top of page

ರಾಜ್ಯಕ್ಕೆ ನಬಾರ್ಡ್ ಸಾಲ ಕಡಿತ: ನಿರ್ಮಲಾ ಸೀತಾರಾಮನ್ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ

  • Writer: new waves technology
    new waves technology
  • Nov 20, 2024
  • 1 min read

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾತ್ರಿ ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳೆಸಲಿದ್ದು, ನಾಳೆ ದೆಹಲಿಯಲ್ಲಿ ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ.










ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌(ನಬಾರ್ಡ್))ನಿಂದ ಈ ವರ್ಷ ರಾಜ್ಯಕ್ಕೆ ಸಾಲದ ಮೊತ್ತವನ್ನು "ಕಡಿತ" ಮಾಡಿದ ಕುರಿತು ಚರ್ಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿಗೆ ಅಪಾಯಿಂಟ್‌ಮೆಂಟ್ ಕೇಳಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾತ್ರಿ ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳೆಸಲಿದ್ದು, ನಾಳೆ ದೆಹಲಿಯಲ್ಲಿ ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ.

ನಾನು ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿಗೆ ಅಪಾಯಿಂಟ್ಮೆಂಟ್ ಕೇಳಿದ್ದೇನೆ. ಏಕೆಂದರೆ ಈ ವರ್ಷ ರಾಜ್ಯಕ್ಕೆ ನಬಾರ್ಡ್ ಸಾಲ ಕಡಿಮೆಯಾಗಿದೆ. ಕಳೆದ ವರ್ಷ 5,600 ಕೋಟಿ ರೂ. ಇತ್ತು. ಈ ವರ್ಷ 2,340 ಕೋಟಿ ರೂ.ಗೆ ಅಂದರೆ ಶೇ. 58 ರಷ್ಟು ಕಡಿಮೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಬಾರ್ಡ್ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಹೀಗಾಗಿ ನಾನು ಹಣಕಾಸು ಸಚಿವರನ್ನು ಭೇಟಿ ಮಾಡಿ ನಬಾರ್ಡ್ ಸಾಲದ ಮೊತ್ತ ಕಡಿತಗೊಳಿಸದಂತೆ ಅವರಿಗೆ ವಿನಂತಿ ಮಾಡುತ್ತೇನೆ" ಎಂದರು.

ದೆಹಲಿ ಭೇಟಿ ವೇಳೆ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, "ನಾಳೆ ಸಂಜೆಯೊಳಗೆ ರಾಜ್ಯಕ್ಕೆ ಮರಳಬೇಕು, ಸಮಯ ಸಿಕ್ಕರೆ ಭೇಟಿಯಾಗುತ್ತೇನೆ" ಎಂದರು.

ಬೆಂಗಳೂರು ಟೆಕ್ ಶೃಂಗಸಭೆ 2024: ತಂತ್ರಜ್ಞಾನದ ಪ್ರಗತಿ, ಜಾಗತಿಕ ಸಹಯೋಗಕ್ಕೆ ಈ ಸಮ್ಮಿಟ್ ವಿಶಿಷ್ಟ ವೇದಿಕೆಯಾಗಿದೆ- ಸಿಎಂ ಸಿದ್ದರಾಮಯ್ಯ


ವಿಕ್ರಮ್ ಗೌಡ ಎನ್‌ಕೌಂಟರ್‌ ಸಮರ್ಥಿಸಿಕೊಂಡ ಸಿಎಂ

ಇದೇ ವೇಳೆ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ನಕ್ಸಲ್ ನಾಯಕ ವಿಕ್ರಮ್ ಗೌಡನನ್ನು ಎನ್‌ಕೌಂಟರ್‌ ಮಾಡಿರುವುದನ್ನು ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ, ಆತ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಮತ್ತು ಮುಖ್ಯವಾಹಿನಿಗೆ ಬರಲು ಸರ್ಕಾರ ಆತನಿಗೆ ನಿರ್ದೇಶನ ನೀಡಿತ್ತು ಎಂದರು.

"ನಕ್ಸಲರು ಶರಣಾದರೆ ಅವರಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗುವುದು ಎಂದು ಹೇಳಿದ್ದೇವೆ. ವಿಕ್ರಮ್ ಗೌಡ ಶರಣಾಗಲಿಲ್ಲ ಎಂದರು.

ಕೇರಳ ಸರ್ಕಾರ ಆತನ ತಲೆಗೆ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ನಮ್ಮ ಸರ್ಕಾರ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಹೀಗಾಗಿ ಹತ್ಯೆ ಮಾಡಿದ್ದಾರೆ. "ನೀವು ಅದನ್ನು (ಎನ್ಕೌಂಟರ್) ಪ್ರಶಂಸಿಸಬೇಕು ಎಂದರು.

ಸೋಮವಾರ ಕೆಲವು “ಬುದ್ಧಿಜೀವಿಗಳ” ಎನ್‌ಕೌಂಟರ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನಕ್ಸಲಿಸಂ ಉಳಿಯಬೇಕೇ ಅಥವಾ ಹೋಗಬೇಕೇ?” ಎಂದು ಪ್ರಶ್ನಿಸಿದರು.

Comments


bottom of page