'ಮುಂದಿನ 78,000 ವರ್ಷಗಳ ಕಾಲ...': 26 ಜನರ ಹತ್ಯೆಗೈದ ಪಹಲ್ಗಾಮ್ ದಾಳಿಯ ಉಗ್ರರಿಗೆ ಸುನೀಲ್ ಗವಾಸ್ಕರ್
- new waves technology
- Apr 25
- 2 min read
ಈ ಮಧ್ಯೆ, 25 ಪ್ರವಾಸಿಗರು ಮತ್ತು ಒಬ್ಬ ಕಾಶ್ಮೀರಿ ಹತ್ಯೆಗೆ ಕಾರಣರಾದ ಉಗ್ರರಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಬಲವಾದ ಸಂದೇಶವನ್ನು ರವಾನಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಮಂಗಳವಾರ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾಗಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಸಾವಿಗೀಡಾದ 26 ಜನರಲ್ಲಿ ಒಬ್ಬರು ನೇಪಾಳಿ ಪ್ರಜೆಯಾಗಿದ್ದು, ಉಳಿದವರು ದೇಶದ 14 ರಾಜ್ಯಗಳಿಂದ ಬಂದವರು. ಭಾರತ ಸರ್ಕಾರವು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದು, ಈಗಾಗಲೇ ಹಲವಾರು ಮಿಲಿಟರಿಯೇತರ ಕ್ರಮಗಳನ್ನು ತೆಗೆದುಕೊಂಡಿದೆ. ಇದರಲ್ಲಿ ಸಿಂಧೂ ಜಲ ಒಪ್ಪಂದವನ್ನು ಅನಿರ್ದಿಷ್ಟ ಅವಧಿಗೆ ತಡೆಹಿಡಿಯುವುದು, ಅಟ್ಟಾರಿ ಗಡಿಯನ್ನು ಮುಚ್ಚುವುದು ಮತ್ತು ಸದ್ಯ ಭಾರತದಲ್ಲಿರುವ ಎಲ್ಲ ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸುವುದು ಸೇರಿವೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಐಪಿಎಲ್ 2025 ಪಂದ್ಯಕ್ಕೂ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ.
'ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಇದು ನಮ್ಮೆಲ್ಲ ಭಾರತೀಯರ ಮೇಲೆ ಪರಿಣಾಮ ಬೀರಿದೆ. ಎಲ್ಲ ಅಪರಾಧಿಗಳಿಗೆ ಮತ್ತು ಅವರನ್ನು (ಭಯೋತ್ಪಾದಕರನ್ನು) ಬೆಂಬಲಿಸಿದ ಎಲ್ಲರಿಗೂ, ಅವರ ನಿರ್ವಾಹಕರಿಗೆ ನಾನು ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ಈ ರೀತಿಯ ಹೋರಾಟದಿಂದ ಏನು ಸಾಧಿಸಲಾಗಿದೆ? ಕಳೆದ 78 ವರ್ಷಗಳಿಂದ, ಒಂದು ಮಿಲಿಮೀಟರ್ ಭೂಮಿಯೂ ಸಹ ಕೈ ಬದಲಿಸಿಕೊಂಡಿಲ್ಲ, ಅಲ್ಲವೇ? ಹಾಗಾದರೆ ಮುಂದಿನ 78,000 ವರ್ಷಗಳವರೆಗೂ ಏನೂ ಬದಲಾಗುವುದಿಲ್ಲ. ಹಾಗಾದರೆ ನಾವು ಶಾಂತಿಯಿಂದ ಬದುಕಬಾರದು ಮತ್ತು ನಮ್ಮ ದೇಶವನ್ನು ಬಲಿಷ್ಠಗೊಳಿಸಬಾರದು ಏಕೆ? ಅದು ನನ್ನ ಮನವಿ' ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.
ಈ ಮಧ್ಯೆ, 25 ಪ್ರವಾಸಿಗರು ಮತ್ತು ಒಬ್ಬ ಕಾಶ್ಮೀರಿ ಹತ್ಯೆಗೆ ಕಾರಣರಾದ ಉಗ್ರರಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಬಲವಾದ ಸಂದೇಶವನ್ನು ರವಾನಿಸಿದ್ದಾರೆ.
'ಕಾರ್ಗಿಲ್ ನಿಂದ ಕನ್ಯಾಕುಮಾರಿಯವರೆಗೆ ದುಃಖ ಮತ್ತು ಕ್ರೋಧವಿದೆ. ಈ ದಾಳಿ ಕೇವಲ ಮುಗ್ಧ ಪ್ರವಾಸಿಗರ ಮೇಲೆ ನಡೆದಿಲ್ಲ; ದೇಶದ ಶತ್ರುಗಳು ಭಾರತದ ಆತ್ಮದ ಮೇಲೆ ದಾಳಿ ಮಾಡುವ ಧೈರ್ಯವನ್ನು ತೋರಿಸಿದ್ದಾರೆ. ಭಯೋತ್ಪಾದನೆಯ ಸ್ವರ್ಗದಲ್ಲಿ ಉಳಿದಿರುವ ಎಲ್ಲವನ್ನೂ ನಾಶಮಾಡುವ ಸಮಯ ಬಂದಿದೆ. 140 ಕೋಟಿ ಜನರ ಇಚ್ಛಾಶಕ್ತಿ ಭಯೋತ್ಪಾದನೆಯ ಯಜಮಾನರ ಬೆನ್ನು ಮುರಿಯುತ್ತದೆ' ಎಂದಿದ್ದಾರೆ.
ಜಗತ್ತಿನಾದ್ಯಂತ ಸಂದೇಶ ರವಾನಿಸಲು ಸ್ಪಷ್ಟವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಿದ ಪ್ರಧಾನಿ, 'ನಾನು ಇಡೀ ಜಗತ್ತಿಗೆ ಹೇಳುತ್ತೇನೆ. ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತದೆ, ಪತ್ತೆಹಚ್ಚುತ್ತದೆ ಮತ್ತು ಶಿಕ್ಷಿಸುತ್ತದೆ. ಅವರು ಎಲ್ಲಿಯೇ ಇದ್ದರು ನಾವು ಅವರನ್ನು ಬೆನ್ನಟ್ಟುತ್ತೇವೆ. ಭಯೋತ್ಪಾದನೆಯಿಂದ ಭಾರತದ ಚೈತನ್ಯ ಎಂದಿಗೂ ಮುರಿಯುವುದಿಲ್ಲ. ಭಯೋತ್ಪಾದನೆಗೆ ಶಿಕ್ಷೆಯಾಗದೆ ಉಳಿಯುವುದಿಲ್ಲ. ನ್ಯಾಯ ಸಿಗುವಂತೆ ನೋಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಇಡೀ ರಾಷ್ಟ್ರವು ಈ ಸಂಕಲ್ಪದಲ್ಲಿ ದೃಢವಾಗಿದೆ. ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬರೂ ನಮ್ಮೊಂದಿಗಿದ್ದಾರೆ. ಈ ಸಮಯದಲ್ಲಿ ನಮ್ಮೊಂದಿಗೆ ನಿಂತ ವಿವಿಧ ದೇಶಗಳ ಜನರು ಮತ್ತು ಅವರ ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆ' ಎಂದು ಹೇಳಿದರು.
Comentários