top of page

'ಮೋದಿಯವ್ರೇ ನಿಮ್ಮನ್ನು ಮತ್ತೆ ನೋಡಿ ಖುಷಿ ಆಯ್ತು,ನಾವಿಬ್ರು ಇನ್ಸ್ಟಾಗ್ರಾಂನಲ್ಲಿ ಎಷ್ಟು ಫೇಮಸ್ ಗೊತ್ತಾ'?: Melody ಟ್ರೆಂಡ್ ಬಗ್ಗೆ ಜೋಕ್ ಮಾಡಿದ ಮೆಲೋನಿ

  • Writer: new waves technology
    new waves technology
  • Jun 17
  • 2 min read
ಕಳೆದ ಮೇ ತಿಂಗಳಲ್ಲಿ ರೋಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿಯವರಿಗೆ ‘Melody’ ಚಾಕಲೇಟ್ ಉಡುಗೊರೆಯಾಗಿ ನೀಡಿದ್ದರು
ಕಳೆದ ಮೇ ತಿಂಗಳಲ್ಲಿ ರೋಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿಯವರಿಗೆ ‘Melody’ ಚಾಕಲೇಟ್ ಉಡುಗೊರೆಯಾಗಿ ನೀಡಿದ್ದರು

ಮೊನ್ನೆ ಜೂನ್ 15ರಿಂದ ಫ್ರಾನ್ಸ್‌ನ Évian-les-Bains ನಲ್ಲಿ ನಡೆಯುತ್ತಿರುವ G7 Summit ಶೃಂಗಸಭೆಯಲ್ಲಿ, ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ‘ಮೆಲೋಡಿ’ (Melodi) ಸೋಷಿಯಲ್ ಮೀಡಿಯಾ ಟ್ರೆಂಡ್‌ಗೆ ಸಂಬಂಧಿಸಿದಂತೆ ಹಾಸ್ಯಮಯ ಮಾತುಕತೆ ನಡೆಸಿದ ವಿಡಿಯೊ ವೈರಲ್ ಆಗಿದೆ.

ಕಳೆದ ಮೇ ತಿಂಗಳಲ್ಲಿ ರೋಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿಯವರಿಗೆ ‘Melody’ ಚಾಕಲೇಟ್ ಉಡುಗೊರೆಯಾಗಿ ನೀಡಿದ್ದರು. ಅದನ್ನು ಮೆಲೋನಿ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದರು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಗಳಿಸಿತ್ತು. ಅದಕ್ಕೆ 1.3 ಕೋಟಿ (13 ಮಿಲಿಯನ್) ಲೈಕ್ಸ್ ಹಾಗೂ 19 ಕೋಟಿ (190 ಮಿಲಿಯನ್) ವೀಕ್ಷಣೆಗಳು ದೊರಕಿದ್ದವು. ಅದು ಅವರ ಅತ್ಯಂತ ಜನಪ್ರಿಯ ವಿಡಿಯೊವಾಗಿ ದಾಖಲಾಗಿತ್ತು.

ಈ ವಾರ ಫ್ರಾನ್ಸ್‌ನ Evian-les-Bains ನಲ್ಲಿ ನಡೆದ G7 Summit ಶೃಂಗಸಭೆಯಲ್ಲಿ ವಿಶ್ವ ನಾಯಕರು ಜಾಗತಿಕ ಮಟ್ಟದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಲು ಸೇರಿದ್ದರು. ನಿನ್ನೆ ಪ್ರಧಾನಿ ಮೋದಿಯವರನ್ನು ಕಂಡ ತಕ್ಷಣ ಮಾತನಾಡಿಸಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಮೋದಿಯವರೇ ನಿಮ್ಮನ್ನು ಇವತ್ತು ಮತ್ತೆ ಕಂಡು ಭೇಟಿ ಮಾಡಿದ್ದು ಖುಷಿಯಾಯಿತು. ಕಳೆದ ತಿಂಗಳು ನೀವು ಮೆಲೋಡಿ ಟಾಫಿ ಕೊಟ್ಟಿದ್ದನ್ನು ನಾವು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಎಷ್ಟರ ಮಟ್ಟಿಗೆ ವೈರಲ್ ಆಗಿ ಮೆಲೋಡಿ ಹ್ಯಾಶ್ ಟಾಗ್ ಟ್ರೆಂಡ್ ಆಯಿತು ಎಂದು ಹೇಳಿ ನಕ್ಕರು.


