top of page

ಬಾಂಗ್ಲಾದೇಶ: ಚಟ್ಟೋಗ್ರಾಮದಲ್ಲಿ ಮೂರು ಹಿಂದೂ ದೇವಾಲಯಗಳ ಧ್ವಂಸ!

  • Writer: new waves technology
    new waves technology
  • Nov 30, 2024
  • 1 min read

ಸಂತಾನೇಶ್ವರ ಮಾತ್ರಿ ದೇವಸ್ಥಾನ, ಶೋನಿ ದೇವಸ್ಥಾನ ಮತ್ತು ಶಾಂತನೇಶ್ವರಿ ಕಾಲಿಬರಿ ದೇವಸ್ಥಾನವನ್ನು ಗುರಿಯಾಗಿಸಿಕೊಂಡು ಇಂದು ಮಧ್ಯಾಹ್ನ 2.30ರ ಸುಮಾರಿಗೆ ಹರೀಶ್ ಚಂದ್ರ ಮುನ್ಸೆಫ್ ಲೇನ್ ಪ್ರದೇಶದಲ್ಲಿ ದಾಳಿ ನಡೆದಿದೆ.










ಢಾಕಾ: ಬಾಂಗ್ಲಾದೇಶದ ಚಟ್ಟೋಗ್ರಾಮ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಹಿಂಸಾಚಾರದ ನಡುವೆಯೇ ಗುಂಪೊಂದು ಘೋಷಣೆಗಳನ್ನು ಕೂಗುವ ಮೂಲಕ ಮೂರು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿರುವ ಆತಂಕಕಾರಿ ಘಟನೆ ನಡೆದಿದೆ.

ಸಂತಾನೇಶ್ವರ ಮಾತ್ರಿ ದೇವಸ್ಥಾನ, ಶೋನಿ ದೇವಸ್ಥಾನ ಮತ್ತು ಶಾಂತನೇಶ್ವರಿ ಕಾಲಿಬರಿ ದೇವಸ್ಥಾನವನ್ನು ಗುರಿಯಾಗಿಸಿಕೊಂಡು ಇಂದು ಮಧ್ಯಾಹ್ನ 2.30ರ ಸುಮಾರಿಗೆ ಹರೀಶ್ ಚಂದ್ರ ಮುನ್ಸೆಫ್ ಲೇನ್ ಪ್ರದೇಶದಲ್ಲಿ ದಾಳಿ ನಡೆದಿದೆ.

BDNews24 ನ ವರದಿಗಳ ಪ್ರಕಾರ, ನೂರಾರು ವ್ಯಕ್ತಿಗಳ ಗುಂಪು ಶುಕ್ರವಾರದ ಪ್ರಾರ್ಥನೆಯಲ್ಲಿ ಭಾಗವಹಿಸಿದ ನಂತರ ದೇವಾಲಯಗಳ ಮೇಲೆ ಇಳಿದು, ಇಟ್ಟಿಗೆ ಬ್ಯಾಟ್‌ಗಳನ್ನು ಎಸೆದು ಶೋನಿ ಹಾಗೂ ಮತ್ತೆರಡು ದೇವಾಲಯಗಳ ದ್ವಾರಗಳಿಗೆ ಹಾನಿಯನ್ನುಂಟುಮಾಡಿದೆ.


ಗೇಟ್ ಗಳನ್ನು ಮುರಿದಿದ್ದು, ದೇವಾಲಯದ ಇತರ ಭಾಗಗಳನ್ನು ಧ್ವಂಸಗೊಳಿಸಲಾಗಿದೆ. ದಾಳಿ ಬಗ್ಗೆ ಖಚಿತಪಡಿಸಿರುವ ಕೊತ್ವಾಲಿ ಪೊಲೀಸ್ ಠಾಣೆಯ ಮುಖ್ಯಸ್ಥ ಅಬ್ದುಲ್ ಕರೀಂ, ದಾಳಿಕೋರರು ಉದ್ದೇಶಪೂರ್ವಕವಾಗಿಯೇ ದೇವಾಲಯಗಳಿಗೆ ಹಾನಿಯನ್ನುಂಟು ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ದಾಳಿಕೋರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಂತೆ ಹಿಂದೂ ವಿರೋಧಿ ಮತ್ತು ಇಸ್ಕಾನ್ ವಿರೋಧಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು ಎಂದು ಸಂತಾನೇಶ್ವರ ಮಾತ್ರಿ ದೇವಸ್ಥಾನದ ಆಡಳಿತ ಸಮಿತಿ ಖಾಯಂ ಸದಸ್ಯ ತಪನ್ ದಾಸ್, ಘೋರ ಘಟನೆಗಳನ್ನು ವಿವರಿಸಿದರು.

ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದ ಮೇಲೆ ಇಸ್ಕಾನ್ ನಮಾಜಿ ಸದಸ್ಯ ಚಿನ್ಮೋಯ್ ಕೃಷ್ಣ ದಾಸ್ ಬಂಧನದ ನಂತರ ಚಟ್ಟೋಗ್ರಾಮ್‌ನಲ್ಲಿ ಹಿಂಸಾಚಾರ ನಡೆಯುತ್ತಿದೆ. ಈ ಘಟನೆಯು ಬಾಂಗ್ಲಾದೇಶದ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನುಂಟು ಮಾಡಿದೆ.

Comments


bottom of page