ನಿಷೇಧ ಹಿಂಪಡೆದ ನಂತರ ಮತ್ತೆ ನಾಯಕನಾಗಿ ಮರಳಿದ ಡೇವಿಡ್ ವಾರ್ನರ್
- new waves technology
- Nov 6, 2024
- 1 min read
2018 ರಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿದ ಆರೋಪದ ಮೇಲೆ ವಾರ್ನರ್ ಮೇಲೆ ವಿಧಿಸಿದ್ದ ಆಜೀವ ನಿಷೇಧವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಇತ್ತೀಚಿಗೆ ಹಿಂಪಡೆದಿತ್ತು.

ಸಿಡ್ನಿ: ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಅಜೀವ ನಾಯಕತ್ವ ನಿಷೇಧ ಹಿಂಪಡೆದ ಹದಿನೈದು ದಿನಗಳ ನಂತರ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರನ್ನು ಬುಧವಾರ ಬಿಗ್ ಬ್ಯಾಷ್ ಲೀಗ್ ನ ಸಿಡ್ನಿ ಥಂಡರ್ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.
2018 ರ ಕೇಪ್ ಟೌನ್ ಟೆಸ್ಟ್‌ನಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿದ ಆರೋಪದ ಮೇಲೆ ವಾರ್ನರ್ ಮೇಲೆ ವಿಧಿಸಿದ್ದ ಆಜೀವ ನಿಷೇಧವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಇತ್ತೀಚಿಗೆ ಹಿಂಪಡೆದಿತ್ತು.
ಕ್ರಿಕೆಟ್ ಆಸ್ಟ್ರೇಲಿಯಾ ವಿಧಿಸಿದ ಶಿಕ್ಷೆಯ ಪ್ರಕಾರ ವಾರ್ನರ್ 2018 ರಿಂದ ಆಸ್ಟ್ರೇಲಿಯಾದಲ್ಲಿ ಯಾವುದೇ ತಂಡದ ನಾಯಕತ್ವವಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಕ್ರಿಕೆಟ್ ಆಸ್ಟ್ರೇಲಿಯದ ನಡುವಳಿಕೆ ಆಯೋಗ ಈ ನಿರ್ಧಾರವನ್ನು ಪರಿಶೀಲಿಸಿದ್ದು, ವಾರ್ನರ್ ಮೇಲಿನ ನಿಷೇಧವನ್ನು ಹಿಂಪಡೆದಿದೆ.
"ಡೇವಿಡ್ ವಾರ್ನರ್ ಅವರನ್ನು ಸಿಡ್ನಿ ಥಂಡರ್ ತಂಡದ ನಾಯಕನಾಗಿ ಆಯ್ಕೆ ಮಾಡಲಾಗಿದೆ" ಎಂದು ಕ್ಲಬ್ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಥಂಡರ್ ಡಿಸೆಂಬರ್ 17 ರಂದು ಕ್ಯಾನ್‌ಬೆರಾದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಟಿ20 BBL ನಲ್ಲಿ ತಮ್ಮ ತನ್ನ ಆವೃತ್ತಿಯನ್ನು ಆರಂಭಿಸುತ್ತದೆ.
Comments