top of page

'ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಆಡುವ ವಿಧಾನವನ್ನೇ ಬದಲಿಸಿದರು': RCB ಸ್ಟಾರ್ ಆಟಗಾರನ ಕುರಿತು ಪಂಜಾಬ್ ಕೋಚ್ ಶ್ಲಾಘನೆ

  • Writer: new waves technology
    new waves technology
  • May 23
  • 2 min read

2014 ರಿಂದ 2019 ರವರೆಗೆ, ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. 63.65 ಸರಾಸರಿಯೊಂದಿಗೆ 5,347 ರನ್ ಗಳಿಸಿದರು. ಟಿ 20 ಲೀಗ್‌ಗಳ ಪ್ರಾಬಲ್ಯವಿರುವ ಯುಗದಲ್ಲಿಯೂ ಅವರ ತೀವ್ರತೆ, ಫಿಟ್‌ನೆಸ್ ಟೆಸ್ಟ್ ಕ್ರಿಕೆಟ್‌ಗೆ ಅವರ ಬದ್ಧತೆಯನ್ನು ತೋರಿಸುತ್ತಿತ್ತು.

ವಿರಾಟ್ ಕೊಹ್ಲಿ ಅವರೊಂದಿಗೆ ಮೈದಾನದಲ್ಲಿ ಹಲವು ಕ್ಷಣಗಳನ್ನು ಕಳೆದಿದ್ದ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಬ್ರಾಡ್ ಹ್ಯಾಡಿನ್, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಅನ್ನು ಮರು ವ್ಯಾಖ್ಯಾನಿಸಿದ 'ಒಂದು ಪೀಳಿಗೆಯ ಆಟಗಾರ' ಎಂದು ಶ್ಲಾಘಿಸಿದ್ದಾರೆ. ಈಗ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನ ಸಹಾಯಕ ಕೋಚ್ ಆಗಿರುವ ಹ್ಯಾಡಿನ್, ಟೆಸ್ಟ್ ಕ್ರಿಕೆಟ್ ಕುರಿತು ಕೊಹ್ಲಿ ಅವರಿಗಿದ್ದ ಉತ್ಸಾಹ ಮತ್ತು ಪರಂಪರೆಯನ್ನು ಪ್ರತಿಬಿಂಬಿಸಿದ್ದಾರೆ.

ಅವರ ಯಶಸ್ಸಿಗೆ ಪ್ರಮುಖ ಕಾರಣವೆಂದರೆ, ಪರಿಸ್ಥಿತಿ ಏನೇ ಇರಲಿ ಅವರು ಗೆಲ್ಲಲು ಮತ್ತು ಕಠಿಣ ಹೋರಾಟ ನೀಡಲು ಬಯಸಿದ್ದರು ಎಂದು ಹ್ಯಾಡಿನ್ TOI ಗೆ ತಿಳಿಸಿದರು. 'ಕೊಹ್ಲಿ ತನ್ನನ್ನು ತಾನು ದೈಹಿಕವಾಗಿ ಹೇಗೆ ಪ್ರಸ್ತುತಪಡಿಸಿಕೊಂಡರು ಎಂಬುದರ ಮೂಲಕ ಆಟದ ವಿಧಾನವನ್ನು ಬದಲಾಯಿಸಿದರು. ಅವರಿಗಿದ್ದ ಅದಮ್ಯ ಉತ್ಸಾಹ ನನ್ನನ್ನು ಆಕರ್ಷಿಸಿತು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಂತಹ ತಂಡಗಳ ವಿರುದ್ಧ ವಿರುದ್ಧ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅವರು ಆ ಸ್ವರೂಪವನ್ನು ತೊರೆದರೆ, ಅದು ದೊಡ್ಡ ನಷ್ಟವೇ ಸರಿ. ಏಕೆಂದರೆ, ಅವರು ನಿಜವಾಗಿಯೂ ಮಿಂಚಿಂದು ಅಲ್ಲಿಯೇ' ಎಂದು ಅವರು ಹೇಳಿದರು.

