top of page

ಪಾಕಿಸ್ತಾನಕ್ಕೆ ಭಾರೀ ಹಿನ್ನಡೆ: ಶಸ್ತ್ರಾಸ್ತ್ರ ಸರಬರಾಜು ಸ್ಥಗಿತಗೊಳಿಸಿದ ಟರ್ಕಿ

  • Writer: new waves technology
    new waves technology
  • Apr 29
  • 1 min read

ಭಾರತದೊಂದಿಗಿನ ಯುದ್ಧದ ಭೀತಿ ನಡುವೆಯೇ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವುದಿಲ್ಲ ಎಂದು ಟರ್ಕಿ ಹೇಳಿದೆ.

ಟರ್ಕಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿ ಬಳಿಕ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಳಸಿದ್ದು, ಈ ನಡುವೆ ಯುದ್ಧೋತ್ಸಾಹ ತೋರುತ್ತಿರುವ ಪಾಕಿಸ್ತಾನಕ್ಕೆ ಭಾರೀ ಹಿನ್ನಡೆಯುಂಟಾಗಿದೆ.

ಭಾರತದೊಂದಿಗಿನ ಯುದ್ಧದ ಭೀತಿ ನಡುವೆಯೇ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವುದಿಲ್ಲ ಎಂದು ಟರ್ಕಿ ಹೇಳಿದೆ.

ಟರ್ಕಿಯಲ್ಲಿ ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಭಾರತವು ಸಾಕಷ್ಟು ಸಹಾಯ ಮಾಡಿತ್ತು ಆದರೆ, ಭಾರತದ ರಕ್ತ ಹರಿಸಲು ಟರ್ಕಿಯು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ ಎನ್ನುವ ವಿಚಾರ ಎಲ್ಲೆಡೆ ಹರಿದಾಡಿತ್ತು.

ಶಸ್ತ್ರಾಸ್ತ್ರಗಳನ್ನು ಹೊತ್ತ ಟರ್ಕಿಶ್ ವಾಯುಪಡೆಯ ಸಿ-130 ಹರ್ಕ್ಯುಲಸ್ ಮಿಲಿಟರಿ ಸಾರಿಗೆ ವಿಮಾನ ಭಾನುವಾರ ಕರಾಚಿಗೆ ಬಂದಿಳಿದಿತ್ತು ಎನ್ನಲಾಗಿತ್ತು, ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಟರ್ಕಿ, ನಾವು ಯಾವುದೇ ಶಸ್ತ್ರಾಸ್ತ್ರಗಳನ್ನು ಕಳುಹಿಸಿಲ್ಲ ಎಂದು ಹೇಳಿದೆ.

ಟರ್ಕಿಯಿಂದ ಹೊರಟ ಸರಕು ವಿಮಾನ ಇಂಧನ ತುಂಬಲು ಪಾಕಿಸ್ತಾನದಲ್ಲಿ ಇಳಿದಿತ್ತು, ಯಾವುದೇ ಊಹಾಪೋಹಗಳಿಗೂ ಕಿವಿಗೊಡಬೇಡಿ ಎಂದು ಹೇಳಿದೆ.


댓글


bottom of page