ವೈವಾಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಪತಿಗೆ ವಿನಾಯಿತಿ; ವಿಚಾರಣೆ ಮುಂದೂಡಿದ CJI ಚಂದ್ರಚೂಡ್ ಪೀಠ!
- new waves technology
- Oct 24, 2024
- 1 min read
ಪತಿ ತನ್ನ ಅಪ್ರಾಪ್ತ ವಯಸ್ಕಳಲ್ಲದ ಹೆಂಡತಿಯನ್ನು ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಒತ್ತಾಯಿಸಿದರೆ ಅದು ಅಪರಾಧವಲ್ಲ ಎಂದು ವಿನಾಯಿತಿ ನೀಡುತ್ತದೆ.

ನವದೆಹಲಿ: ವೈವಾಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಗಂಡಂದಿರಿಗೆ ವಿನಾಯಿತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಬುಧವಾರ ನಾಲ್ಕು ವಾರಗಳ ಕಾಲ ಅಂದರೆ ನವೆಂಬರ್ 10ಕ್ಕೆ ಮುಂದೂಡಿದ್ದಾರೆ.
ದೀಪಾವಳಿ ರಜೆಗೆ ಸುಪ್ರೀಂ ಕೋರ್ಟ್ ಮುಚ್ಚುವ ಮೊದಲು ವಿಚಾರಣೆ ಮುಕ್ತಾಯಗೊಳ್ಳದಿದ್ದರೆ ವಿಚಾರಣೆಯನ್ನು ಪೂರ್ಣಗೊಳಿಸಲು ಮತ್ತು ತೀರ್ಪು ನೀಡಲು ಸಾಧ್ಯವಾಗುವುದಿಲ್ಲ ಎಂದು ಸಿಜೆಐ ಚಂದ್ರಚೂಡ್ ಇದೇ ವೇಳೆ ಹೇಳಿದರು.
ಅಂತೆಯೇ ಈ ವಿಚಾರದಲ್ಲಿ ಸಲ್ಲಿಕೆ ಮಾಡಲು ಸಂಬಂಧಪಟ್ಟ ಎಲ್ಲ ವಕೀಲರಿಗೆ ಕಾಲಾವಕಾಶ ನೀಡಬೇಕು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅಭಿಪ್ರಾಯಪಟ್ಟರು.
ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ನಾಲ್ಕು ವಾರಗಳ ನಂತರ ಮತ್ತೊಂದು ಪೀಠದಿಂದ ವಿಚಾರಣೆಗೆ ಅರ್ಜಿಗಳನ್ನು ನಿಗದಿಪಡಿಸಿತು. ಇದು ಅಕ್ಟೋಬರ್ 17 ರಂದು ವಿಚಾರಣೆಯನ್ನು ಪ್ರಾರಂಭಿಸಿತ್ತು.
ಭಾರತೀಯ ದಂಡ ಸಂಹಿತೆ (IPC) ಮತ್ತು ಭಾರತೀಯ ನ್ಯಾಯ ಸಂಹಿತಾ (BNS) ಅತ್ಯಾಚಾರದ ಅಪರಾಧಕ್ಕಾಗಿ ಪತಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡುತ್ತದೆ. ಪತಿ ತನ್ನ ಅಪ್ರಾಪ್ತ ವಯಸ್ಕಳಲ್ಲದ ಹೆಂಡತಿಯನ್ನು ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಒತ್ತಾಯಿಸಿದರೆ ಅದು ಅಪರಾಧವಲ್ಲ ಎಂದು ವಿನಾಯಿತಿ ನೀಡುತ್ತದೆ.
IPC ಯ ಸೆಕ್ಷನ್ 375 ರ ವಿನಾಯಿತಿ ಷರತ್ತಿನ ಅಡಿಯಲ್ಲಿ, ಪುರುಷನು ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿದಾಗ ಆಕೆ ಅಪ್ರಾಪ್ತಳಾಗಿಲ್ಲದೇ ಹೋದರೆ ಅದು ಅತ್ಯಾಚಾರವಲ್ಲ ಎಂದು ಹೇಳುತ್ತದೆ.
ವೈವಾಹಿಕ ಅತ್ಯಾಚಾರ ಅಪರಾಧೀಕರಣ: ಕೇಂದ್ರ ಸರ್ಕಾರದ ವಿರೋಧ! ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆ
ಹೊಸ ಕಾನೂನಿನ ಅಡಿಯಲ್ಲಿಯೂ ಸಹ, ಸೆಕ್ಷನ್ 63 (2) ಸಹ ಅತ್ಯಾಚಾರಕ್ಕೆ ವಿನಾಯಿತಿ ನೀಡುತ್ತದೆ. ಹೆಂಡತಿ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವನವಳಾಗದೇ ಇದ್ದರೆ ಪುರುಷನು ತನ್ನ ಸ್ವಂತ ಹೆಂಡತಿಯೊಂದಿಗೆ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳು ನಡೆಸಿದರೆ ಅದು ಅತ್ಯಾಚಾರವಲ್ಲ ಎಂದು ಹೇಳುತ್ತದೆ"
ವೇಗವಾಗಿ ಬೆಳೆಯುತ್ತಿರುವ ಮತ್ತು ನಿರಂತರವಾಗಿ ಬದಲಾಗುತ್ತಿರುವ ಸಾಮಾಜಿಕ ಮತ್ತು ಕೌಟುಂಬಿಕ ರಚನೆಯಲ್ಲಿ, ತಿದ್ದುಪಡಿ ಮಾಡಲಾದ ನಿಬಂಧನೆಗಳ ದುರುಪಯೋಗವನ್ನು ತಳ್ಳಿಹಾಕಲಾಗುವುದಿಲ್ಲ. ಏಕೆಂದರೆ ಒಪ್ಪಿಗೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಸಾಬೀತುಪಡಿಸಲು ವ್ಯಕ್ತಿಗೆ ಕಷ್ಟವಾಗುತ್ತದೆ ಎಂದು ಕೇಂದ್ರ ಸರ್ಕಾರ ನ್ಯಾಯಪೀಠಕ್ಕೆ ಹೇಳಿದೆ.
Comments