ಬೀದರ್: ಬೆಳೆನಷ್ಟ, ಸಾಲಬಾಧೆ, ಬಾಲ್ಕಿಯಲ್ಲಿ ಮಹಾರಾಷ್ಟ್ರದ ರೈತ ಆತ್ಮಹತ್ಯೆ
- new waves technology
- Dec 19, 2024
- 1 min read
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಡಿಯೋನಿ ತಹಸಿಲ್‌ನ ಇಸ್ಮಾಲವಾಡಿ ಗ್ರಾಮದ ರೈತ ಅಲ್ಲಿಂದ ಸುಮಾರು 140 ಕಿಲೋ ಮೀಟರ್ ದೂರದಲ್ಲಿರುವ ಬೀದರ್ ಜಿಲ್ಲೆಯ ಭಾಲ್ಕಿಯ ಭಂಟ್ಬ್ರಾ ಗ್ರಾಮದಲ್ಲಿ ಆತ್ಮಹತ್ಯೆ

ಬೀದರ್: ಬೆಳೆ ನಷ್ಟ, ಸಾಲಬಾಧೆಯಿಂದ ನೊಂದ ಮಹಾರಾಷ್ಟ್ರದ ರೈತನೋರ್ವ ನೆರೆಯ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೃತನನ್ನು ಸೋಮಶ್ವೇರ್ ಖಂಡು ಮುಗಳೆ(33) ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಡಿಯೋನಿ ತಹಸಿಲ್‌ನ ಇಸ್ಮಾಲವಾಡಿ ಗ್ರಾಮದ ರೈತ ಅಲ್ಲಿಂದ ಸುಮಾರು 140 ಕಿಲೋ ಮೀಟರ್ ದೂರದಲ್ಲಿರುವ ಬೀದರ್ ಜಿಲ್ಲೆಯ ಭಾಲ್ಕಿಯ ಭಂಟ್ಬ್ರಾ ಗ್ರಾಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳೆ ನಷ್ಟ ಹಾಗೂ ಸಾಲಬಾಧೆಯಿಂದ ತುಂಬಾ ಹತಾಶೆಗೆ ಒಳಗಾಗಿದ್ದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿರುವ ಮುಗಳೆ ಎರಡು ಎಕರೆ ಜಮೀನಿನಲ್ಲಿ ಸೋಯಾಬೀನ್ ಬೆಳೆದಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಈ ಸಂಬಂಧ ಭಾಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
Comments