top of page

ರಾಯಚೂರು ವಿಶ್ವವಿದ್ಯಾಲಯ ಬೋಧಕ ಸಿಬ್ಬಂದಿ ನೇಮಕಾತಿ: ST, ಒಬಿಸಿಗಿಲ್ಲ ಮೀಸಲಾತಿ

  • Writer: new waves technology
    new waves technology
  • Nov 4, 2024
  • 2 min read

ಬೆಂಗಳೂರು: ವಿಶ್ವವಿದ್ಯಾಲಯಗಳ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ 'ವಿಷಯವಾರು ಮೀಸಲಾತಿ' ಅನ್ವಯ ಮಾಡಬಾರದು ಎಂದು ಕೇಂದ್ರ ಸರ್ಕಾರ 2019ರಲ್ಲಿ ಆದೇಶಿಸಿ ಐದು ವರ್ಷಗಳಾಗುತ್ತಿದೆ.











ಆದರೆ ರಾಜ್ಯ ಸರ್ಕಾರವು ತಾಂತ್ರಿಕ ಕಾರಣ ಮುಂದೊಡ್ಡಿ, ಇದನ್ನು ಪಾಲಿಸುತ್ತಿಲ್ಲ. ಇದರಿಂದಾಗಿ ವಿಶ್ವವಿದ್ಯಾಲಯಗಳ ನೇಮಕಾತಿಯಲ್ಲಿ ಹಲವು ಸಮುದಾಯಗಳು ಮೀಸಲಾತಿ ವಂಚಿತವಾಗುತ್ತಿವೆ.


ರಾಯಚೂರು ವಿಶ್ವವಿದ್ಯಾಲಯವು 24 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದ್ದು, ಇಲ್ಲಿ 'ವಿಷಯವಾರು ಮೀಸಲಾತಿ' ಅನ್ವಯ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆಯು ರೋಸ್ಟರ್ ಸಿದ್ದಪಡಿಸಿಕೊಟ್ಟಿದೆ. ಇದರಿಂದಾಗಿ ಪರಿಶಿಷ್ಟ ಪಂಗಡ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾತಿ ಸಿಕ್ಕಿಲ್ಲ.

ಇದನ್ನು ಆಕ್ಷೇಪಿಸಿ ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ, 'ವಿಷಯವಾರು ಮೀಸಲಾತಿ ಅನ್ವಯ ಮಾಡಿದರೆ, ಮೀಸಲಾತಿ ಸಿಗದೇ ಹೋಗುತ್ತದೆ ಅಥವಾ ಒಂದು ಸಮುದಾಯಕ್ಕಷ್ಟೇ ಮೀಸಲಾತಿ ದೊರೆತಂತಾಗುತ್ತದೆ. ಇತರ ಅರ್ಹ ಸಮುದಾಯಗಳಿಗೆ ಅನ್ಯಾಯವಾಗುತ್ತದೆ' ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದರು.

ಆದರೂ ಇಲಾಖೆಯು 'ವಿಷಯವಾರು ಮೀಸಲಾತಿ' ಅನ್ವಯ ಮಾಡಿ, ರೋಸ್ಟರ್‌ ಅನ್ನು ಅಂತಿಮಗೊಳಿಸಿತು. ಪರಿಣಾಮವಾಗಿ 24 ಹುದ್ದೆಗಳಲ್ಲಿ 15 ಹುದ್ದೆಗಳು (ಶೇ 62ರಷ್ಟು) ಸಾಮಾನ್ಯ ವರ್ಗಕ್ಕೇ ಹೋಗಿದ್ದು, ಪರಿಶಿಷ್ಟ ಜಾತಿಗಳಿಗೆ 9 ಹುದ್ದೆಗಳು (ಶೇ 37ರಷ್ಟು) ಸಿಕ್ಕಿವೆ. ಹೀಗಾಗಿ ಈ ನೇಮಕಾತಿಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಯಾವುದೇ ಹುದ್ದೆ ಉಳಿದಿಲ್ಲ. ಮಹಿಳಾ ಮೀಸಲಾತಿಯೂ ದೊರೆತಿಲ್ಲ.

ವಿಷಯವಾರು ಬದಲಿಗೆ ಎಲ್ಲ ಹುದ್ದೆಗಳಿಗೆ ಮೀಸಲಾತಿ ಅನ್ವಯ ಮಾಡಿದ್ದರೆ, ಸಾಮಾನ್ಯ ವರ್ಗಕ್ಕೆ 12 ಹುದ್ದೆಗಳು ಮಾತ್ರ ದೊರೆಯುತ್ತಿತ್ತು. ಪರಿಶಿಷ್ಟ ಜಾತಿಗಳಿಗೆ 4, ಪರಿಶಿಷ್ಟ ಪಂಗಡಗಳಿಗೆ 2 ಮತ್ತು ಇತರೆ ಹಿಂದುಳಿದ ವರ್ಗಗಳಿಗೆ 6 ಹುದ್ದೆಗಳು ದೊರೆಯುತ್ತಿತ್ತು.

ಇದನ್ನು ಸರಿಪಡಿಸುವಂತೆ ಅಭ್ಯರ್ಥಿಗಳು ಹಲವು ಬಾರಿ ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ಆದರೆ ಮೀಸಲಾತಿ ರೋಸ್ಟರ್‌ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿಲಿಲ್ಲ. ವಾಟ್ಸ್‌ಆಯಪ್‌ ಸಂದೇಶಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಇಲಾಖೆ ಸಚಿವರಿಂದಲೂ ಪ್ರತಿಕ್ರಿಯೆ ದೊರೆತಿಲ್ಲ.

