top of page

ಪ್ರವಾಸೋದ್ಯಮ ನಿಟ್ಟಿನಲ್ಲಿ ಸಂಗೇನಹಳ್ಳಿ ಕೆರೆ ಅಭಿವೃದ್ಧಿ; ಸಂಸದೆ ಪ್ರಭಾ ಮಲ್ಲಿಕಾರ್ಜುನ

  • Writer: new waves technology
    new waves technology
  • Oct 28, 2024
  • 1 min read

ಜಗಳೂರು -: ತಾಲ್ಲೂಕಿನ ಸಂಗೇನಹಳ್ಳಿ ಕೆರೆ ಕೋಡಿ ಕುದುರೆ ಲಾಳಕಾರದಲ್ಲಿ ಇದ್ದು, ಪ್ರವಾಸೋದ್ಯಮಕ್ಕೆ ಒಳ್ಳೆಯ ಅವಕಾಶವಿದ್ದು ಕೆರೆ ಅಭಿವೃದ್ಧಿಗೆ ಚಿಂತಿಸಲಾಗುವುದು ಎಂದು ಸಂಸದೆ ಪ್ರಭಾ










ಮಲ್ಲಿಕಾರ್ಜುನ್ ತಿಳಿಸಿದರುತಾಲೂಕಿನ ಸಂಗೇನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿ ನಂತರ ಕಲ್ಲೇದೇವಪುರ ಗ್ರಾಮದಲ್ಲಿ ವಿವಿಧ ಅಂಗನವಾಡಿ, ಸಮುದಾಯ ಭವನ ಕಾಮಗಾರಿ ಉದ್ಘಾಟಿಸಿ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ಮೈಸೂರು ಸಂಸ್ಥಾನದಲ್ಲಿ ಸಚಿವರಾಗಿದ್ದ ಜೆ ಎಂ ಇಮಾಮ್ ಸಾಹೇಬರು ಕಟ್ಟಿದ್ದ ಐತಿಹಾಸಿಕ ಕೆರೆಗಳಲ್ಲಿ ಸಂಗೇನಹಳ್ಳಿ ಕೆರೆ ಒಂದಾಗಿದ್ದು, ಇದರ ವಿಹಾಂಗಮ ನೋಟ ಹಾಗೂ ಕೋಡಿಯ ಆಕಾರವು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಇದೆ.ಆದ್ದರಿಂದ ಮುಂದಿನ ದಿನಗಳಲ್ಲಿ ಸೂಳೆ ಕೆರೆಯಂತೆ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಸೇರಿಸುವ ಪ್ರಯತ್ನ ಮಾಡಲಾಗುವುದು ಎಂದರು.ಕಲ್ಲೇದೇವರಪುರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿ, ಬಾಕ್ಸ್ ಚರಂಡಿ ಹೀಗೆ ಮೂಲಭೂತ ಸೌಲಭ್ಯಗಳು ಕಲ್ಪಿಸುವ ಸಲುವಾಗಿ ಪಕ್ಷದಿಂದ ಒಂದು ಕಮಿಟಿ ಮಾಡಿ ಸಭೆ ಕೆರೆದು ಅಭಿವೃದ್ಧಿ ಕೆಲಸ ಕಾರ್ಯಗಳ ಕುರಿತಾಗಿ ಚರ್ಚಿಸಿ ತೀರ್ಮಾನಿಸಿ ಯಾವೆಲ್ಲಾ ಕೆಲಸಗಳು ಆಗಬೇಕು ಎಂದು ನೋಡಿ ಹಂತ ಹಂತವಾಗಿ ಅಭಿವೃದ್ಧಿ ಮಾಡ ಲಾಗುವುದು ಎಂದು ಭರವಸೆ ನೀಡಿದರು.

Comentários


bottom of page