2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೊಹ್ಲಿ, 123 ಪಂದ್ಯಗಳಿಂದ 46.85 ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. ಈ ಪೈಕಿ 30 ಶತಕಗಳು ಮತ್ತು 31 ಅರ್ಧಶತಕಗಳು ಸೇರಿವೆ. ಈ ಮೂಲಕ ಟೆಸ್ಟ್‌ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ನಿವೃತ್ತರಾದರು. 2014ರ ಅಡಿಲೇಡ್ ಟೆಸ್ಟ್ ಸಮಯದಲ್ಲಿ ನಾಟಕೀಯ ರೀತಿಯಲ್ಲಿ ಪ್ರಾರಂಭವಾದ ಅವರ ನಾಯಕತ್ವವು ಆಕ್ರಮಣಕಾರಿ, ಫಿಟ್‌ನೆಸ್-ಚಾಲಿತ ಭಾರತೀಯ ಕ್ರಿಕೆಟ್‌ನ ಹೊಸ ಯುಗಕ್ಕೆ ನಾಂದಿ ಹಾಡಿತು. ಅವರು ಆ ಪಂದ್ಯದಲ್ಲಿ ಅವಳಿ ಶತಕಗಳನ್ನು (115 ಮತ್ತು 141) ಗಳಿಸಿದರು.

2014 ರಿಂದ 2019 ರವರೆಗೆ, ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. 63.65 ಸರಾಸರಿಯೊಂದಿಗೆ 5,347 ರನ್ ಗಳಿಸಿದರು. ಟಿ 20 ಲೀಗ್‌ಗಳ ಪ್ರಾಬಲ್ಯವಿರುವ ಯುಗದಲ್ಲಿಯೂ ಅವರ ತೀವ್ರತೆ, ಫಿಟ್‌ನೆಸ್ ಟೆಸ್ಟ್ ಕ್ರಿಕೆಟ್‌ಗೆ ಅವರ ಬದ್ಧತೆಯನ್ನು ತೋರಿಸುತ್ತಿತ್ತು. ಕೊಹ್ಲಿ 68 ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದರು. ಇದರಲ್ಲಿ 40ರಲ್ಲಿ ಗೆಲುವು ಸಾಧಿಸಿದರು.

36ನೇ ವಯಸ್ಸಿನಲ್ಲಿ, ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ಅನುಪಸ್ಥಿತಿಯು ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಮಾತ್ರವಲ್ಲದೆ ಜಾಗತಿಕ ಟೆಸ್ಟ್ ರಂಗದಲ್ಲಿಯೂ ಒಂದು ಶೂನ್ಯವನ್ನು ಸೃಷ್ಟಿಸುತ್ತದೆ. 2020ರ ನಂತರ ಅವರ ಪ್ರದರ್ಶನ ಅಷ್ಟೇನು ಉತ್ತಮವಾಗಿಲ್ಲದಿದ್ದರೂ, 2024ರಲ್ಲಿ ಪರ್ತ್‌ನಲ್ಲಿ ಶತಕ ಬಾರಿಸಿದ್ದು, ಅಭಿಮಾನಿಗಳಿಗೆ ಮೊದಲಿನ ವಿರಾಟ್ ಕೊಹ್ಲಿಯನ್ನು ನೆನಪಿಸಿತು. ಬ್ರಾಡ್ ಹ್ಯಾಡಿನ್ ಪ್ರಕಾರ, 'ಟೆಸ್ಟ್ ಕ್ರಿಕೆಟ್‌ನಲ್ಲಿ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳಲಾಗುವುದು'. ಐದು ದಿನಗಳ ಪಂದ್ಯದಲ್ಲಿ ಕೊಹ್ಲಿಯ ಪ್ರಭಾವವನ್ನು ಕೆಲವರು ಮಾತ್ರ ಹೊಂದಿದ್ದಾರೆ ಎಂದರು.

Comments


bottom of page