ಪಹಲ್ಗಾಮ್ ದಾಳಿಯನ್ನು ಲಘುವಾಗಿ ಪರಿಗಣಿಸಿದ New York Times: ಉಗ್ರರನ್ನು ಬಂದೂಕುಧಾರಿಗಳು ಎಂದ ಪತ್ರಿಕೆ, ಅಮೆರಿಕಾ ಛೀಮಾರಿ
- new waves technology
- Apr 25
- 1 min read
ಪಹಲ್ಗಾಮ್ ಉಗ್ರರ ದಾಳಿ ಕುರಿತು ವರದಿ ಮಾಡಿದ್ದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ಭಯೋತ್ಪಾದಕರು ಎಂಬ ಪದದ ಬದಲು ಬಂದೂಕುಧಾರಿಗಳು ಎಂಬ ಪದಗಳನ್ನು ಬಳಸಿತ್ತು. ಈ ಮೂಲಕ ಘಟನೆಯ ಗಂಭೀರತೆಯನ್ನು ಕಡಿಮೆ ಮಾಡಿತ್ತು.

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿದಂತೆ 26 ಜನರು ಸಾವನ್ನಪ್ಪಿದ ವರದಿಯನ್ನು ಲಘುವಾಗಿ ಪರಿಗಣಿಸಿದ್ದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯನ್ನು ಅಮೆರಿಕಾ ಸರ್ಕಾರ ತರಾಟೆಗೆ ತೆಗೆದುಕೊಂಡಿದೆ.
ಪಹಲ್ಗಾಮ್ ಉಗ್ರರ ದಾಳಿ ಕುರಿತು ವರದಿ ಮಾಡಿದ್ದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ಭಯೋತ್ಪಾದಕರು ಎಂಬ ಪದದ ಬದಲು ಬಂದೂಕುಧಾರಿಗಳು ಎಂಬ ಪದಗಳನ್ನು ಬಳಸಿತ್ತು. ಈ ಮೂಲಕ ಘಟನೆಯ ಗಂಭೀರತೆಯನ್ನು ಕಡಿಮೆ ಮಾಡಿತ್ತು.
ಈ ಕುರಿತು ಅಮೆರಿಕಾದ House Foreign Affairs Committee Majority ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, Militants ಇರುವ ಜಾಗದಲ್ಲಿ ʼTerroristʼ ಎಂದು ಹಾಕಿ ಪೋಸ್ಟ್ ಮಾಡಿದೆ. ಈ ಮೂಲಕ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಪದಗಳ ಆಯ್ಕೆಯನ್ನು ತೀವ್ರವಾಗಿ ಖಂಡಿಸಿದೆ.
ಉಗ್ರಗಾಮಿಗಳು ಎಂಬ ಪದವನ್ನು ತೆಗೆದುಹಾಕಿ ದಪ್ಪ ಕೆಂಪು ಬಣ್ಣದಲ್ಲಿ ಭಯೋತ್ಪಾದಕರು ಎಂದು ಸಮಿತಿ ಬದಲಾಯಿಸಿ ಪೋಸ್ಟ್ ಹಾಕಿದೆ.
ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಸರಿ ಮಾಡಿದ್ದೇವೆ. ಇದು ಭಯೋತ್ಪಾದಕ ದಾಳಿ. ಭಾರತವಾಗಲಿ ಅಥವಾ ಇಸ್ರೇಲ್ ಆಗಿರಲಿ, ಭಯೋತ್ಪಾದನೆಯ ವಿಷಯಕ್ಕೆ ಬಂದಾಗ ನ್ಯೂಯಾರ್ಕ್ ಟೈಮ್ಸ್ ಅನ್ನು ವಾಸ್ತವದಿಂದ ದೂರವಿಡಲಾಗುತ್ತದೆ ಎಂದು ಹೇಳಿದೆ.
Comments