top of page

ಪಕ್ಷದ ನಡೆಗೆ ತೀವ್ರ ಅಸಮಾಧಾನ: BJP ತೊರೆಯಲು ಹಾಸನದ ಯುವ ಮುಖಂಡ Preetham Gowda ಮುಂದು!?

  • Writer: new waves technology
    new waves technology
  • Jan 15
  • 1 min read

ಮೂರೂ ಪಕ್ಷಗಳಲ್ಲಿ ಆಂತರಿಕ ಭಿರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ಪಕ್ಷಾಂತರ ಪರ್ವ ನಡೆಯುವ ಲಕ್ಷಣಗಳು ನಿಚ್ಚಳವಾಗುತ್ತಿದೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ಪಕ್ಷಾಂತರ ಪರ್ವ ನಡೆಯುವ ಲಕ್ಷಣಗಳು ನಿಚ್ಚಳವಾಗುತ್ತಿದೆ.

ಮೂರೂ ಪಕ್ಷಗಳಲ್ಲಿ ಆಂತರಿಕ ಭಿರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ಪಕ್ಷಾಂತರ ಪರ್ವ ನಡೆಯುವ ಲಕ್ಷಣಗಳು ನಿಚ್ಚಳವಾಗುತ್ತಿದೆ.

ಮೂರೂ ಪಕ್ಷಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ತಲೆದೋರಿದ್ದರೂ ಶಾಸಕರು, ಸ್ಥಳೀಯ ನಾಯಕರು ಪರಿಸ್ಥಿತಿಯ ಅನುಗುಣವಾಗಿ ತಮ್ಮ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳುವುದರತ್ತ ಗಮನ ಹರಿಸುತ್ತಿದ್ದಾರೆ.

ಭಿನ್ನಾಭಿಪ್ರಾಯಗಳು ತಲೆದೋರಿದ್ದರೂ ಶಾಸಕರು, ಸ್ಥಳೀಯ ನಾಯಕರು ಪರಿಸ್ಥಿತಿಯ ಅನುಗುಣವಾಗಿ ತಮ್ಮ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳುವುದರತ್ತ ಗಮನ ಹರಿಸುತ್ತಿದ್ದಾರೆ.


ಒಂದೆಡೆ ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಸಂದರ್ಭಕ್ಕಾಗಿ ಕಾಯುತ್ತಿದ್ದರೆ, ಕಾಂಗ್ರೆಸ್ ಪಕ್ಷ ಜೆಡಿಎಸ್-ಬಿಜೆಪಿಗಳಿಂದ ನಾಯಕರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸುತ್ತಿದೆ. ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಯಾಗಲು ಚಿಂತನೆ ನಡೆಸುತ್ತಿರುವ ನಾಯಕರ ಪಟ್ಟಿಯಲ್ಲಿ ಹಾಸನ ಮಾಜಿ ಶಾಸಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಹೆಸರು ಕೇಳಿಬರುತ್ತಿರುವುದು ಅಚ್ಚರಿ ಮೂಡಿಸಿದೆ.


ಪ್ರೀತಂ ಗೌಡ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರುವ ಬಗ್ಗೆ ಸ್ವತಃ ಪ್ರೀತಂ ಗೌಡ ಅವರ ಆಪ್ತರೊಬ್ಬರು ಹಂಚಿಕೊಂಡಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿಯಾದಾಗಿನಿಂದಲೂ ಪ್ರೀತಂ ಗೌಡ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಅಸಮಾಧಾನಗೊಂಡಿದ್ದರು. ಈಗ ಕಾಂಗ್ರೆಸ್ ಸೇರಲು ಪ್ರೀತಂ ಗೌಡ ಮುಂದಾಗಿದ್ದಾರೆ. ಈ ಮಾಹಿತಿಗೆ ಪೂರಕವೆಂಬಂತೆ ಪಕ್ಷದಿಂದ ಈಗಾಗಲೇ ಪ್ರೀತಂ ಗೌಡ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾರೆ. ಇತ್ತೀಚೆಗೆ ಬಿಜೆಪಿಯ ಯಾವುದೇ ಕಾರ್ಯಕ್ರಮದಲ್ಲೂ ಪ್ರೀತಂ ಗೌಡ ಭಾಗಿಯಾಗುತ್ತಿಲ್ಲ. ತಮ್ಮದೇ ಕಾರ್ಯಕರ್ತರ ಸಂಘಟನೆಯನ್ನು ಪ್ರೀತಂ ಗೌಡ ಹೊಂದಿದ್ದು ಅವರೊಂದಿಗೆ ಕಾಂಗ್ರೆಸ್ ಸೇರಲಿದ್ದಾರೆ.

ಹಾಸನ ಜೆಡಿಎಸ್ ನ ಭದ್ರಕೋಟೆಯಾಗಿದ್ದು ಕಾಂಗ್ರೆಸ್ ತನ್ನ ಸಂಘಟನೆಯನ್ನು ಅಲ್ಲಿ ಬಲಪಡಿಸಲು ಯತ್ನಿಸುತ್ತಿದೆ. ಪ್ರೀತಂ ಗೌಡ ಅವರು ಕಾಂಗ್ರೆಸ್ ಗೆ ಸೇರ್ಪಡೆಗೊಂಡರೆ ಅದು ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Kommentarer


bottom of page