ನೀಚ ರಾಜಕೀಯ ನಮ್ಮದಲ್ಲ; ಹೆಣದ ಮೇಲೆ ರಾಜಕೀಯ ಮಾಡೋದು BJP-JDS ಕೆಲಸ: ಡಿ.ಕೆ ಶಿವಕುಮಾರ್ ತರಾಟೆ; Video
- new waves technology
- Jun 16
- 1 min read
ಅಹಮದಾಬಾದ್ ವಿಮಾನ ಅಪಘಾತದಂತಹ ದುರಂತ, ದೇಶದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿ ಎಲ್ಲಿಯೂ ನಡೆಯಬಾರದು. ಈ ದುರಂತದಲ್ಲಿ ಅನೇಕರು ಸುಟ್ಟುಹೋಗಿದ್ದಾರೆ.

ಬೆಂಗಳೂರು: ನಾವು ಅಹಮದಾಬಾದ್ ವಿಮಾನ ದುರಂತದ ಬಗ್ಗೆ ರಾಜಕೀಯ ಮಾಡೋದಿಲ್ಲ. ಹೆಣದ ಮೇಲೆ ರಾಜಕೀಯ ಮಾಡುವುದು ಏನಿದ್ದರೂ ಬಿಜೆಪಿ ಹಾಗೂ ಜೆಡಿಎಸ್ ಕೆಲಸ. ನಾವು ಅವರಂತೆ ನೀಚ ರಾಜಕೀಯ ಮಾಡುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು. ಅಹಮದಾಬಾದ್ ವಿಮಾನ ಅಪಘಾತದಂತಹ ದುರಂತ, ದೇಶದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿ ಎಲ್ಲಿಯೂ ನಡೆಯಬಾರದು. ಈ ದುರಂತದಲ್ಲಿ ಅನೇಕರು ಸುಟ್ಟುಹೋಗಿದ್ದಾರೆ. ಆ ದುರಂತದ ಸ್ಥಳ ನೋಡಿದರೆ ಆಘಾತವಾಗುತ್ತದೆ.
ಅಕಸ್ಮಾತ್ 500 ಮೀಟರ್ ಮುಂದಕ್ಕೆ ಹೋಗಿ ವಿಮಾನ ಅಪ್ಪಳಿಸಿದ್ದರೂ ಸಾವಿರಾರು ಮಂದಿಯ ಜೀವಹಾನಿಯಾಗುತ್ತಿತ್ತು. ಈಗ ವೈದ್ಯಕೀಯ ಹಾಸ್ಟೆಲ್ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ಮಾನಸಿಕ ಆಘಾತವಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಾವು ಕೆಲವರನ್ನು ಭೇಟಿ ಮಾಡಿ ಮಾತನಾಡಿದೆವು. ಈ ಅಪಘಾತ ಕುರಿತು ಬ್ಲಾಕ್ ಬಾಕ್ಸ್ ತನಿಖೆ ವರದಿ ಬರಬೇಕಾಗಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಅಲ್ಲಿ ಹೋಗಿ ಸಾಂತ್ವನ ಹೇಳಿದ್ದೇವೆ” ಎಂದು ಮಾಹಿತಿ ನೀಡಿದರು.
ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಹೆಣದ ಮೇಲೆ ರಾಜಕೀಯ ಮಾಡುವುದೇ ಕೆಲಸ. ನಾವು ಹಳೇ ಪ್ರಕರಣ ಹಾಗೂ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಟೀಕೆ ಮಾಡಬಹುದು. ಆದರೆ ನಾವು ಅವರ ಮಟ್ಟಕ್ಕೆ ಇಳಿಯುವುದಿಲ್ಲ. ಈ ವಿಚಾರದಲ್ಲಿ ಅನೇಕ ತಾಂತ್ರಿಕ ಅಂಶಗಳಿವೆ. ನಾನು ಅವುಗಳ ತಜ್ಞನಲ್ಲ. ಈ ಎಲ್ಲಾ ವಿಚಾರವಾಗಿ ಚರ್ಚೆ ಆಗುತ್ತಿದೆ. ಆದರೆ ಈ ವಿಚಾರವನ್ನು ರಾಜಕೀಯಗೊಳಿಸುವ ವ್ಯಕ್ತಿ ನಾನಲ್ಲ. ಈ ಸಮಯದಲ್ಲಿ ಕೇಂದ್ರ ಸಚಿವರ ಬಗ್ಗೆ ಟೀಕೆ ಮಾಡುವುದಿಲ್ಲ. ಇದು ದೇಶದ ಗಂಭೀರ ವಿಚಾರ” ಎಂದು ತಿಳಿಸಿದರು. ರಾಜ್ಯ ಸರ್ಕಾರ ವಸೂಲಿ ಮಾಡುತ್ತಿರುವ ತೆರಿಗೆ ನೋಡಿದರೆ ನನ್ನ ಸರ್ಕಾರ ಇದ್ದಿದ್ದರೆ ಗೃಹಲಕ್ಷ್ಮಿಗೆ 5 ಸಾವಿರ ಕೊಡುತ್ತಿದ್ದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಅವರು ಚೆನ್ನಾಗಿ ಆರೋಗ್ಯಕರವಾಗಿರಲಿ” ಎಂದು ತಿಳಿಸಿದರು.
Comments