top of page

ಪ್ರಜಾಸತ್ತಾತ್ಮಕ ಸ್ವಾತಂತ್ರ್ಯದ ದುರುಪಯೋಗವನ್ನು ಭಾರತ ಖಂಡಿಸುತ್ತದೆ: S Jaishankar ಭೇಟಿ ವೇಳೆ ಭದ್ರತೆ ಉಲ್ಲಂಘನೆಗೆ MEA ಪ್ರತಿಕ್ರಿಯೆ

  • Writer: new waves technology
    new waves technology
  • Mar 6
  • 1 min read

ಲಂಡನ್‌ನ ಚಾಥಮ್ ಹೌಸ್‌ನಲ್ಲಿ ಸಂವಾದ ಕಾರ್ಯಕ್ರಮ ಮುಗಿಸಿ ಜೈಶಂಕರ್ ಅವರು ತೆರಳುತ್ತಿದ್ದ ವೇಳೆ ಅವರಿಗೆ ಅಡ್ಡಿಪಡಿಸಲು ಖಲಿಸ್ತಾನ ಪರ ಉಗ್ರಗಾಮಿಗಳ ಗುಂಪೊಂದು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೊಗಳಲ್ಲಿ, ಜೈಶಂಕರ್ ಅವರ ಬೆಂಗಾವಲು ಪಡೆಯ ಕಡೆಗೆ ವ್ಯಕ್ತಿಯೊಬ್ಬ ಆಕ್ರಮಣಕಾರಿಯಾಗಿ ದಾಳಿ ಮಾಡುವುದನ್ನು ಕಾಣಬಹುದು.


ನವದೆಹಲಿ: ಲಂಡನ್‌ನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಭದ್ರತೆಯನ್ನು ಖಲಿಸ್ತಾನಿ ಬೆಂಬಲಿಗರು ಉಲ್ಲಂಘಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಇಂಗ್ಲೆಂಡ್ ತನ್ನ ರಾಜತಾಂತ್ರಿಕ ಬಾಧ್ಯತೆಗಳನ್ನು ಪೂರೈಸಬೇಕೆಂದು ಭಾರತ ನಿರೀಕ್ಷಿಸುತ್ತದೆ ಎಂದು ಹೇಳಿದೆ.

ವಿದೇಶಾಂಗ ಸಚಿವರು ಇಂಗ್ಲೆಂಡಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭದ್ರತೆ ಉಲ್ಲಂಘನೆಯಾಗಿರುವುದನ್ನು ನಾವು ನೋಡಿದ್ದೇವೆ. ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿಗಳ ಇಂತಹ ಪ್ರಚೋದನಕಾರಿ ಚಟುವಟಿಕೆಗಳನ್ನು ನಾವು ಖಂಡಿಸುತ್ತೇವೆ. ಇಂತಹ ಅಂಶಗಳಿಂದ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳ ದುರುಪಯೋಗವಾಗುವುದನ್ನು ನಾವು ಖಂಡಿಸುತ್ತೇವೆ. ಇಂತಹ ಸಂದರ್ಭಗಳಲ್ಲಿ ಆತಿಥೇಯ ಸರ್ಕಾರವು ತಮ್ಮ ರಾಜತಾಂತ್ರಿಕ ಬಾಧ್ಯತೆಗಳನ್ನು ಸಂಪೂರ್ಣವಾಗಿ ಪಾಲಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಲಂಡನ್‌ನ ಚಾಥಮ್ ಹೌಸ್‌ನಲ್ಲಿ ಸಂವಾದ ಕಾರ್ಯಕ್ರಮ ಮುಗಿಸಿ ಜೈಶಂಕರ್ ಅವರು ತೆರಳುತ್ತಿದ್ದ ವೇಳೆ ಅವರಿಗೆ ಅಡ್ಡಿಪಡಿಸಲು ಖಲಿಸ್ತಾನ ಪರ ಉಗ್ರಗಾಮಿಗಳ ಗುಂಪೊಂದು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೊಗಳಲ್ಲಿ, ಜೈಶಂಕರ್ ಅವರ ಬೆಂಗಾವಲು ಪಡೆಯ ಕಡೆಗೆ ವ್ಯಕ್ತಿಯೊಬ್ಬ ಆಕ್ರಮಣಕಾರಿಯಾಗಿ ದಾಳಿ ಮಾಡುವುದನ್ನು ಕಾಣಬಹುದು. ಪ್ರತಿಭಟನಾಕಾರರು ಬೆಂಗಾವಲು ಪಡೆಯ ಮುಂದೆ ತ್ರಿವರ್ಣ ಧ್ವಜವನ್ನು ಹರಿದು ಹಾಕಿದರೆ, ಗುಂಪಿನಲ್ಲಿರುವ ಇತರರು ದೂರದಿಂದ ಘೋಷಣೆಗಳನ್ನು ಕೂಗುತ್ತಿದ್ದಾರೆ.

Comments


bottom of page