top of page

ಫ್ರಾನ್ಸ್ ಅಧ್ಯಕ್ಷರ ವಿಮಾನದಲ್ಲಿ ಮ್ಯಾಕ್ರನ್- ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ!

  • Writer: new waves technology
    new waves technology
  • Feb 12
  • 1 min read

ಭಾರತ-ಫ್ರಾನ್ಸ್ ಸಂಬಂಧಗಳು ಅಕ್ಷರಶಃ ಹೊಸ ಎತ್ತರವನ್ನು ಮುಟ್ಟಿವೆ ಎಂದು ಯಾರೊಬ್ಬರು ಹೇಳಬಹುದು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.

ಮಾರ್ಸಿಲ್ಲೆ: ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ವಿಮಾನದಲ್ಲಿ ಪ್ರಧಾನಿ ಮೋದಿ ಪ್ರಯಾಣಿಸುತ್ತಿದ್ದಾಗ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಭಾರತ-ಫ್ರಾನ್ಸ್ ಸಂಬಂಧಗಳು ಅಕ್ಷರಶಃ ಹೊಸ ಎತ್ತರವನ್ನು ಮುಟ್ಟಿವೆ ಎಂದು ಯಾರೊಬ್ಬರು ಹೇಳಬಹುದು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ.

ಭಾರತ- ಫ್ರಾನ್ಸ್ ಸಿಇಒಗಳ ವೇದಿಕೆಯನ್ನುದ್ದೇಶಿಸಿ ಉಭಯ ನಾಯಕರು ಮಾತನಾಡುವುದರೊಂದಿಗೆ ಭೇಟಿಯ ದ್ವಿಪಕ್ಷೀಯ ಅಂಶ ಪ್ರಾರಂಭವಾಯಿತು. ಇದರಲ್ಲಿ ಬಾಹ್ಯಾಕಾಶ, ರಕ್ಷಣೆ, ಅನ್ವೇಷಣೆ, ಇಂಧನ, ಮೂಲಸೌಕರ್ಯ, ಕೃಷಿ ಸಂಸ್ಕರಣೆಯಂತಹ ಮುಂಚೂಣಿ ಉದ್ಯಮಿಗಳು ಪಾಲ್ಗೊಂಡರು.


ಫ್ರಾನ್ಸ್- ಅಮೆರಿಕವನ್ನು ಮತ್ತಷ್ಟು ಹತ್ತಿರಕ್ಕೆ ತರುವಲ್ಲಿ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಉತ್ತೇಜಿಸುವಲ್ಲಿ ಉಭಯ ದೇಶಗಳ ವ್ಯಾಪಾರ ಕ್ಷೇತ್ರದ ನಾಯಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದಾರೆ.


ಉಭಯ ನಾಯಕರು ದ್ವಿಪಕ್ಷೀಯ ಸಂಬಂಧ ಮತ್ತು ಜಾಗತಿಕ, ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಭಾರತ- ಫ್ರಾನ್ಸ್ ಕಾರ್ಯತಂತ್ರ ಪಾಲುದಾರಿಕೆಗೆ ಬಲವಾದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ ಎಂದು ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.

Commentaires


bottom of page