್ಯಕ್ತಿಯನ್ನು ಗುರುತಿಸಿ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

Commentaires


bottom of page