top of page

'ನರೇಂದ್ರ ಸರೆಂಡರ್': ರಾಹುಲ್ ವಿರುದ್ಧ ಬಿಜೆಪಿ ವಾಗ್ದಾಳಿ, 'ಸ್ವಯಂ ಘೋಷಿತ ಸರ್ವೋಚ್ಚ ನಾಯಕ' ಎಂದು ವ್ಯಂಗ್ಯ

  • Writer: new waves technology
    new waves technology
  • Jun 4
  • 1 min read

ಕಾಂಗ್ರೆಸ್ ನಾಯಕ ನೆರೆಯ ದೇಶವನ್ನು ಬೆಂಬಲಿಸುವ ಮೂಲಕ ಪಾಕಿಸ್ತಾನಿ ಸೇನಾ ಮುಖ್ಯಸ್ಥ, ಅದರ ಪ್ರಧಾನಿ ಮತ್ತು ಅಲ್ಲಿ ನೆಲೆಸಿರುವ ಭಯೋತ್ಪಾದಕ ಮಾಸ್ಟರ್‌ಮೈಂಡ್‌ಗಳನ್ನು ಸಹ ಮೀರಿಸಿದ್ದಾರೆ.

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ "ಶರಣಾಗಿದ್ದಾರೆ" ಎಂದು ಹೇಳುವ ಮೂಲಕ ಸಶಸ್ತ್ರ ಪಡೆಗಳನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಬುಧವಾರ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ನಾಯಕ ನೆರೆಯ ದೇಶವನ್ನು ಬೆಂಬಲಿಸುವ ಮೂಲಕ ಪಾಕಿಸ್ತಾನಿ ಸೇನಾ ಮುಖ್ಯಸ್ಥ, ಅದರ ಪ್ರಧಾನಿ ಮತ್ತು ಅಲ್ಲಿ ನೆಲೆಸಿರುವ ಭಯೋತ್ಪಾದಕ ಮಾಸ್ಟರ್‌ಮೈಂಡ್‌ಗಳನ್ನು ಸಹ ಮೀರಿಸಿದ್ದಾರೆ. ಮೋದಿ ವಿರುದ್ಧ ಅವರ ಟೀಕೆ ಅನಾರೋಗ್ಯಕರ ಮತ್ತು ಅಪಾಯಕಾರಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಹೇಳಿದ್ದಾರೆ.

ಸ್ವಯಂ ಘೋಷಿತ ಸರ್ವೋಚ್ಚ ನಾಯಕ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಅತ್ಯಂತ ಅಗ್ಗದ, ಕೀಳು ಮಟ್ಟದ ಹೇಳಿಕೆಗಳನ್ನು ನೀಡುವ ಮೂಲಕ ಪ್ರತಿಪಕ್ಷ ನಾಯಕನ ಹುದ್ದೆಗೆ ಅಗತ್ಯವಿರುವ ಗಂಭೀರತೆ ಮತ್ತು ಪ್ರಬುದ್ಧತೆಯ ಕೊರತೆಯಿದೆ ಎಂದು ಜಗತ್ತಿಗೆ ಹೇಳುತ್ತಿದ್ದಾರೆ" ಎಂದು ತ್ರಿವೇದಿ ಟೀಕಿಸಿದರು.

ರಾಹುಲ್ ಗಾಂಧಿಯವರು ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸೇನಾ ಅಧಿಕಾರಿಗಳ 'ಆಪರೇಷನ್ ಸಿಂಧೂರ್' ಯಶಸ್ಸಿನ ಸಂಕ್ಷಿಪ್ತ ವಿವರಣೆಯನ್ನು ಶರಣಾಗತಿಯೊಂದಿಗೆ ಹೋಲಿಸಿದ ರೀತಿ ಅವರ ಮನಸ್ಥಿತಿ ಎಷ್ಟು ಅನಾರೋಗ್ಯಕರ ಮತ್ತು ಅಪಾಯಕಾರಿಯಾಗಿದೆ ಎಂಬುದನ್ನು ತೋರಿಸುತ್ತದೆ ಎಂದರು.

ರಾಹುಲ್ ಗಾಂಧಿ ಅವರು ದೇಶದ ಸ್ವಾಭಿಮಾನವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಸಂಸದ, "ಇಲ್ಲಿಯವರೆಗೆ, ಕಾಂಗ್ರೆಸ್ ನಾಯಕರು ಪಾಕಿಸ್ತಾನಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರು, ಅವರ ಹೇಳಿಕೆಗಳನ್ನು ಪಾಕಿಸ್ತಾನಿ ಸಂಸತ್ತಿನಲ್ಲಿ ಉಲ್ಲೇಖಿಸಲಾಗುತ್ತಿತ್ತು. ಆದರೆ ಮೊದಲ ಬಾರಿಗೆ, ರಾಹುಲ್ ಗಾಂಧಿ ಪಾಕಿಸ್ತಾನದ ಸೇನಾ ಮುಖ್ಯಸ್ಥರು ಅಥವಾ ಪಾಕಿಸ್ತಾನದ ಯಾವುದೇ ಭಯೋತ್ಪಾದಕ ಸಂಘಟನೆಯೂ ಹೇಳದ ಮಾತನ್ನು ಹೇಳಿದ್ದಾರೆ. ಮಸೂದ್ ಅಜರ್ ಅಥವಾ ಹಫೀಜ್ ಸಯೀದ್ ಕೂಡ ಅಂತಹ ಮಾತನ್ನು ಹೇಳಿಲ್ಲ" ಎಂದರು.

Comments


bottom of page