top of page

ಪಾಕ್‌ನಲ್ಲಿ ರಕ್ತದೋಕುಳಿ: ಆತ್ಮಾಹುತಿ ಬಾಂಬ್ ದಾಳಿ ಮತ್ತು ಗುಂಡಿನ ದಾಳಿಯಲ್ಲಿ 19 ಯೋಧರು ಸಾವು!

  • Writer: new waves technology
    new waves technology
  • Nov 20, 2024
  • 1 min read

ಆತ್ಮಹತ್ಯಾ ಸ್ಫೋಟದಿಂದಾಗಿ ಗೋಡೆಯ ಒಂದು ಭಾಗ ಕುಸಿದು ಸುತ್ತಮುತ್ತಲಿನ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ದಾಳಿಯಲ್ಲಿ 10 ಭದ್ರತಾ ಪಡೆಗಳು ಮತ್ತು ಇಬ್ಬರು ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ ಸಿಬ್ಬಂದಿ ಸೇರಿದಂತೆ 12 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.










ಪೇಶಾವರ್(ಪಾಕಿಸ್ತಾನ): ಪಾಕಿಸ್ತಾನದಲ್ಲಿ ನಡೆದ ಪ್ರತ್ಯೇಕ ಭಯೋತ್ಪಾದನಾ ದಾಳಿಯಲ್ಲಿ 19 ಯೋಧರು ಮೃತಪಟ್ಟಿದ್ದು ಹಲವು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಜಂಟಿ ಚೆಕ್ ಪೋಸ್ಟ್‌ಗೆ ಆತ್ಮಹತ್ಯಾ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆದಿದ್ದು ಪರಿಣಾಮ 12 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸೇನೆ, ನಂತರ ನಡೆದ ಎನ್‌ಕೌಂಟರ್‌ನಲ್ಲಿ ಆರು ಉಗ್ರರು ಹತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮಂಗಳವಾರ ತಡರಾತ್ರಿ ಬನ್ನು ಜಿಲ್ಲೆಯ ಮಲಿಖೇಲ್ ಪ್ರದೇಶದ ಜಂಟಿ ಚೆಕ್ ಪೋಸ್ಟ್ ಮೇಲೆ ಉಗ್ರರು ದಾಳಿ ನಡೆಸಲು ಯತ್ನಿಸಿದರು. ಆದರೆ ಭದ್ರತಾ ಪಡೆಗಳು ಪೋಸ್ಟ್ ಪ್ರವೇಶಿಸುವ ಅವರ ಪ್ರಯತ್ನವನ್ನು ಪರಿಣಾಮಕಾರಿಯಾಗಿ ವಿಫಲಗೊಳಿಸಿದವು ಎಂದು ಸೇನೆಯ ಮಾಧ್ಯಮ ವಿಭಾಗ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ISPR) ತಿಳಿಸಿದೆ. ಮತ್ತೊಂದೆಡೆ ತಿರಾಹ್ ಕಣಿವೆಯಲ್ಲಿ ಉಗ್ರರೊಂದಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಎಂಟು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


ಆತ್ಮಹತ್ಯಾ ಸ್ಫೋಟದಿಂದಾಗಿ ಗೋಡೆಯ ಒಂದು ಭಾಗ ಕುಸಿದು ಸುತ್ತಮುತ್ತಲಿನ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ದಾಳಿಯಲ್ಲಿ 10 ಭದ್ರತಾ ಪಡೆಗಳು ಮತ್ತು ಇಬ್ಬರು ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ ಸಿಬ್ಬಂದಿ ಸೇರಿದಂತೆ 12 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ISPR ಹೇಳಿದೆ. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಆರು ಉಗ್ರರು ಹತರಾಗಿದ್ದಾರೆ ಎಂದು ಸೇನೆ ತಿಳಿಸಿದೆ.

ಲೆಬನಾನ್ ನಲ್ಲಿ ಇಸ್ರೇಲ್ ವಾಯುದಾಳಿ; ಮೂವರು ಹೆಜ್ಬುಲ್ಲಾ ಕಮಾಂಡರ್ ಗಳ ಹತ್ಯೆ

ಪಾಕ್ ಸರ್ಕಾರ ಮತ್ತು ಸೇನಾ ನಾಯಕತ್ವವು ಬಲೂಚಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ 'ಬೃಹತ್ ಸೇನಾ ಕಾರ್ಯಾಚರಣೆ'ಯನ್ನು ಅನುಮೋದಿಸಿದ ಒಂದು ದಿನದ ನಂತರ ಈ ದಾಳಿ ನಡೆದಿದೆ. ಭದ್ರತಾ ಪಡೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ಭಯೋತ್ಪಾದನೆಯ ಬೆದರಿಕೆಯನ್ನು ತೊಡೆದುಹಾಕಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಇಡೀ ದೇಶ, ವಿಶೇಷವಾಗಿ ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ, ಕಳೆದ ವರ್ಷದಲ್ಲಿ ಭಯೋತ್ಪಾದನೆ-ಸಂಬಂಧಿತ ಘಟನೆಗಳಲ್ಲಿ ತೀವ್ರ ಹೆಚ್ಚಳವನ್ನು ಕಂಡಿದೆ.

Comentarios


bottom of page