'ನೀವು ಹಿಂದೂವೇ?' ಪಹಲ್ಗಾಮ್ ದಾಳಿ ಮುನ್ನ ಶಂಕಿತ ಉಗ್ರ ತನ್ನೊಂದಿಗೆ ಮಾತನಾಡಿದ್ದ ಎಂದ ಯುವಕ!
- new waves technology
- Apr 30
- 1 min read
ಏಪ್ರಿಲ್ 22 ರಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿ ಪಟ್ಟಣವಾದ ಪಹಲ್ಗಾಮ್ ಬಳಿಯ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ಗುಂಡು ಹಾರಿಸಿ ಇಪ್ಪತ್ತಾರು ಜನರು ಮೃತಪಟ್ಟು ಹಲವರು ಗಾಯಗೊಂಡರು.

ಪಹಲ್ಗಾಮ್ ಉಗ್ರದಾಳಿಯ ಶಂಕಿತ ದಾಳಿಕೋರರಲ್ಲಿ ಒಬ್ಬರು ಹತ್ಯಾಕಾಂಡದ ಒಂದು ದಿನ ಮೊದಲು ತಮ್ಮೊಂದಿಗೆ ಮಾತನಾಡಿದ್ದರು ಎಂದು ಇತ್ತೀಚೆಗೆ ಕಾಶ್ಮೀರದಿಂದ ಹಿಂದಿರುಗಿದ ಮಹಾರಾಷ್ಟ್ರದ ಜಲ್ನಾ ನಗರದ ಯುವಕನೊಬ್ಬ ಹೇಳಿಕೊಂಡಿದ್ದಾರೆ.
"ಹಿಂದೂ ಹೋ ಕ್ಯಾ? (ನೀವು ಹಿಂದೂಗಳೇ) ನೀವು ಕಾಶ್ಮೀರದವರಂತೆ ಕಾಣುತ್ತಿಲ್ಲ" ಎಂದು ಏಪ್ರಿಲ್ 21 ರಂದು ಬೈಸರನ್ ಕಣಿವೆಯ ಆಹಾರ ಮಳಿಗೆಯಲ್ಲಿ ಒಬ್ಬ ವ್ಯಕ್ತಿ ತನ್ನ ಬಳಿ ಹೇಳಿಕೊಂಡಿದ್ದ ಎಂದು ಆದರ್ಶ್ ರಾವತ್ ಹೇಳಿಕೊಂಡಿದ್ದಾರೆ.
ಏಪ್ರಿಲ್ 22 ರಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿ ಪಟ್ಟಣವಾದ ಪಹಲ್ಗಾಮ್ ಬಳಿಯ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ಗುಂಡು ಹಾರಿಸಿ ಇಪ್ಪತ್ತಾರು ಜನರು ಮೃತಪಟ್ಟು ಹಲವರು ಗಾಯಗೊಂಡರು.
ಪ್ರವಾಸಿಗರ ಹತ್ಯಾಕಾಂಡದ ಕೆಲವು ದಿನಗಳ ನಂತರ, ಭದ್ರತಾ ಸಂಸ್ಥೆಗಳು ಮೂವರು ಶಂಕಿತ ದಾಳಿಕೋರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಅವರಲ್ಲಿ ಒಬ್ಬರು ತಮ್ಮೊಂದಿಗೆ ಮಾತನಾಡಿದ ವ್ಯಕ್ತಿಗೆ ಹೊಂದಿಕೆಯಾಗುತ್ತಾರೆ ಎಂದು ರಾವತ್ ಹೇಳುತ್ತಾರೆ.
ರಾವತ್ ಅವರ ಪ್ರಕಾರ, ಅವರು ಏಪ್ರಿಲ್ 21 ರಂದು ಪಹಲ್ಗಾಮ್‌ನಲ್ಲಿ ಕುದುರೆ ಸವಾರಿಗೆ ಹೋಗಿದ್ದರು, ನಂತರ ಆಹಾರ ಸೇವಿಸಲು "ಮ್ಯಾಗಿ ಸ್ಟಾಲ್" ನಲ್ಲಿ ನಿಲ್ಲಿಸಿದ್ದರು. ಆಗ ಒಬ್ಬ ವ್ಯಕ್ತಿ ಅವರ ಬಳಿಗೆ ಬಂದು ನೀವು ಹಿಂದೂವೇ ಎಂದು ಕೇಳಿ ನೀವು ಕಾಶ್ಮೀರಿಯಂತೆ ಕಾಣುತ್ತಿಲ್ಲ ಎಂದು ಹೇಳಿದರು.
ನಂತರ ಶಂಕಿತನು ತನ್ನ ಸಹಚರನ ಕಡೆಗೆ ತಿರುಗಿ, ಇಂದು ಜನಸಂದಣಿ ಕಡಿಮೆಯಾಗಿದೆ ಎಂದು ಹೇಳಿದ್ದನು ಎನ್ನುತ್ತಾರೆ ರಾವತ್.
ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಬಿಡುಗಡೆ ಮಾಡಿದ ರೇಖಾಚಿತ್ರಗಳನ್ನು ನೋಡಿದ ನಂತರ, ನಾನು ಕಂಡು ಮಾತನಾಡಿದ ವ್ಯಕ್ತಿಗೆ ಹೋಲಿಕೆಯಾಗುತ್ತಿದೆ ಎನಿಸುತ್ತಿದೆ. ಕಾಶ್ಮೀರದಲ್ಲಿ ತಮ್ಮ ಅನುಭವದ ವಿವರವಾದ ವಿಷಯಗಳನ್ನು ಎನ್‌ಐಎಗೆ ಇಮೇಲ್ ಮಾಡಿದ್ದೇನೆ ಎಂದರು.
ನನಗೆ ನೆನಪಿರುವ ಎಲ್ಲವನ್ನೂ ನಾನು ಬರೆದಿದ್ದೇನೆ. ನೆಟ್‌ವರ್ಕ್ ಸಮಸ್ಯೆಗಳಿಂದಾಗಿ ಮ್ಯಾಗಿ ಸ್ಟಾಲ್ ಮಾಲೀಕರಿಗೆ ಆರಂಭದಲ್ಲಿ ಹಣ ನೀಡಲು ಸಾಧ್ಯವಾಗಲಿಲ್ಲ ಎಂದು ನಾನು ಉಲ್ಲೇಖಿಸಿದ್ದೇನೆ. ಬೆಟ್ಟದಿಂದ ಕೆಳಗೆ ಬಂದ ನಂತರ ನಾನು ಅವರ ಫೋನ್ ಸಂಖ್ಯೆಯನ್ನು ತೆಗೆದುಕೊಂಡು ಅವರಿಗೆ ಹಣ ನೀಡಿದ್ದೇನೆ ಎಂದಿದ್ದಾರೆ.
ನಾನು ಕಳುಹಿಸಿರುವ ಮೇಲ್ ಗೆ ಎನ್‌ಐಎಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರು ನನ್ನನ್ನು ಸಂಪರ್ಕಿಸಿದರೆ ನಾನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಅವರೊಂದಿಗೆ ಸಹಕರಿಸುತ್ತೇನೆ ಎಂದಿದ್ದಾರೆ.
Comments