top of page

ಪತ್ನಿಯನ್ನು ದೂಷಿಸಿ ಕಂಪನಿ ವೆಬ್‌ಸೈಟ್‌ನಲ್ಲಿ ಡೆತ್ ನೋಟ್ ಪೋಸ್ಟ್; ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

  • Writer: new waves technology
    new waves technology
  • Mar 7
  • 2 min read

ಮೂರು ದಿನಗಳ ಹಿಂದೆ ಹೋಟೆಲ್‌ಗೆ ಭೇಟಿ ನೀಡಿ, ಅತಿಥಿಗಳು ಗೌಪ್ಯತೆಗಾಗಿ ಬಳಸುವ 'ಡೋಂಟ್ ಡಿಸ್ಟರ್ಬ್' ಫಲಕವನ್ನು ಹಾಕಿದ್ದ. ಆದರೆ, ದೀರ್ಘಕಾಲದವರೆಗೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಹೋಟೆಲ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಕೋಣೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.


ಮುಂಬೈ: ತನ್ನ ಪತ್ನಿ ಮತ್ತು ಆಕೆಯ ಚಿಕ್ಕಮ್ಮನನ್ನು ದೂಷಿಸಿ ಡೆತ್ ನೋಟ್ ಬರೆದಿಟ್ಟು 41 ವರ್ಷದ ವ್ಯಕ್ತಿಯೊಬ್ಬ ಮುಂಬೈನ ಹೋಟೆಲ್ ಕೋಣೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಶಾಂತ್ ತ್ರಿಪಾಠಿ ಕಳೆದ ಶುಕ್ರವಾರ ಸಹಾರಾ ಹೋಟೆಲ್‌ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಾನು ಕೆಲಸ ಮಾಡುತ್ತಿದ್ದ ಕಂಪನಿಯ ವೆಬ್‌ಸೈಟ್‌ನಲ್ಲಿ ಡೆತ್ ನೋಟ್ ಅನ್ನು ಅಪ್‌ಲೋಡ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆ ಹೋಟೆಲ್‌ಗೆ ಭೇಟಿ ನೀಡಿ, ಅತಿಥಿಗಳು ಗೌಪ್ಯತೆಗಾಗಿ ಬಳಸುವ 'ಡೋಂಟ್ ಡಿಸ್ಟರ್ಬ್' ಫಲಕವನ್ನು ಹಾಕಿದ್ದ. ಆದರೆ, ದೀರ್ಘಕಾಲದವರೆಗೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಹೋಟೆಲ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಕೋಣೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಮಹಿಳಾ ಹಕ್ಕುಗಳ ಕಾರ್ಯಕರ್ತೆಯಾಗಿರುವ ಸಂತ್ರಸ್ತನ ತಾಯಿ ನೀಲಂ ಚತುರ್ವೇದಿ ನೀಡಿದ ದೂರಿನ ಆಧಾರದ ಮೇಲೆ, ಪತ್ನಿ ಅಪೂರ್ವ ಪಾರಿಖ್ ಮತ್ತು ಆಕೆಯ ಚಿಕ್ಕಮ್ಮ ಪ್ರಾರ್ಥನಾ ಮಿಶ್ರಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಇನ್ನೂ ಯಾರನ್ನೂ ಬಂಧಿಸಿಲ್ಲ.

ತನ್ನ ಕಂಪನಿಯ ವೆಬ್‌ಸೈಟ್‌ನಲ್ಲಿ ಪಾಸ್‌ವರ್ಡ್‌ನೊಂದಿಗೆ ಸುರಕ್ಷಿತಗೊಳಿಸಲಾದ ಡೆತ್‌ ನೋಟ್‌ನಲ್ಲಿ, ತನ್ನ ಹೆಂಡತಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ ಮತ್ತು ತನ್ನ ಸಾವಿಗೆ ಅವಳು ಮತ್ತು ಆಕೆಯ ಚಿಕ್ಕಮ್ಮ ಕಾರಣ ಎಂದು ಹೇಳಿದ್ದಾನೆ.

