top of page

ಬ್ರಿಟನ್ ಹಣಕಾಸು ಸಚಿವೆ ಸ್ಥಾನಕ್ಕೆ ಶೇಖ್ ಹಸೀನಾ ಸೊಸೆ ಟ್ಯೂಲಿಪ್ ಸಿದ್ಧಿಕ್ ರಾಜೀನಾಮೆ

  • Writer: new waves technology
    new waves technology
  • Jan 15
  • 1 min read

ಸಿದ್ದಿಕಿ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ಎಲ್ಲಾ ವಿಷಯಗಳಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಅಧಿಕಾರಿಗಳ ಸಲಹೆಯನ್ನು ಪಾಲಿಸಿದ್ದೇನೆ ಎಂದು ಹೇಳಿದ್ದಾರೆ.

ಲಂಡನ್ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸೋದರ ಸೊಸೆ ಮತ್ತು ಲೇಬರ್ ಪಕ್ಷದ ಸಂಸದೆ ಟ್ಯೂಲಿಪ್ ಸಿದ್ದಿಕ್ ಬ್ರಿಟನ್ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಳೆದ ವಾರ ಲಂಡನ್‌ನಲ್ಲಿರುವ ಅವರ ಆಸ್ತಿಗಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಮತ್ತು ಪಾರದರ್ಶಕತೆಯ ಕೊರತೆಯ ಆರೋಪವನ್ನು ಎದುರಿಸಿದ್ದರು.

ಬಾಂಗ್ಲಾದೇಶ ಸರ್ಕಾರದ ಉಸ್ತುವಾರಿ ಮುಖ್ಯಸ್ಥ ಡಾ. ಮುಹಮ್ಮದ್ ಯೂನಸ್ ಅವರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡಿದ ಕೆಲವು ದಿನಗಳ ನಂತರ ರಾಜೀನಾಮೆ ನೀಡಲಾಗಿದೆ. ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಸಿದ್ದಿಕಿ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ಎಲ್ಲಾ ವಿಷಯಗಳಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಅಧಿಕಾರಿಗಳ ಸಲಹೆಯನ್ನು ಪಾಲಿಸಿದ್ದೇನೆ ಎಂದು ಹೇಳಿದ್ದಾರೆ. ನಾನು ಹೊಂದಿರುವ ಅಥವಾ ವಾಸಿಸುತ್ತಿದ್ದ ಆಸ್ತಿಗಳ ಬಗ್ಗೆ ಅನುಚಿತವಾಗಿ ವರ್ತಿಸಿದ್ದೇನೆ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ, ನನ್ನ ಸ್ವತ್ತುಗಳು ಕಾನೂನುಬದ್ಧ ಮೂಲಗಳಿಂದ ಸಂಪಾಸಿದ್ದಾಗಿದೆ.


ಬೇರೆ ಯಾವುದರಿಂದಲೂ ಬಂದಿವೆ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ. ಹಣಕಾಸು ಸಚಿವ ಹುದ್ದೆಯಲ್ಲಿ ಮುಂದುವರಿಯುವುದರಿಂದ ಸರ್ಕಾರದ ಕೆಲಸಕ್ಕೆ ಅಡ್ಡಿಯಾಗಬಹುದು ಎಂದು ಟ್ಯೂಲಿಪ್ ಸಿದ್ದಿಕಿ ರಾಜೀನಾಮೆಯಲ್ಲಿ ತಿಳಿಸಿದ್ದಾರೆ. ನನ್ನ ಕುಟುಂಬ ಸಂಪರ್ಕಗಳು ಸಾರ್ವಜನಿಕ ದಾಖಲೆಯ ವಿಷಯವಾಗಿದೆ. ನಾನು ಸಚಿವಳಾದಾಗ, ನನ್ನ ಸಂಬಂಧಗಳು ಮತ್ತು ಖಾಸಗಿ ಹಿತಾಸಕ್ತಿಗಳ ಸಂಪೂರ್ಣ ವಿವರಗಳನ್ನು ಸರ್ಕಾರಕ್ಕೆ ಒದಗಿಸಿದೆ ಎಂದು ಹೇಳಿದ್ದಾರೆ.

ಟ್ಯೂಲಿಪ್ ಸಿದ್ದಿಕಿ ಬದಲಿಗೆ ಲೇಬರ್ ಸಂಸದೆ ಎಮ್ಮಾ ರೆನಾಲ್ಡ್ಸ್ ಹೊಸ ಹಣಕಾಸು ಮಂತ್ರಿಯಾಗಲಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್ ಘೋಷಿಸಿತು. ಟ್ಯೂಲಿಪ್ ಸಿದ್ದಿಕಿ ವಿರುದ್ಧ ಸಂಹಿತೆಯ ಉಲ್ಲಂಘನೆಯ ಯಾವುದೇ ಪ್ರಕರಣ ಕಂಡುಬಂದಿಲ್ಲ ಅಥವಾ ಆಕೆಯಿಂದ ಹಣಕಾಸಿನ ಅಕ್ರಮಗಳ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸ್ಟಾರ್ಮರ್ ಅವರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಶ್ಲಾಘಿಸಿದರು.

コメント


bottom of page