ಶಿವಪ್ರಸಾದ್ ಕೆ.ಎನ್‌. ಅಭ್ಯರ್ಥಿಎಸ್‌ಟಿ ಮತ್ತು ಒಬಿಸಿ ಮೀಸಲಾತಿ ನೀಡದೇ ಇರುವುದರಿಂದ ಈ ಸಮುದಾಯಗಳ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳ ಜತೆ ಸ್ಪರ್ಧಿಸುವಂತಾಗಿದೆರಾಜಣ್ಣ ಎಂ. ಸಹಾಯಕ ಪ್ರಾಧ್ಯಾಪಕ ನ್ಯಾಷನಲ್ ಕಾಲೇಜು ಬೆಂಗಳೂರುಮಹಿಳಾ ಮೀಸಲಾತಿಯನ್ನೂ ನೀಡದೇ ಇರುವ ಕಾರಣಕ್ಕೆ ನನ್ನ ಹಲವು ವಿದ್ಯಾರ್ಥಿನಿಯರು ಎಲ್ಲರೊಂದಿಗೆ ಸ್ಪರ್ಧಿಸಬೇಕಾದ ಅನಿವಾರ್ಯ ಎದುರಾಗಿದೆ ಪ್ರೊ.ಎಂ.ವಿಶ್ವನಾಥ್‌ ನಿಕಟಪೂರ್ವ ಕುಲಸಚಿವ ರಾಯಚೂರು ವಿಶ್ವವಿದ್ಯಾಲಯಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದರೂ ಪ್ರಯೋಜನ ಆಗಿಲ್ಲ. ನಿಯಮಗಳ ಅನ್ವಯವೇ ರೋಸ್ಟರ್‌ ಮಾಡಿದ್ದೇನೆ ಬದಲಾವಣೆ ಸಾಧ್ಯವಿಲ್ಲ ಎನ್ನುತ್ತಾರೆವಿಷಯವಾರು ಮೀಸಲಾತಿ ನೀಡುವುದನ್ನು ತಪ್ಪಿಸಲು ಕಾನೂನಾತ್ಮಕ ತೊಡಕು ಇದ್ದು ಅದನ್ನು ನಿವಾರಿಸಲು ರಾಜ್ಯದ ಯಾವ ಸರ್ಕಾರಗಳು ಪ್ರಯತ್ನ ಮಾಡಿಲ್ಲ. 'ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ವಿಷಯವಾರು ಮೀಸಲಾತಿ ಅನ್ವಯ ಮಾಡಬೇಕು' ಎಂದು ಕೋರಿ 1981ರಲ್ಲಿ ರಾಜ್ಯ ಹೈಕೋರ್ಟ್‌ಗೆ ರಿಟ್‌ ಅರ್ಜಿ (13096/83) ಸಲ್ಲಿಕೆಯಾಗಿತ್ತು. ಅದನ್ನು ಹೈಕೋರ್ಟ್‌ ಮಾನ್ಯ ಮಾಡಿತ್ತು. ರಾಜ್ಯ ಸರ್ಕಾರ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್‌ ಹೈಕೋರ್ಟ್‌ ಆದೇಶವನ್ನೇ ಎತ್ತಿ ಹಿಡಿದಿತ್ತು. ರಾಜ್ಯದಲ್ಲಿ ಈಗಲೂ ಅದನ್ನೇ ಪಾಲಿಸಲಾಗುತ್ತಿದೆ. ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ (ವರ್ಗಾವಣೆಗೆ ಅವಕಾಶವಿಲ್ಲದ ಹುದ್ದೆಗಳು) ವಿಷಯವಾರು ಮೀಸಲಾತಿ ಅನ್ವಯ ಮಾಡಬಾರದು ಎಂದು 2006ರಲ್ಲಿ ಯುಜಿಸಿ ನಿಯಮಾವಳಿ ರೂಪಿಸಿತ್ತು. ಇದರ ವಿರುದ್ಧವೂ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್‌ ಅರ್ಜಿಯನ್ನು 2019ರಲ್ಲಿ ಮಾನ್ಯ ಮಾಡಿತ್ತು. 'ವಿಷಯವಾರು ಮೀಸಲಾತಿ'ಯನ್ನು ನಿಷೇಧಿಸುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರವು 2019ರಲ್ಲೇ ಜಾರಿಗೆ ತಂದಿತು. ಹಲವು ರಾಜ್ಯ ಸರ್ಕಾರಗಳು ಇದನ್ನು ಪಾಲಿಸಿರಲಿಲ್ಲ. ಹೀಗಾಗಿ 2024ರ ಏಪ್ರಿಲ್‌ನಲ್ಲಿ ಎಲ್ಲ ಕೇಂದ್ರೀಯ ರಾಜ್ಯ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದು ನಿಯಮ ಪಾಲಿಸುವಂತೆ ಯುಜಿಸಿ ಸೂಚಿಸಿತು. ಆದರೆ 1981ರ ಹೈಕೋರ್ಟ್‌ ಆದೇಶ ಮತ್ತು ಅದನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ ಆದೇಶವನ್ನು ತೆರವು ಮಾಡಿಸಿಕೊಳ್ಳದೇ ಇರುವ ಕಾರಣಕ್ಕೆ ಯುಜಿಸಿ ನಿಯಮಗಳನ್ನು ಜಾರಿಗೆ ತರಲಾಗಿಲ್ಲ.ತೊಡಕು ನಿವಾರಿಸದ ರಾಜ್ಯ ಸರ್ಕಾರ

Comentarios


bottom of page