top of page

ಮತಾಂತರಕ್ಕೆ ಕ್ಲಬ್ ಬಳಸಿದ ತಂದೆ: ಸದಸ್ಯತ್ವ ಕಳೆದುಕೊಂಡ ಟೀಂ ಇಂಡಿಯಾ ಸ್ಟಾರ್ ಆಟಗಾರ್ತಿ ಜೆಮಿಮಾ ರಾಡ್ರಿಗಸ್!

  • Writer: new waves technology
    new waves technology
  • Oct 24, 2024
  • 1 min read

ಜೆಮಿಮಾ ರಾಡ್ರಿಗಸ್ ಅವರ ತಂದೆ ಐವಾನ್ ಕ್ಲಬ್ ಆವರಣವನ್ನು 'ಧಾರ್ಮಿಕ ಚಟುವಟಿಕೆಗಳಿಗೆ' ಬಳಸುವುದನ್ನು ಕೆಲವು ಸದಸ್ಯರು ಆಕ್ಷೇಪಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ದುರ್ಬಲರನ್ನು ಮತಾಂತರಗೊಳಿಸುವ ಕಾರ್ಯಕ್ರಮಗಳು ನಡೆಯುತ್ತಿತ್ತು ಎಂದು ಆರೋಪಿಸಿದರು.











ಮುಂಬೈ: ಮುಂಬೈನ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾದ ಖಾರ್ ಜಿಮ್ಖಾನಾ ಕ್ಲಬ್ ಭಾರತೀಯ ಮಹಿಳಾ ಕ್ರಿಕೆಟರ್ ಜೆಮಿಮಾ ರಾಡ್ರಿಗಸ್ ಅವರ ಸದಸ್ಯತ್ವವನ್ನು ರದ್ದುಗೊಳಿಸಿದೆ. ಜೆಮಿಮಾ ರಾಡ್ರಿಗಸ್ ಅವರ ತಂದೆಯ 'ಧಾರ್ಮಿಕ ಚಟುವಟಿಕೆಗಳ ಕಾರಣ' ಸದಸ್ಯತ್ವವನ್ನು ರದ್ದುಗೊಳಿಸಿದೆ. ಭಾನುವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜೆಮಿಮಾ ಅವರ ಸದಸ್ಯತ್ವವನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಖಾರ್ ಜಿಮ್ಖಾನಾ ಅಧಿಕಾರಿಗಳ ಪ್ರಕಾರ, ಜೆಮಿಮಾ ರಾಡ್ರಿಗಸ್ ಅವರ ತಂದೆ ಐವಾನ್ ಕ್ಲಬ್ ಆವರಣವನ್ನು 'ಧಾರ್ಮಿಕ ಚಟುವಟಿಕೆಗಳಿಗೆ' ಬಳಸುವುದನ್ನು ಕೆಲವು ಸದಸ್ಯರು ಆಕ್ಷೇಪಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ದುರ್ಬಲರನ್ನು ಮತಾಂತರಗೊಳಿಸುವ ಕಾರ್ಯಕ್ರಮಗಳು ನಡೆಯುತ್ತಿತ್ತು ಎಂದು ಆರೋಪಿಸಿದರು.

ಜೆಮಿಮಾ ರೋಡ್ರಿಗಸ್ ಅವರ ಮೂರು ವರ್ಷಗಳ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಮೂಲಗಳ ಪ್ರಕಾರ, ಜೆಮಿಮಾ ರೋಡ್ರಿಗಸ್ ಅವರ ತಂದೆ ಬ್ರದರ್ ಮ್ಯಾನುಯೆಲ್ ಮಿನಿಸ್ಟ್ರೀಸ್ ಎಂಬ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದರು. ಜೆಮಿಮಾ ಅವರ ಹೆಸರಿನಲ್ಲಿ ಐವಾನ್ ಅಧ್ಯಕ್ಷೀಯ ಸಭಾಂಗಣವನ್ನು ಸುಮಾರು ಒಂದೂವರೆ ವರ್ಷಗಳ ಕಾಲ ಕಾಯ್ದಿರಿಸಿದ್ದು 35 ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅವರ ಮೇಲೆ ಧಾರ್ಮಿಕ ಮತಾಂತರದ ಆರೋಪವಿದೆ ಎಂದು ವರದಿಯಾಗಿದೆ.

ಖಾರ್ ಜಿಮಖಾನಾ ವ್ಯವಸ್ಥಾಪಕ ಸಮಿತಿ ಸದಸ್ಯ ಶಿವ ಮಲ್ಹೋತ್ರಾ ಮಾತನಾಡಿ, ದೇಶದಾದ್ಯಂತ ಮತಾಂತರದ ಬಗ್ಗೆ ನಾವು ಕೇಳುತ್ತೇವೆ. ಆದರೆ ಇದು ನಮ್ಮ ಮೂಗಿನ ನೇರಕ್ಕೆ ನಡೆಯುತ್ತಿದೆ. ಖಾರ್ ಜಿಮ್ಖಾನಾ ಸಂವಿಧಾನದ ನಿಯಮ 4A ಪ್ರಕಾರ, ಈ ಕ್ಲಬ್ ಯಾವುದೇ ಧರ್ಮಕ್ಕೆ ಸಂಬಂಧಿಸಿಲ್ಲ. ಧಾರ್ಮಿಕ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ.


ಜೆಮಿಮಾ ರೋಡ್ರಿಗಸ್ ಯಾರು?

ಜೆಮಿಮಾ ರಾಡ್ರಿಗಸ್ ಅವರು 2018ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅವರು ಇಲ್ಲಿಯವರೆಗೆ ಮೂರು ಟೆಸ್ಟ್, 30 ODI ಮತ್ತು 104 T20 ಪಂದ್ಯಗಳನ್ನು ಆಡಿದ್ದಾರೆ. ಮೂರು ಟೆಸ್ಟ್‌ಗಳಲ್ಲಿ ಅವರು 58.75 ಸರಾಸರಿಯಲ್ಲಿ 235 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ.

ಜೆಮಿಮಾ 30 ಏಕದಿನ ಪಂದ್ಯಗಳಲ್ಲಿ ಐದು ಅರ್ಧಶತಕಗಳ ನೆರವಿನಿಂದ 710 ರನ್ ಗಳಿಸಿದ್ದಾರೆ. ಅವರ ಸರಾಸರಿ 27.30 ಆಗಿದೆ. ಜೆಮಿಮಾಗೆ ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿದೆ. ಅವರು 104 ಪಂದ್ಯಗಳಲ್ಲಿ 29.75 ಸರಾಸರಿ ಮತ್ತು 114.17 ಸ್ಟ್ರೈಕ್ ರೇಟ್‌ನಲ್ಲಿ 2142 ರನ್ ಗಳಿಸಿದ್ದಾರೆ. ಜೆಮಿಮಾ 11 ಅರ್ಧಶತಕಗಳನ್ನು ಸಿಡಿಸಿದ್ದಾರೆ.

Comments


bottom of page