'ನೀನು ಇದನ್ನು ಓದುವ ಹೊತ್ತಿಗೆ ನಾನು ಹೋಗಿರುತ್ತೇನೆ. ನನ್ನ ಕೊನೆಯ ಕ್ಷಣಗಳಲ್ಲಿ, ನಡೆದ ಎಲ್ಲದಕ್ಕೂ ನಿನ್ನನ್ನು ದ್ವೇಷಿಸಬಹುದಿತ್ತು. ಆದರೆ, ನಾನು ಹಾಗೆ ಮಾಡುವುದಿಲ್ಲ. ಈ ಕ್ಷಣದಲ್ಲಿ ನಾನು ಪ್ರೀತಿಯನ್ನು ಆರಿಸಿಕೊಳ್ಳುತ್ತೇನೆ. ಆಗಲೂ ನಾನು ನಿನ್ನನ್ನು ಪ್ರೀತಿಸುತ್ತಿದ್ದೆ. ಈಗಲೂ ನಾನು ನಿನ್ನನ್ನು ಪ್ರೀತಿಸುತ್ತೇನೆ. ನಾನು ಭರವಸೆ ನೀಡಿದ್ದಂತೆ, ಅದು ಎಂದಿಗೂ ಮಾಸುವುದಿಲ್ಲ' ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ.

'ನಾನು ಎದುರಿಸಿದ ಇತರ ಎಲ್ಲ ಸಮಸ್ಯೆಗಳು ಮತ್ತು ನೀನು ಮತ್ತು ಪ್ರಾರ್ಥನಾ ಮೌಸಿ ನನ್ನ ಸಾವಿಗೆ ಕಾರಣ ಎಂಬುದು ನನ್ನ ತಾಯಿಗೆ ತಿಳಿದಿದೆ. ಆದ್ದರಿಂದ ಈಗ ಆಕೆಯನ್ನು (ತಾಯಿಯನ್ನು) ಸಂಪರ್ಕಿಸಬೇಡಿ ಎಂದು ನಾನು ಬೇಡಿಕೊಳ್ಳುತ್ತೇನೆ. ಏಕೆಂದರೆ ಆಕೆ ಸಾಕಷ್ಟು ನೊಂದಿದ್ದಾಳೆ. ಆಕೆ ಶಾಂತಿಯಿಂದ ದುಃಖಿಸಲಿ' ಎಂದು ಹೇಳಿದ್ದಾರೆ.

ತಮ್ಮ ಮಗನ ಸಾವಿನ ಕುರಿತು ಮಾತನಾಡಿದ ಚತುರ್ವೇದಿ ಫೇಸ್‌ಬುಕ್‌ನಲ್ಲಿ ದೀರ್ಘ ಪೋಸ್ಟ್ ಹಂಚಿಕೊಂಡಿದ್ದು, 'ಇಂದು ನಾನು ಜೀವಂತ ಶವವಾದಂತೆ ಭಾಸವಾಗುತ್ತಿದೆ', ತನ್ನ ಜೀವನವನ್ನು ಮಹಿಳಾ ಹಕ್ಕುಗಳು ಮತ್ತು ಲಿಂಗ ಸಮಾನತೆಗಾಗಿ ಮುಡಿಪಾಗಿಟ್ಟಿದ್ದೇನೆ ಎಂದಿದ್ದಾರೆ.

'ನನ್ನ ಜೀವನ ಈಗ ಮುಗಿದಿದೆ. ನನ್ನ ಮಗ ನಿಶಾಂತ್ ನನ್ನನ್ನು ಬಿಟ್ಟು ಹೋಗಿದ್ದಾನೆ. ನಾನು ಈಗ ಜೀವಂತ ಶವವಾಗಿದ್ದೇನೆ. ಅವನು ನನ್ನ ಅಂತ್ಯಕ್ರಿಯೆಯನ್ನು ಮಾಡಬೇಕಾಗಿತ್ತು. ಆದರೆ, ಇಂದು (ಮಾರ್ಚ್ 2) ನಾನು ನನ್ನ ಮಗನ ಅಂತ್ಯಕ್ರಿಯೆ ನೆರವೇರಿಸಿದ್ದೇನೆ. ನನ್ನ ಮಗಳು ಪ್ರಾಚಿ ತನ್ನ ಅಣ್ಣನ ಅಂತ್ಯಕ್ರಿಯೆ ಮಾಡಿದಳು' ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


Comments


bottom of page