ಬೆಂಗಳೂರು: ಲೈಂಗಿಕ ದೌರ್ಜನ್ಯದ ಆರೋಪ, ಮಾಲಿವುಡ್ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಕೇಸ್
- new waves technology
- Oct 29, 2024
- 1 min read
ಪಂಚತಾರಾ ಹೊಟೆಲ್ ಒಂದರಲ್ಲಿ ತಮ್ಮ ವಿರುದ್ಧ ರಂಜಿತ್ ಬಾಲಕೃಷ್ಣನ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 31 ವರ್ಷದ ವ್ಯಕ್ತಿಯೋರ್ವ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಬೆಂಗಳೂರು: ವ್ಯಕ್ತಿಯೋರ್ವನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಕೇರಳ ಸಿನಿಮಾ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಪಂಚತಾರಾ ಹೊಟೆಲ್ ಒಂದರಲ್ಲಿ ತಮ್ಮ ವಿರುದ್ಧ ರಂಜಿತ್ ಬಾಲಕೃಷ್ಣನ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 31 ವರ್ಷದ ವ್ಯಕ್ತಿಯೋರ್ವ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಎಫ್‌ಐಆರ್ ಪ್ರಕಾರ, 2012 ರಲ್ಲಿ ಬಾಲಕೃಷ್ಣನ್ ಬರೆದು ನಿರ್ಮಿಸಿದ, ಬವುಟ್ಟಿಯುದೇ ನಮತಿಲ್' ಚಿತ್ರದ ಚಿತ್ರೀಕರಣದ ವೇಳೆ ಕೋಝಿಕ್ಕೋಡ್‌ನಲ್ಲಿ ನಟ ಮಮ್ಮುಟ್ಟಿ ಅವರನ್ನು ಭೇಟಿಯಾಗಲು ಹೋದಾಗ ರಂಜಿತ್ ಬಾಲಕೃಷ್ಣನ್ ಅವರನ್ನೂ ಭೇಟಿ ಮಾಡಿದ್ದು, ಈ ಘಟನೆ ನಡೆದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಎಫ್‌ಐಆರ್‌ನ ಪ್ರಕಾರ, ನಿರ್ದೇಶಕರು ತನ್ನ ಫೋನ್ ಸಂಖ್ಯೆಯನ್ನು ಪಡೆದು ಡಿಸೆಂಬರ್ 2012 ರಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೋಟೆಲ್‌ಗೆ ಆಹ್ವಾನಿಸಿದರು ಮತ್ತು ಅಲ್ಲಿ ಅವರು ತನಗೆ ಮದ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ.
"ಮೊದಲು ಕೇರಳದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು ಆದರೆ ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯದ ಘಟನೆ ನಡೆದಿರುವ ಕಾರಣ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ ಮತ್ತು ಇದೀಗ ಎಫ್‌ಐಆರ್ ದಾಖಲಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಈ ಘಟನೆ 2012 ರಲ್ಲಿ ನಡೆದಿದೆ ಎಂದು ಹೇಳಲಾಗುತ್ತದೆ ಆದರೆ ಮಲಯಾಳಂ ಚಲನಚಿತ್ರೋದ್ಯಮದ ಅನೇಕ ಕಲಾವಿದರಿಂದ ಲೈಂಗಿಕ ಕಿರುಕುಳದ ಆರೋಪಗಳ ಸರಣಿಯ ಹಿನ್ನೆಲೆಯಲ್ಲಿ ದೂರುದಾರ ಇದೀಗ ಹೊರಬಂದಿದ್ದಾರೆ, ಆರೋಪಗಳ ಸರಣಿ ಅವರಿಗೆ ದೂರು ದಾಖಲಿಸಲು ಧೈರ್ಯವನ್ನು ನೀಡಿದೆ ಎಂದು ಆರೋಪಿ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸ್ವೀಕರಿಸಿದ ದೂರಿನ ಆಧಾರದ ಮೇಲೆ ಅಕ್ಟೋಬರ್ 26 ರಂದು ಬಿಐಎಎಲ್ (ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್) ಪೊಲೀಸ್ ಠಾಣೆಯಲ್ಲಿ ನಿರ್ದೇಶಕರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು) ಮತ್ತು 66 ಇ (ಗೌಪ್ಯತೆಯ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ,’’ ಎಂದು ಹೇಳಿದರು.
Comments