top of page

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಗಮನ ಸೆಳೆದ ಫ್ಲೈಯಿಂಗ್ ಮ್ಯಾನ್

  • Writer: new waves technology
    new waves technology
  • Nov 20, 2024
  • 1 min read

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಇಸಾ ಕಲ್ಫೋನ್, ತಮ್ಮ ಎಂಟು ಜನರ ತಂಡದೊಂದಿಗೆ ಕಳೆದ ಮೂರು ವರ್ಷಗಳಿಂದ ವೃತ್ತಿಪರವಾಗಿ ಇದನ್ನು ಮಾಡುತ್ತಿರುವುದಾಗಿ ತಿಳಿಸಿದರು.










ಬೆಂಗಳೂರು: ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಜನ ಹೂಡಿಕೆದಾರರನ್ನು ಎದುರು ನೋಡುತ್ತಿರುವಾಗ, 23 ವರ್ಷದ ಫ್ಲೈಯಿಂಗ್ ಮ್ಯಾನ್- ಯುನೈಟೆಡ್ ಕಿಂಗ್‌ಡಂನ ಇಸಾ ಕಲ್ಫೋನ್ ಅವರು ಈವೆಂಟ್‌ನ ಸ್ಟಾರ್ ಆಕರ್ಷಣೆಯಾಗಿದ್ದರು.

ರಾಜಧಾನಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಬೆಂಗಳೂರು ಟೆಕ್ ಶೃಂಗಸಭೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಫ್ಲೈಯಿಂಗ್ ಮ್ಯಾನ್ ಹಾರಿಕೊಂಡು ಬಂದು ಅಭಿನಂದಿಸಿದರು.

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಇಸಾ ಕಲ್ಫೋನ್, ತಮ್ಮ ಎಂಟು ಜನರ ತಂಡದೊಂದಿಗೆ ಕಳೆದ ಮೂರು ವರ್ಷಗಳಿಂದ ವೃತ್ತಿಪರವಾಗಿ ಇದನ್ನು ಮಾಡುತ್ತಿರುವುದಾಗಿ ತಿಳಿಸಿದರು.

ಬೆಂಗಳೂರು ಟೆಕ್ ಶೃಂಗಸಭೆ 2024: ತಂತ್ರಜ್ಞಾನದ ಪ್ರಗತಿ, ಜಾಗತಿಕ ಸಹಯೋಗಕ್ಕೆ ಈ ಸಮ್ಮಿಟ್ ವಿಶಿಷ್ಟ ವೇದಿಕೆಯಾಗಿದೆ- ಸಿಎಂ ಸಿದ್ದರಾಮಯ್ಯ


ಸಣ್ಣ ಗ್ಯಾಸ್ ಟರ್ಬೈನ್‌ಗಳೊಂದಿಗೆ ಏಳು ಮಿನಿ-ಜೆಟ್ ಎಂಜಿನ್‌ಗಳನ್ನು ಧರಿಸುತ್ತೇನೆ. ನನ್ನ ತೋಳುಗಳಲ್ಲಿ ತಲಾ ಎರಡು ಮತ್ತು ಬೆನ್ನಿನಲ್ಲಿ ಮೂರು, ಜೆಟ್ ಇಂಧನ ಧರಿಸುತ್ತೇನೆ. ಗಾಳಿಯಲ್ಲಿ ಸುಮಾರು ಏಳು ಗಂಟೆಗಳ ಕಾಲ ಹಾರಾಡಬಹುದು ಎಂದು ಅವರು ಹೇಳಿದ್ದಾರೆ.

“1000 ಎಚ್‌ಪಿ ಪವರ್‌ನಲ್ಲಿ ಚಲಿಸುವುದರಿಂದ ಇಂಜಿನ್‌ಗಳು ಬಲಿಷ್ಠವಾಗಿವೆ. ಇದೇ ಮೊದಲಲ್ಲ, ನಾನು ನನ್ನ ತಂಡದೊಂದಿಗೆ ಭಾರತಕ್ಕೆ ಬಂದಿದ್ದೇನೆ. ಆದಾಗ್ಯೂ ನಾನು ಇದೇ ಮೊದಲ ಬಾರಿಗೆ ಏಕಾಂಗಿಯಾಗಿ ಹಾರಾಟ ನಡೆಸುತ್ತಿದ್ದೇನೆ ಮತ್ತು ಟೆಕ್ ಶೃಂಗಸಭೆಯ ಎಲ್ಲಾ ದಿನಗಳಲ್ಲಿ ಹಾರಾಟ ನಡೆಸುತ್ತೇನೆ” ಎಂದು ಇಸಾ ತಿಳಿಸಿದರು.

ಫ್ಲೈಯಿಂಗ್ ಮ್ಯಾನ್ಸ್ ಸೂಟ್ ಅನ್ನು ಗ್ರಾವಿಟಿ ಇಂಡಸ್ಟ್ರೀಸ್ ವಿನ್ಯಾಸಗೊಳಿಸಿದೆ ಮತ್ತು ಇದನ್ನು ಮೊದಲ ಬಾರಿಗೆ 2017 ರಲ್ಲಿ ಸಾರ್ವಜನಿಕಗೊಳಿಸಲಾಯಿತು. ಅವರು ರಿಮೋಟ್ ಕಂಟ್ರೋಲ್ ಪ್ರವೇಶವನ್ನು ಹೊಂದಿದ್ದು, ಜೆಟ್ ಸೂಟ್ 85 mph ವೇಗವನ್ನು ಮತ್ತು 12,000 ಅಡಿ ಎತ್ತರವನ್ನು ತಲುಪುತ್ತದೆ ಎಂದು ಹೇಳಿದರು.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸೇರಿದಂತೆ ಮನರಂಜನೆ ಮತ್ತು ಕ್ರೀಡೆಗಳವರೆಗೆ ವಿವಿಧ ಅಪ್ಲಿಕೇಶನ್‌ಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

Comments


bottom of page