top of page

ರಾಜ್ಯ ಮಟ್ಟದ ಶಿಕ್ಷಣ ರತ್ನ ಪ್ರಶಸ್ತಿಗೆ ಶಿಕ್ಷಕ ಸುರೇಶ ಮುಗಳಿ ಆಯ್ಕೆ

  • Writer: new waves technology
    new waves technology
  • Oct 25, 2024
  • 1 min read

ಅಕ್ಟೋಬರ್ 15 ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಸುರೇಶ ಬಿ ಮುಗಳಿ ಅವರಿಗೆ ಈ 'ಶಿಕ್ಷಣ ರತ್ನ' ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.











ಬೆಂಗಳೂರು: ಧಾರವಾಡ ತಾಲೂಕಿನ ಸರ್ಕಾರಿ ಪ್ರೌಢಶಾಲೆ ವೀರಾಪೂರದ ಆಂಗ್ಲ ಭಾಷಾ ಶಿಕ್ಷಕರಾದ ಸುರೇಶ ಬಿ ಮುಗಳಿ ಅವರು ಸೂರ್ಯ ಫೌಂಡೇಶನ್, ಸ್ಪಾರ್ಕ್ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ ನೀಡುವ ರಾಜ್ಯ ಮಟ್ಟದ ಶಿಕ್ಷಣ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅಕ್ಟೋಬರ್ 15 ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಸುರೇಶ ಬಿ ಮುಗಳಿ ಅವರಿಗೆ ಈ 'ಶಿಕ್ಷಣ ರತ್ನ' ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ಆಂಗ್ಲ ಭಾಷೆಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಸುರೇಶ ಬಿ ಮುಗಳಿ ಅವರು ಪಠ್ಯಪುಸ್ತಕ ರಚನೆ, ಶಿಕ್ಷಕರ ತರಬೇತಿ, ಸಾಹಿತ್ಯ ರಚನೆ ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆ, ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಇವರ ಅತ್ಯುತ್ತಮ ಪ್ರಮಾಣಿಕ ಸೇವೆಯನ್ನು ಪರಿಗಣಿಸಿ 2024 -25 ನೇ ಸಾಲಿನ ಶಿಕ್ಷಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶಿಕ್ಷಕರ ದಿನಾಚರಣೆ: ಸಿಎಂ ಸಿದ್ದರಾಮಯ್ಯರಿಂದ 43 ಶಿಕ್ಷಕರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ


ಇಂಡೋಗ್ಲೋಬ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಆಯೋಗದಲ್ಲಿ ಬೆಂಗಳೂರಿನ ಹುರಳಿ ಚಿಕ್ಕನಹಳ್ಳಿ ಚಿಕ್ಕಬಾಣವರದಲ್ಲಿ ಅಕ್ಟೋಬರ್ 15ರಂದು ನಡೆಯಲಿರುವ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸೂರ್ಯ ಫೌಂಡೇಶನ್, ಸ್ಪಾರ್ಕ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಸೋಮೇಶ್ ಅವರು ತಿಳಿಸಿದ್ದಾರೆ.

Comments


bottom of page