top of page

ಪಂಜಾಬ್‌: ಗುರುದಾಸ್‌ಪುರದ ಪೊಲೀಸ್ ಚೌಕಿ ಬಳಿ ನಿಗೂಢ ಸ್ಫೋಟ, ಬೆಚ್ಚಿ ಬಿದ್ದ ಜನತೆ

  • Writer: new waves technology
    new waves technology
  • Dec 21, 2024
  • 1 min read

ಕಳೆದ ಏಳು ದಿನಗಳಲ್ಲಿ ಮೂರನೇ ಬಾರಿಗೆ ಸ್ಫೋಟದ ಶಬ್ಧ ಕೇಳಿ ಬಂದಿದೆ ಎಂದು ತಿಳಿದುಬಂದಿದೆ. ಡಿಸೆಂಬರ್ 17 ರಂದು ಮೊದಲ ಬಾರಿಗೆ ಅಮೃತಸರದ ಇಸ್ಲಾಮಾಬಾದ್ ಪೊಲೀಸ್ ಠಾಣೆಯ ಬಳಿ ಸ್ಫೋಟ ಸಂಭವಿಸಿತ್ತು.

ಚಂಡೀಗಢ: ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ವಡಾಲಾ ಬಂಗಾರ್ ಪೊಲೀಸ್ ಚೌಕಿಯ ಬಳಿ ನಿಗೂಢ ಸ್ಫೋಟದ ಶಬ್ಧ ಕೇಳಿ ಬಂದು ಜನತೆ ಬೆಚ್ಚಿಬಿದ್ದ ಘಟನೆ ಶನಿವಾರ ನಡೆದಿದೆ.

ಕಳೆದ ಏಳು ದಿನಗಳಲ್ಲಿ ಮೂರನೇ ಬಾರಿಗೆ ಸ್ಫೋಟದ ಶಬ್ಧ ಕೇಳಿ ಬಂದಿದೆ ಎಂದು ತಿಳಿದುಬಂದಿದೆ. ಡಿಸೆಂಬರ್ 17 ರಂದು ಮೊದಲ ಬಾರಿಗೆ ಅಮೃತಸರದ ಇಸ್ಲಾಮಾಬಾದ್ ಪೊಲೀಸ್ ಠಾಣೆಯ ಬಳಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಯಾವುದೇ ಸಾವು-ನೋವುಗಳಾಗಿರಲಿಲ್ಲ. ಬಳಿಕ ಶುಕ್ರವಾರ ರಾತ್ರಿ 9.30ರ ಸುಮಾರಿಗೂ ಇದೇ ರೀತಿಯ ಸ್ಫೋಟದ ಶಬ್ಧ ಕೇಳಿ ಬಂದಿತ್ತು. ಇದೀಗ ಮತ್ತದೇ ಶಬ್ಧ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜನರು ಬೆಚ್ಚಿ ಬಿದ್ದಿದ್ದಾರೆ.


ಸ್ಫೋಟದ ಶಬ್ಧ ಕೇಳಿ ಬಂದ ಸ್ಥಳದಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಈ ಸಂಬಂಧ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಗುರುದಾಸ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ದಯಾಮ ಹರೀಶ್ ಕುಮಾರ್ ಓಂ ಪ್ರಕಾಶ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಜುಗರಾಜ್ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

 
 
 

Comments


bottom of page