top of page

ಬಿರುಸಿನ ಪ್ರಚಾರದ ಜೊತೆಗೆ ಏರುತ್ತಿರುವ ತಾಪಮಾನ: ಬಿರುಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಚುನಾವಣಾಧಿಕಾರಿಗಳಿಗೆ ಟಿಪ್ಸ್!

  • Writer: new waves technology
    new waves technology
  • Oct 24, 2024
  • 1 min read

ಪೊಲೀಸರು, ರಾಜಕಾರಣಿಗಳು ಮತ್ತು ಚುನಾವಣಾ ಆಯೋಗದ (ಇಸಿ) ಅಧಿಕಾರಿಗಳು ದೇಹದ ನೀರಿನಂಶ ನಿರ್ಜಲೀಕರಣಗೊಳ್ಳದಂತೆ ಹಾಗೂ ಶಾಖವನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ










ಬೆಂಗಳೂರು: ಮೇ 10 ರಂದು ನಡೆಯುವ ವಿಧಾನಸಭೆ ಚುನಾವಣೆಗೆ ಬಿಸಿಲಿನ ತಾಪದಲ್ಲಿ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಾಗಿದೆ.

ಪೊಲೀಸರು, ರಾಜಕಾರಣಿಗಳು ಮತ್ತು ಚುನಾವಣಾ ಆಯೋಗದ (ಇಸಿ) ಅಧಿಕಾರಿಗಳು ದೇಹದ ನೀರಿನಂಶ ನಿರ್ಜಲೀಕರಣಗೊಳ್ಳದಂತೆ ಹಾಗೂ ಶಾಖವನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

ಭಾರತದ ಬಹುತೇಕ ಭಾಗಗಳು ತೀವ್ರವಾದ ಬಿಸಿಲಿನ ಬೇಗೆಗೆ ಒಳಗಾಗುತ್ತವೆ, ಹೀಗಾಗಿ ಜನರ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ಹಲವು ಪ್ರದೇಶಗಳು ಶುಷ್ಕ ಅಥವಾ ಅರೆ ಶುಷ್ಕ ವಾತಾವರಣವಿರುತ್ತದೆ.  ಬೆಂಗಳೂರಿನಂತೆ ಹಸಿರು ಹೊದಿಕೆಯನ್ನು ಹೊಂದಿಲ್ಲದ ಕಾರಣ ಉತ್ತರ ಕರ್ನಾಟಕದ ಕೆಲವು ಭಾಗಗಳ ಜನರು ಹೆಚ್ಚುತ್ತಿರುವ ತಾಪಮಾನದಿಂದ ಹೆಚ್ಚು ತೊಂದರೆಗೊಳಗಾಗುವ ಸಾಧ್ಯತೆಯಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಜನರು ವಿಶೇಷವಾಗಿ ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 3 ರವರೆಗಿನ ಪೀಕ್ ಅವರ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಇದರಿಂದ ದಣಿವು, ಆಲಸ್ಯ ಅಶಾಂತಿ ಮತ್ತು ಶಾಖದ ಹೊಡೆತ ಅನುಭವಿಸುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದಾರೆ.


ವ್ಯವಸ್ಥಿತ ಮತದಾನ ಹಾಗೂ ಚುನಾವಣಾ ಕೆಲಸಗಳಿಗಾಗಿ ಶಾಮಿಯಾನಗಳನ್ನು ಹಾಕುವುದು ಹಾಗೂ ಅಧಿಕಾರಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ತಾಂತ್ರಿಕ ಸಲಹಾ ಸಮಿತಿಯ (ಟಿಎಸಿ) ಸದಸ್ಯ ಡಾ.ರಜತ್ ಆತ್ರೇಯ ಮಾತನಾಡಿ, ಜನರು ಪೀಕ್ ಅವರ್‌ ಅಂದರೆ ಅತಿ ಹೆಚ್ಚು ಬಿಸಿಲಿನ ವೇಳೆಯಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಇದರ ಜೊತೆಗೆ ಸಾಕಷ್ಟು ನೀರು ಕುಡಿಯುವುದು. ನಿಯಮಿತವಾಗಿ  ಮಧ್ಯೆ ಮಧ್ಯೆ , ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವುದು ಮುಖ್ಯ ಎಂದು ಹೇಳಿದರು. 

ಇನ್ನೂ ಬಿಸಿಲಿನಲ್ಲಿ ಸುದೀರ್ಘವಾಗಿ ನಡೆಯಬೇಕಾದ ಸಂದರ್ಭ ಬಂದರೆ ಛತ್ರಿ ಹಿಡಿದುಕೊಳ್ಳುವುದು ಮತ್ತು ಟೋಪಿ ಧರಿಸುವಂತೆ ಡಾ. ಅತ್ರೇಯ ಸಲಹೆ ನೀಡಿದ್ದಾರೆ.

Comments


bottom of page