top of page

ಮಹಿಳಾ ಎಸಿಪಿ ಜತೆ ಅನೈತಿಕ ಸಂಬಂಧ, ಪತ್ನಿ ಹತ್ಯೆಗೆ ಸಂಚು ಆರೋಪ: ಬೆಂಗಳೂರಿನ ಎಸಿಪಿ ವಿರುದ್ಧ ಕೇಸ್!

  • Writer: new waves technology
    new waves technology
  • Feb 13
  • 1 min read

ಇಬ್ಬರು ಪೊಲೀಸ್ ಅಧಿಕಾರಿಗಳ ನಡುವಿನ ಖಾಸಗಿ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬೆಂಗಳೂರು: ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ, ತಮ್ಮ ಪತಿ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ತನ್ನ ಪತಿ ಮತ್ತು ಆತನ ಪ್ರೇಯಸಿ ತನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ದೂರಿದ್ದಾರೆ.

ಇಬ್ಬರು ಪೊಲೀಸ್ ಅಧಿಕಾರಿಗಳ ನಡುವಿನ ಖಾಸಗಿ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಹಿರಿಯ ವಕೀಲೆ ಗ್ರೀಷ್ಮಾ ಮಾಧ್ಯಮಗಳೊಂದಿಗೆ ಮಾತನಾಡಿ, "ಪ್ರಕರಣದ ದೂರುದಾರೆಯಾಗಿರುವ ತಮ್ಮ ಕಕ್ಷಿದಾರರು, ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ)ರಾಗಿ ಸೇವೆ ಸಲ್ಲಿಸುತ್ತಿರುವ ಗೋವರ್ಧನ್ ಅವರ ಪತ್ನಿಯಾಗಿದ್ದು, ಅವರು ತಮ್ಮ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಪತಿ, ಅವರ ಮಹಿಳಾ ಪೊಲೀಸ್ ಅಧಿಕಾರಿ ಸ್ನೇಹಿತೆ ಮತ್ತು ಮಹಿಳಾ ಅಧಿಕಾರಿಯ ಪೋಷಕರ ವಿರುದ್ಧ ದೂರು ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ.


ಆರೋಪಿ ಅಧಿಕಾರಿ ದೂರುದಾರ ಮಹಿಳೆಯನ್ನು 2014 ರಲ್ಲಿ ಮದುವೆಯಾಗಿದ್ದು, ಅವರಿಗೆ ಎಂಟು ವರ್ಷದ ಮಗುವಿದೆ. ಪೊಲೀಸ್ ಸೇವೆಗೆ ಸೇರುವ ಮೊದಲು, ಆರೋಪಿ ಅಧಿಕಾರಿ ವೈದ್ಯನಾಗಿ ಕೆಲಸ ಮಾಡುತ್ತಿದ್ದರು. ಅವರು ಪ್ರಸ್ತುತ ಬೆಂಗಳೂರಿನ ಸೈಬರ್ ಅಪರಾಧ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಮಹಿಳಾ ಪೊಲೀಸ್ ಅಧಿಕಾರಿ ಕಾರವಾರ ನಗರದ ಸೈಬರ್ ಅಪರಾಧ ಶಾಖೆಯಲ್ಲಿ ಎಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

ದೂರಿನ ಪ್ರಕಾರ, ಗೋವರ್ಧನ್ ಅವರಿಗೆ ಮಹಿಳಾ ಅಧಿಕಾರಿ ಪದೇ ಪದೇ ಕಾಲ್,ಮೆಸೇಜ್ ಮಾಡುತ್ತಿದ್ದರು. ಈ ಬಗ್ಗೆ ಅವರ ಪತ್ನಿ ಅಮೃತಾ ಪ್ರಶ್ನಿಸಿದ್ದಾರೆ. ಆಗ ಪತ್ನಿಗೆ ಹೊಡೆದು ಟಾರ್ಚರ್ ಮಾಡಿದ್ದಾರೆ. ಅಲ್ಲದೇ ಮಹಿಳಾ ಅಧಿಕಾರಿ ಸಹ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಿಳಾ ಅಧಿಕಾರಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಅವರ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿ ಅಧಿಕಾರಿಗಳ ನಡುವಿನ ವಾಟ್ಸಾಪ್ ಚಾಟ್‌ಗಳನ್ನು ಸಹ ಪರಿಶೀಲಿಸಲಾಗುತ್ತಿದೆ, ಅದರಲ್ಲಿ ಅವರು ದೂರುದಾರರ ಬಗ್ಗೆ ಚರ್ಚಿಸಿದ್ದಾರೆ. ದೂರುದಾರರು ತನಗೆ ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದಾರೆ ಎಂದು ವಕೀಲೆ ಗ್ರೀಷ್ಮಾ ತಿಳಿಸಿದ್ದಾರೆ.

"ನಾವು ಯೋಜನೆಯನ್ನು ಕಾರ್ಯಗತಗೊಳಿಸುತ್ತೇವೆ," "ನಾವಿಬ್ಬರೂ ಅಧಿಕೃತವಾಗಿ ಮದುವೆಯಾಗುತ್ತೇವೆ," "ನಮ್ಮ ಪ್ರೀತಿ ತುಂಬಾ ತೀವ್ರವಾಗಿದೆ," ಮತ್ತು "ಅದಕ್ಕಾಗಿಯೇ ನಾವು ಕೆಲವೊಮ್ಮೆ ಪರಸ್ಪರ ಹುಚ್ಚರಂತೆ ವರ್ತಿಸುತ್ತೇವೆ" ಮುಂತಾದ ಸಂಭಾಷಣೆಗಳನ್ನು ಒಳಗೊಂಡಿರುವ ಇಬ್ಬರು ಆರೋಪಿ ಅಧಿಕಾರಿಗಳ ನಡುವಿನ ವಾಟ್ಸಾಪ್ ಸಂದೇಶಗಳ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

Comments


bottom of page