top of page

ನ್ಯೂಯಾರ್ಕ್‌: ಹಡ್ಸನ್ ನದಿಯಲ್ಲಿ ಪ್ರವಾಸಿಗರಿದ್ದ ಹೆಲಿಕಾಪ್ಟರ್ ಪತನ; ಮೂವರು ಮಕ್ಕಳು ಸೇರಿ 6 ಮಂದಿ ಸಾವು

  • Writer: new waves technology
    new waves technology
  • Apr 11
  • 1 min read

ಲೋವರ್​​ ಮ್ಯಾನ್‌ಹ್ಯಾಟನ್‌ನಿಂದ ಹೊರಟ ಹೆಲಿಕಾಪ್ಟರ್​​, ಲಿಬರ್ಟಿ ಪ್ರತಿಮೆಯನ್ನು ಸುತ್ತು ಹಾಕಿದ ಬಳಿಕ, ಉತ್ತರಕ್ಕೆ ಹಡ್ಸನ್ ನದಿಯ ಮೇಲಿಂದ ಜಾರ್ಜ್ ವಾಷಿಂಗ್ಟನ್ ಬ್ರಿಡ್ಜ್​​ನತ್ತ ಹೊರಟಿತ್ತು.

ನ್ಯೂಯಾರ್ಕ್: ಹೆಲಿಕಾಪ್ಟರ್ ಪತನಗೊಂಡು‌ ನದಿಗೆ ಬಿದ್ದ ಪರಿಣಾಮ ಪೈಲಟ್‌ ಸೇರಿದಂತೆ ಆರು ಮಂದಿ ಸಾವಿಗೀಡಾದ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ. ಮೃತರಲ್ಲಿ ನಾಲ್ವರು ಸ್ಪ್ಯಾನಿಷ್ ಮೂಲದ ಒಂದೇ ಕುಟುಂಬದವರಾಗಿದ್ದು, ಪ್ರವಾಸಕ್ಕಾಗಿ ನ್ಯೂಯಾರ್ಕ್‌ಗೆ ಬಂದಿದ್ದರು. ಮೃತಪಟ್ಟವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಮಧ್ಯಾಹ್ನ ಪಿಯರ್ 40ರಲ್ಲಿ ಸಂಭವಿಸಿದ ಘಟನೆಯಲ್ಲಿ ಬೆಲ್ 206L-4 ಲಾಂಗ್‌ರೇಂಜರ್ IV ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ.

ಲೋವರ್​​ ಮ್ಯಾನ್‌ಹ್ಯಾಟನ್‌ನಿಂದ ಹೊರಟ ಹೆಲಿಕಾಪ್ಟರ್​​, ಲಿಬರ್ಟಿ ಪ್ರತಿಮೆಯನ್ನು ಸುತ್ತು ಹಾಕಿದ ಬಳಿಕ, ಉತ್ತರಕ್ಕೆ ಹಡ್ಸನ್ ನದಿಯ ಮೇಲಿಂದ ಜಾರ್ಜ್ ವಾಷಿಂಗ್ಟನ್ ಬ್ರಿಡ್ಜ್​​ನತ್ತ ಹೊರಟಿತ್ತು. ಈ ಸಂದರ್ಭದಲ್ಲಿ ಏಕಾಏಕಿ ದಕ್ಷಿಣಕ್ಕೆ ತಿರುಗಿದ ಹೆಲಿಕಾಪ್ಟರ್ ನ್ಯೂಜೆರ್ಸಿ ಬಳಿ ನದಿಗೆ ಅಪ್ಪಳಿಸಿದೆ.

ಹೆಲಿಕಾಪ್ಟರ್‌ ಪತನದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಬೆಲ್ 206 ಹೆಲಿಕಾಪ್ಟರ್‌ನ ಪತನಗೊಂಡ ಭಾಗಗಳು ಹಡ್ಸನ್ ನದಿಗೆ ಬೀಳುವುದನ್ನು ನೋಡಬಹುದಾಗಿದೆ. ಅಲ್ಲದೇ ಹೆಲಿಕಾಪ್ಟರ್‌ನ ರೋಟರ್ ಬ್ಲೇಡ್ ತುಂಡಾಗಿ ನದಿಗೆ ಮೊದಲು ಬಿದ್ದಿದೆ. ಬಳಿಕ ಪಕ್ಕದಲ್ಲಿ ಹೆಲಿಕಾಪ್ಟರ್‌ ನದಿಗೆ ಅಪ್ಪಳಿಸಿದೆ.

ಹೆಲಿಕಾಪ್ಟರ್ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ಕೈಪೋರ್ಟ್‌ನಿಂದ ಹೊರಟು, ಹಾರಿ ಮ್ಯಾನ್‌ಹ್ಯಾಟನ್ ತೀರದ ಜಾರ್ಜ್ ವಾಷಿಂಗ್ಟನ್ ಸೇತುವೆ ಬಳಿ ಬಂದು ತಲುಪಿತ್ತು. ನಂತರ ಅದು ಡೌನ್‌ಟೌನ್ ಮ್ಯಾನ್‌ಹ್ಯಾಟನ್ ಹೆಲಿಪೋರ್ಟ್ ಕಡೆಗೆ ಹಿಂತಿರುಗುವಾಗ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಲಿಕಾಪ್ಟರ್‌ನ ಮುಖ್ಯ ರೋಟರ್‌ಗಳು ಬಾಲ ಬೂಮ್‌ಗೆ ಬಡಿದು ತುಂಡಾಗಿರುವ ಸಾಧ್ಯತೆ ಇದೆ. ಇನ್ನೂ ಯಾಂತ್ರಿಕ ವೈಫಲ್ಯದಿಂದ ಅಪಘಾತ ಸಂಭವಿಸಿದ್ದು, ಪೈಲಟ್‌ಗೆ ವಿಮಾನವನ್ನು ಉಳಿಸಲು ಯಾವುದೇ ಅವಕಾಶವಿರಲಿಲ್ಲ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Comments


bottom of page