top of page

ಭಾರತೀಯ ವಿದ್ಯಾರ್ಥಿಗಳ ಅಮೆರಿಕನ್ ವೀಸಾ ರದ್ದತಿ ಬಗ್ಗೆ ಅಮೆರಿಕ ಜೊತೆ ವಿದೇಶಾಂಗ ಇಲಾಖೆ ಚರ್ಚಿಸಿದೆಯೇ: ಕಾಂಗ್ರೆಸ್ ಪ್ರಶ್ನೆ

  • Writer: new waves technology
    new waves technology
  • Apr 18
  • 1 min read

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಅಮೆರಿಕನ್ ವಲಸೆ ವಕೀಲರ ಸಂಘ ನಿನ್ನೆ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡು, ಭಾರತದಲ್ಲಿ ನಮಗೆ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ನವದೆಹಲಿ: ಸಾಗರೋತ್ತರ ವಿದ್ಯಾರ್ಥಿಗಳ 327 ವೀಸಾ ರದ್ದತಿ ಪ್ರಕರಣಗಳಲ್ಲಿ ಶೇಕಡಾ 50 ರಷ್ಟು ಭಾರತೀಯರು ಎಂಬ ಅಮೆರಿಕನ್ ವಲಸೆ ವಕೀಲರ ಸಂಘದ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ವಿಷಯವನ್ನು ತಮ್ಮ ಅಮೆರಿಕದ ವಿದೇಶಾಂಗ ಸಚಿವರ ಜೊತೆ ಚರ್ಚಿಸಬೇಕೆಂದು ಒತ್ತಾಯಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಅಮೆರಿಕನ್ ವಲಸೆ ವಕೀಲರ ಸಂಘ ನಿನ್ನೆ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡು, ಭಾರತದಲ್ಲಿ ನಮಗೆ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಸಂಸ್ಥೆಯು ಇಲ್ಲಿಯವರೆಗೆ ಸಂಗ್ರಹಿಸಿದ ಸಾಗರೋತ್ತರ ವಿದ್ಯಾರ್ಥಿಗಳ 327 ವೀಸಾ ರದ್ದತಿ ಪ್ರಕರಣಗಳಲ್ಲಿ ಶೇಕಡಾ 50ರಷ್ಟು ಭಾರತೀಯರಾಗಿದ್ದಾರೆ. ರದ್ದತಿಗೆ ಕಾರಣಗಳು ಅಸ್ಪಷ್ಟವಾಗಿವೆ. ಇದು ಆತಂಕಕ್ಕೆ ಕಾರಣವಾಗಿದೆ ಎಂದರು.

ವಿದೇಶಾಂಗ ಸಚಿವರು ಈ ವಿಷಯವನ್ನು ಅಮೆರಿಕದ ವಿದೇಶಾಂಗ ಸಚಿವರೊಂದಿಗೆ ಚರ್ಚಿಸಿದ್ದಾರೆಯೇ ಎಂದು ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ. ವಿದೇಶಾಂಗ ಇಲಾಖೆ (DOS) ಮತ್ತು ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ವೀಸಾ ರದ್ದತಿ ಸೇರಿದಂತೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕ್ರಮಣಕಾರಿಯಾಗಿ ಗುರಿಯಾಗಿಸಿಕೊಂಡಿವೆ ಎಂದು ಅಮೇರಿಕನ್ ವಲಸೆ ವಕೀಲರ ಸಂಘದ ಹೇಳಿಕೆ ತಿಳಿಸಿದೆ.

ಎಐಎಲ್ ಎ ವಕೀಲರು, ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದ ಉದ್ಯೋಗಿಗಳಿಂದ ವೀಸಾ ರದ್ದತಿ ಮತ್ತು ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕರ ಮಾಹಿತಿ ವ್ಯವಸ್ಥೆ (SEVIS) ವಜಾಗೊಳಿಸುವಿಕೆಯ 327 ವರದಿಗಳನ್ನು ಸಂಗ್ರಹಿಸಿದೆ ಎಂದು ಹೇಳಿದೆ.


Comments


bottom of page