‘ಮೆಲೋಡಿ’ ಸಂಚಲನ

ಒಂದು ಕಾಲದಲ್ಲಿ ಕೇವಲ ತಮಾಷೆಯ ಇಂಟರ್ನೆಟ್ ಜೋಕ್ ಆಗಿದ್ದ ‘ಮೆಲೋಡಿ’ (Melodi) ಇಂದು ಸಾಮಾಜಿಕ ಜಾಲತಾಣಗಳ ಮಹತ್ವದ ಸಂಚಲನವಾಗಿ ಬೆಳೆದಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರ ಹೆಸರಿನ ಸಂಯೋಜನೆಯಾದ ‘ಮೆಲೋಡಿ’ ಕಳೆದ ಮೂರು ವರ್ಷಗಳಲ್ಲಿ ಗುರುತಿಸಬಹುದಾದ ಆನ್‌ಲೈನ್ ಬ್ರ್ಯಾಂಡ್ ಆಗಿ ರೂಪುಗೊಂಡಿದೆ.

2023ರಲ್ಲಿ ದುಬೈನಲ್ಲಿ ನಡೆದ COP28 ಸಮ್ಮೇಳನದ ವೇಳೆ ಮೆಲೋನಿ ಹಂಚಿಕೊಂಡಿದ್ದ ಒಂದು ಸೆಲ್ಫಿ ಈ ಜಾಗತಿಕ ಇಂಟರ್ನೆಟ್ ಟ್ರೆಂಡ್‌ಗೆ ಕಾರಣವಾಯಿತು. ಆ ಚಿತ್ರವನ್ನು ಹಂಚಿಕೊಂಡು ಅವರು, “COP28ನಲ್ಲಿ ಒಳ್ಳೆಯ ಸ್ನೇಹಿತರು #Melodi ಎಂದು ಶೀರ್ಷಿಕೆ ನೀಡಿದ್ದರು.

ಈ ಹ್ಯಾಶ್‌ಟ್ಯಾಗ್ ತಕ್ಷಣವೇ ವೈರಲ್ ಆಯಿತು. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಅದನ್ನು ಮೀಮ್ಸ್, ಫ್ಯಾನ್ ಎಡಿಟ್‌ಗಳು ಮತ್ತು ಹಾಸ್ಯಮಯ ಪೋಸ್ಟ್‌ಗಳಾಗಿ ಪರಿವರ್ತಿಸಿಕೊಂಡರು. ಆ ಬಳಿಕ ಮೋದಿ ಮತ್ತು ಮೆಲೋನಿ ನಡುವಿನ ಪ್ರತಿಯೊಂದು ಭೇಟಿಯೂ ಹೊಸ ಆನ್‌ಲೈನ್ ಚರ್ಚೆಗೆ ಕಾರಣವಾಗುತ್ತಿದೆ. ಜಿ7 ಶೃಂಗಸಭೆಗಳು, ಅಂತಾರಾರಾಷ್ಟ್ರೀಯ ಸಮ್ಮೇಳನಗಳು ಅಥವಾ ದ್ವಿಪಕ್ಷೀಯ ಸಭೆಗಳಾಗಲಿ, ‘#Melodi’ ಹ್ಯಾಶ್‌ಟ್ಯಾಗ್ ಮತ್ತೆ ಮತ್ತೆ ಟ್ರೆಂಡ್ ಆಗುತ್ತಿದೆ.

‘ಮೆಲೋಡಿ’ಗೆ ಸಿಹಿಯಾದ ಗೌರವ

ಕಳೆದ ತಿಂಗಳು ರೋಮ್‌ಗೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ಮೋದಿ ಅವರು ಮೆಲೋನಿಗೆ ‘Melody’ ಟಾಫಿಗಳ ಪ್ಯಾಕೆಟ್‌ನ್ನು ಉಡುಗೊರೆಯಾಗಿ ನೀಡಿದರು. ಇದನ್ನು ‘ಮೆಲೋಡಿ’ ಸಂಚಲನಕ್ಕೆ ಮೋದಿ ನೀಡಿದ ಅತ್ಯಂತ ಸಿಹಿಯಾದ ಗೌರವ ಎಂದು ಹಲವರು ಬಣ್ಣಿಸಿದರು.


Comments


bottom of page