top of page

ನಮ್ಮ ಸಂವಿಧಾನ, ನಮ್ಮ ಹೆಮ್ಮೆ: ಅಂಬೇಡ್ಕರ್ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ಯಾವ ಹಕ್ಕಿದೆ? - ಬಿಜೆಪಿ

  • Writer: new waves technology
    new waves technology
  • Jan 9
  • 2 min read

‘ಸಂವಿಧಾನ ಸನ್ಮಾನ’ ಮತ್ತು ‘ನಮ್ಮ ಸಂವಿಧಾನ, ನಮ್ಮ ಹೆಮ್ಮೆ’ ಅಭಿಯಾನದ ಅಂಗವಾಗಿ ಇಂದು ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಯಿತು.

ಬೆಂಗಳೂರು: ಸಂವಿಧಾನದ ಪರ, ಮೀಸಲಾತಿ ಪರ ತಿದ್ದುಪಡಿಗಳನ್ನು ಬಿಜೆಪಿ ಮಾಡಿದೆ ಮತ್ತು ಡಾ. ಅಂಬೇಡ್ಕರ್ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಯಾವ ಹಕ್ಕಿದೆ ಎಂದು ಕರ್ನಾಟಕ ಬಿಜೆಪಿ ಗುರುವಾರ ಪ್ರಶ್ನಿಸಿದೆ?

‘ಸಂವಿಧಾನ ಸನ್ಮಾನ’ ಮತ್ತು ‘ನಮ್ಮ ಸಂವಿಧಾನ, ನಮ್ಮ ಹೆಮ್ಮೆ’ ಅಭಿಯಾನದ ಅಂಗವಾಗಿ ಇಂದು ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಯಿತು

ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಎಂಎಲ್‌ಸಿ ಸಿ.ಟಿ. ರವಿ ಮತ್ತು ಇತರರು ಭಾಗವಹಿಸಿದ್ದರು.


ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, "2015 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. ಸಂವಿಧಾನದ ಬಗ್ಗೆ ಗೌರವ ಮತ್ತು ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ" ಎಂದು ಹೇಳಿದರು.

"ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ 1920 ರಿಂದ ಅವರ ನಿಧನದವರೆಗೆ ಅವರನ್ನು ಪ್ರತಿ ಹಂತದಲ್ಲೂ ಹಿಂದಕ್ಕೆ ತಳ್ಳಿದವರು, ಅವರನ್ನು ಅವಮಾನಿಸಿ ಸೋಲಿಸಿದ ಕಾಂಗ್ರೆಸ್‌ನವರಿಗೆ ಇವತ್ತು ಡಾ. ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಏನು ಯೋಗ್ಯತೆ ಇದೆ ಎಂದು ಪ್ರಶ್ನಿಸಿದರು.

ಅಂಬೇಡ್ಕರ್ ಅವರಿಗೆ ಅವಮಾನ ಆದಲ್ಲೆಲ್ಲ ಅದನ್ನು ಅಳಿಸಿ ಅವರಿಗೆ ಗೌರವ ತರುವ ಕೆಲಸವನ್ನು ಬಿಜೆಪಿ- ಮತ್ತು ಪ್ರಧಾನಿ ಮೋದಿ ಅವರು ಮಾಡಿದ್ದಾರೆ. ಸಂವಿಧಾನ ಬದಲಿಸಿದ್ದು ಯಾರು? ಸಂವಿಧಾನಕ್ಕೆ ಶಕ್ತಿ ತುಂಬಿದ್ದು ಯಾರೆಂಬ ವಿಷಯವನ್ನು ನಾವು ನಮ್ಮ ಸಂವಿಧಾನ-ನಮ್ಮ ಹೆಮ್ಮೆ ಅಭಿಯಾನದಲ್ಲಿ ಹೇಳುತ್ತಿದ್ದೇವೆ ಎಂದರು.

ಸಂವಿಧಾನವನ್ನು ಅಂಗೀಕರಿಸಿದ ದಿನವಾದ ನವೆಂಬರ್ 26 ರಿಂದ ಅದು ಜಾರಿಗೆ ಬಂದ ದಿನವಾದ ಜನವರಿ 26 ರವರೆಗೆ ಎರಡು ತಿಂಗಳ ಕಾಲ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದೆ. ಜಿಲ್ಲಾ ಮಟ್ಟದ ಅಭಿಯಾನದ ನಂತರ, ಈಗ ಮಂಡಲ ಮಟ್ಟದಲ್ಲಿ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.

ಇಲ್ಲಿಯವರೆಗೆ, ಸಂವಿಧಾನಕ್ಕೆ 106 ತಿದ್ದುಪಡಿಗಳನ್ನು ಮಾಡಲಾಗಿದೆ. ಇವುಗಳಲ್ಲಿ, ಬಿಜೆಪಿ ಕೇವಲ 22 ತಿದ್ದುಪಡಿಗಳನ್ನು ಮಾಡಿದೆ. ಈ ಪೈಕಿ 14 ತಿದ್ದುಪಡಿಗಳನ್ನು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಮತ್ತು 8 ತಿದ್ದುಪಡಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಮಾಡಲಾಗಿದೆ.

"ಈ ಎಲ್ಲಾ ತಿದ್ದುಪಡಿಗಳು ಸಂವಿಧಾನದ ಪರ ಮತ್ತು ಮೀಸಲಾತಿಯ ಪರವಾಗಿದ್ದವು, ಇದು ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ಸಮುದಾಯಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿವೆ" ಎಂದು ಮಹೇಶ್ ಹೇಳಿದರು.

ಬಿಜೆಪಿ ಮಾಡಿದ ಸಂವಿಧಾನ ವಿರೋಧಿ ಅಥವಾ ಎಸ್‌ಸಿ/ಎಸ್‌ಟಿಗೆ ವಿರುದ್ಧವಾಗಿರುವ ಒಂದೇ ಒಂದು ತಿದ್ದುಪಡಿಯನ್ನು ಎತ್ತಿ ತೋರಿಸುವಂತೆ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ ಬಿಜೆಪಿ ನಾಯಕ, ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ 75 ತಿದ್ದುಪಡಿಗಳನ್ನು ಮಾಡಿದೆ ಎಂದರು.

Comentarios


bottom of page